Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2026: ಎಂಎಸ್‌ ಧೋನಿ ಕ್ಯಾಂಪ್ ಬಿಡಲು ಸಿದ್ಧರಾಗಿದ್ದಾರಾ ಪಟ್ಟದ ಶಿಷ್ಯ?

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ತಯಾರಿಗಳು ಭರದಿಂದ ಸಾಗುತ್ತಿವೆ. ಈಗಾಗಲೇ ಹಲವು ತಂಡಗಳು ಬೇರೆ ತಂಡಗಳ ಆಟಗಾರರ ಮೇಲೂ ಕಣ್ಣು ನೆಟ್ಟಿದೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಸಂಜು ಸ್ಯಾಮ್ಸನ್‌ ಆಡುವುದು ಅನುಮಾನ ಎಂಬ ಸುದ್ದಿಗಳು ಹೊರ ಬರುತ್ತಿವೆ. ಈ ಮಧ್ಯೆ ಸಂಜು ತಮ್ಮನ್ನು ಕೈ ಬಿಡುವಂತೆ ಮ್ಯಾನೇಜ್ಮೆಂಟ್‌ ಹತ್ತಿರ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈಗ ಮತ್ತೊಂದು ತಂಡದಿಂದ ಮತ್ತೊಬ್ಬ ಸ್ಟಾರ್ ಆಟಗಾರ ತಂಡ ತೊರೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿವೆ. ಅಂದಹಾಗೆ ಆ ಸ್ಟಾರ್ ಪ್ಲೇಯರ್‌ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಟೀಮ್ ಇಂಡಿಯಾದ ಪರ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಬಾರ್ಡರ್‌ ಗವಾಸ್ಕರ್ ಟ್ರೋಫಿಯ ವೇಳೆ ನಿವೃತ್ತರಾದ ರವಿಚಂದ್ರನ್‌ ಅಶ್ವಿನ್‌ ಮುಂದಿನ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಆದರೆ ಇವರು ತಂಡವನ್ನು ಬಿಡುತ್ತಾರೋ ಇಲ್ಲವೋ ಎಂಬ ಬಗ್ಗೆ ಆಟಗಾರರ ರಿಲೀಸ್‌ ಲೀಸ್ಟ್‌ ಹೊರ ಬಿದ್ದಾಗಲೇ ತಿಳಿಯುತ್ತದೆ. ಅಶ್ವಿನ್ ಮುಂದಿನ ಸೀಸನ್‌ಗೆ ಮೊದಲು ಸಿಎಸ್‌ಕೆ ತೊರೆಯುವ ಮನಸ್ಸು ಮಾಡಿದ್ದಾರೆ.

Doubt over Ravichandran Ashwin s future with Chennai Super Kings ahead of IPL 2026

ತಮ್ಮ ನೆಚ್ಚಿನ ತಂಡ ಚೆನ್ನೈ ಸೂಪರ್‌ ಕಿಂಗ್ಸ್ ಬಿಡಲು ಅಶ್ವಿನ್‌ ಸಿದ್ಧರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಅಶ್ವಿನ್ ಹಾಗೂ ಚೆನ್ನೈ ತಂಡ ಇನ್ನು ಯಾವುದೇ ಸ್ಪಷ್ಟನೇ ನೀಡಿಲ್ಲ. ಈ ಬಗ್ಗೆ ಅಶ್ವಿನ್‌, ಸಿಎಸ್‌ಕೆ ಮ್ಯಾನೇಜ್ಮೆಂಟ್‌ಗೆ ಈಗಾಗಲೇ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಸಿಎಸ್‌ಕೆ ಅಧಿಕಾರಿಗಳ ಒಂದು ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಎಂಎಸ್‌ ಧೋನಿ, ಹಾಲಿ ನಾಯಕ ರುತುರಾಜ್ ಗಾಯಕ್ವಾಡ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಮುಂದಿನ ಆವೃತ್ತಿಯ ರೂಪು ರೇಷೆಗಳ ಬಗ್ಗೆ ಚರ್ಚಿಸಾಲಗಿದೆ. ಕಳೆದ ಬಾರಿಯ ಐಪಿಎಲ್‌ ಹರಾಜಿನಲ್ಲಿ ಅಶ್ವಿನ್‌ ಅವರನ್ನು ಚೆನ್ನೈ ತಂಡ 9.75 ಕೋಟಿ ರೂ ನೀಡಿ ಖರೀದಿಸಿತ್ತು.

ಐಪಿಎಲ್‌ನಲ್ಲಿ ಅಶ್ವಿನ್‌ ಪ್ರದರ್ಶನ

ಕಳೆದ ಸೀಸನ್‌ನಲ್ಲಿ ಅಶ್ವಿನ್ ಅವರ ಪ್ರದರ್ಶನ ನಿರೀಕ್ಷೆಯಂತೆ ಇರಲಿಲ್ಲ. ಇವರು ಕಳೆದ ಬಾರಿಯ ಐಪಿಎಲ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 40.43 ರ ಸರಾಸರಿಯಲ್ಲಿ ಕೇವಲ 7 ವಿಕೆಟ್‌ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದರು. ಅಲ್ಲದೆ ಇವರು ಬ್ಯಾಟಿಂಗ್‌ನಲ್ಲಿ ಕೇವಲ 33 ರನ್‌ ಸಿಡಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇವರು ಒಟ್ಟಾರೆ ಆಡಿದ 221 ಪಂದ್ಯಗಳಲ್ಲಿ 187 ವಿಕೆಟ್‌ ಸಿಡಿಸಿದ್ದಾರೆ.

Story first published: Saturday, August 9, 2025, 8:00 [IST]
Other articles published on Aug 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+