'ಡ್ರೀಮ್11 ಐಪಿಎಲ್ 2020' ವಿಭಿನ್ನ ಪ್ರೋಮೋ ಬಿಡುಗಡೆ: ವೈರಲ್ ವೀಡಿಯೊ

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಇನ್ನು 2 ವಾರಗಳು ಬಾಕಿ ಉಳಿದಿರುವಾಗ ಐಪಿಎಲ್ ಟೈಟಲ್ ಸ್ಪಾನ್ಸರರ್ ಡ್ರೀಮ್11, 2020ರ ಐಪಿಎಲ್ ಪ್ರೋಮೋ ಬಿಡುಗಡೆ ಮಾಡಿದೆ. ಈ ಬಾರಿಯ ಐಪಿಎಲ್ ಪ್ರೋಮೋ ಎಲ್ಲಾ ಆವೃತ್ತಿಯ ಪ್ರೋಮೋಗಿಂತಲೂ ವಿಭಿನ್ನವಾಗಿದೆ.
ಏಕ್ ಸಾತ್ ವಾಲಿ ಬಾತ್ (#EkSaathWaaliBaat-ಇದು ಎಲ್ಲರ ವಿಷಯ) ಎನ್ನುವ ಹ್ಯಾಷ್ ಟ್ಯಾಗ್‌ನೊಂದಿಗೆ 13ನೇ ಆವೃತ್ತಿಯ ಐಪಿಎಲ್ ಪ್ರೋಮೋ ಬಿಡುಗಡೆಗೊಳಿಸಲಾಗಿದೆ. ಕೊರೊನಾವೈರಸ್‌ಗೆ ಸಂಬಂಧಿಸಿರುವ ವಿಚಾರ ಪ್ರೋಮೋದಲ್ಲಿರುವುದು ವಿಶೇಷ.
ಲಾಕ್‌ಡೌನ್ ಟೈಮಲ್ಲಿ ಕಷ್ಟದಲ್ಲಿದ್ದವರಿಗೆ ಆಹಾರ ವಿತರಿಸಿದವರು, ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗ ಹುಡುಕಲು ನೆರವಾದವರು, ವೈದ್ಯ ಸೇವೆಯ ಮೂಲಕ ಕೊರೊನಾವಿರುದ್ಧದ ಹೋರಾಟಕ್ಕೆ ಸಾತ್ ನೀಡಿದವರು ಹೀಗೆಲ್ಲ ಝಲಕ್ ಬಳಿಕ ಐಪಿಎಲ್ ಜೋಷಿನ ಚಿತ್ರಣ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರದ ಮಹತ್ವಕ್ಕೂ ಪ್ರೋಮೋ ಬೆಳಕು ಚೆಲ್ಲಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರಗೆಗೆ ಐಪಿಎಲ್ ನಡೆಯಲಿದೆ. ಪಂದ್ಯಗಳು 7.30 pmಗೆ ಆರಂಭವಾಗಲಿವೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications