For Quick Alerts
ALLOW NOTIFICATIONS  
For Daily Alerts
 

'ನಾನು ಕ್ರೀಸ್‌ ಒಳಗೆ ಇದ್ದೇನೆ' ಎಂದು ಅಶ್ವಿನ್ ಕಾಲೆಳೆದ ಜಾಸ್ ಬಟ್ಲರ್

Jos buttler

2022ರ ಐಪಿಎಲ್ ಸೀಸನ್‌ನಲ್ಲಿ ರವಿಚಂದ್ರನ್ ಅಶ್ವಿನ್‌, ಇಂಗ್ಲೆಂಡ್‌ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದಾರೆ. ರಾಜಸ್ತಾನ್ ರಾಯಲ್ಸ್ ಅಶ್ವಿನ್‌ರನ್ನ 5 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿ ಮಾಡಿದೆ.

ಐಪಿಎಲ್‌ನಲ್ಲಿ ಜಾಸ್‌ ಬಟ್ಲರ್ ಮತ್ತು ಅಶ್ವಿನ್ ನಡುವಿನ ವಿವಾದವನ್ನ ಮರೆಯಲು ಸಾಧ್ಯವಿಲ್ಲ. ಆದ್ರೀಗ ಈ ಇಬ್ಬರು ಆಟಗಾರರು ಒಟ್ಟಾಗಿಯೇ ಒಂದೇ ತಂಡದ ಪರ ಆಡಲಿದ್ದಾರೆ.

2019ರ ಐಪಿಎಲ್ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲಿಂಗ್ ಮಾಡ್ತಿದ್ದ ರವಿಚಂದ್ರನ್ ಅಶ್ವಿನ್ ಎದುರಾಳಿ ನಾನ್ ಸ್ಟ್ರೈಕ್‌ನಲ್ಲಿ ಬ್ಯಾಟ್ಸ್‌ಮನ್‌ ಜಾಸ್‌ ಬಟ್ಲರ್‌ರನ್ನ ರನೌಟ್‌ ಮಾಡಿದ್ದರು. ವಿವಾದಾತ್ಮಕ ಶೈಲಿಯಲ್ಲಿ (ಮಂಕಡ್) ರವಿಚಂದ್ರನ್ ಅಶ್ವಿನ್ ರಾಜಸ್ತಾನ್ ಬ್ಯಾಟ್ಸ್‌ಮನ್‌ರನ್ನ ಔಟ್ ಮಾಡಿದ್ದರು. ಈ ನಿರ್ಧಾರ ಐಪಿಎಲ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ಆದ್ರೀಗ ರಾಯಲ್ಸ್‌ಗೆ ಅಶ್ವಿನ್ ಆಯ್ಕೆಯಾದ ನಂತರ ಬಟ್ಲರ್‌ನೊಂದಿಗೆ ಆರ್‌ಆರ್ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಅಶ್ವಿನ್ ಹೇಳಿದ್ದಾರೆ.

"ಹೇ ಆಶ್, ಜೋಸ್ ಹಿಯರ್. ಚಿಂತಿಸಬೇಡಿ, ನಾನು ಕ್ರೀಸ್‌ನ ಒಳಗಿದ್ದೇನೆಲ್ಲಿದ್ದೇನೆ. ರಾಯಲ್ಸ್‌ಗಾಗಿ ನಿಮ್ಮನ್ನು ಗುಲಾಬಿ ಬಣ್ಣದ ಜರ್ಸಿಯಲ್ಲಿ ನೋಡಲು ಕಾಯಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇನೆ. ಹಲ್ಲಾ ಬೋಲ್, "ಎಂದು ಬಟ್ಲರ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಐಪಿಎಲ್ ಮೆಗಾ ಹರಾಜಿನ ಮೊದಲ ದಿನದಂದು ರಾಜಸ್ತಾನ್ ರಾಯಲ್ಸ್‌ ಹರಾಜು ಪಟ್ಟಿ
ಮೆಗಾ ಹರಾಜಿನ 1 ನೇ ದಿನದಂದು, ರಾಜಸ್ಥಾನ ರಾಯಲ್ಸ್ (RR) ತಮ್ಮ ತಂಡವನ್ನು ಬಲಪಡಿಸಲು ಭಾರಿ ಹಣವನ್ನು ಚೆಲ್ಲಿತು. ರಾಜಸ್ತಾನ್ ರಾಯಲ್ಸ್ ಖರೀದಿ ಮಾಡಿದ ಆಟಗಾರರ ಹೆಸರು ಮತ್ತು ಮೊತ್ತ ಈ ಕೆಳಗಿನಂತಿದೆ

ಪ್ರಸಿದ್ಧ ಕೃಷ್ಣ : 10 ಕೋಟಿ ರೂಪಾಯಿ

ಶಿಮ್ರಾನ್ ಹೆಟ್ಮೇಯರ್: 8.50 ಕೋಟಿ ರೂಪಾಯಿ

ಟ್ರೆಂಟ್‌ ಬೌಲ್ಟ್‌: 8 ಕೋಟಿ ರೂಪಾಯಿ

ದೇವದತ್ ಪಡಿಕ್ಕಲ್: 7.75 ಕೋಟಿ ರೂಪಾಯಿ

ಯುಜವೇಂದ್ರ ಚಹಾಲ್: 6.5 ಕೋಟಿ ರೂಪಾಯಿ

ಆರ್‌. ಅಶ್ವಿನ್: 5 ಕೋಟಿ ರೂಪಾಯಿ

ರಿಯಾನ್ ಪರಾಗ್: 3.80 ಕೋಟಿ ರೂಪಾಯಿ

ಕೆ.ಸಿ ಕರಿಯಪ್ಪ: 30 ಲಕ್ಷ ರೂಪಾಯಿ

Story first published: Sunday, February 13, 2022, 11:59 [IST]
Other articles published on Feb 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+