ಬುಧವಾರ, ಜುಲೈ 5ರಂದು ಬೆಂಗಳೂರಿನ ಆಲೂರು ಮೈದಾನದಲ್ಲಿ ಆರಂಭವಾಗಲಿರುವ 2023ರ ದುಲೀಪ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ಮತ್ತು ಪೂರ್ವ ವಲಯ ತಂಡಗಳು ಮುಖಾಮುಖಿಯಾಗಲಿವೆ.
ಕೇಂದ್ರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ತಂಡದ ಪರ ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಈ ಬ್ಯಾಟರ್‌ಗಳಿಗೆ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್ ಆಗಲಿದೆ.

ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸಾಧಾರಣವಾಗಿ ಔಟಾದ ಕಾರಣ, ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತ ತಂಡದಿಂದ ಚೇತೇಶ್ವರ ಪೂಜಾರ ಅವರನ್ನು ಕೈಬಿಡಲಾಗಿದೆ. ಆದರೆ, ದುಲೀಪ್ ಟ್ರೋಫಿ ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.
ಇನ್ನು ಪೃಥ್ವಿ ಶಾ ಮತ್ತು ಸರ್ಫರಾಜ್ ಕೂಡ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದು, ಆದರೆ ಭಾರತದ ತಂಡದಿಂದ ಹೊರಗುಳಿಯಲು ಆಟದ ಪ್ರದರ್ಶನಕ್ಕಿಂತ ಬೇರೆ ವಿವಾದಗಳು ಕಾರಣವಾಗಿವೆ.

ಪೃಥ್ವಿ ಶಾ ಪ್ರತಿಭಾವಂತ ಆಟಗಾರನಾಗಿದ್ದು, ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಬಾರಿ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.
ಪೃಥ್ವಿ ಶಾ 2018ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕನಾಗಿದ್ದರು. ಅನಂತರ, 23 ವರ್ಷದ ಪೃಥ್ವಿ ಶಾ ಒಟ್ಟು ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಪಂದ್ಯಗಳು ಮತ್ತು ಒಂದು ಟಿ20 ಪಂದ್ಯವನ್ನು ಆಡಿದ್ದಾರೆ.
ಜನವರಿಯಲ್ಲಿ ನಡೆದ ರಣಜಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧ 383 ಎಸೆತಗಳಲ್ಲಿ 379 ರನ್ ಗಳಿಸಿದ ಹೊರತಾಗಿಯೂ ಪೃಥ್ವಿ ಶಾ, ಮೈದಾನದ ಹೊರಗೆ ಅವರ ಅಶಿಸ್ತು ಸಾಮಾನ್ಯವಾಗಿ ಭಾರತ ತಂಡದಿಂದ ಕಡೆಗಣಿಸುವಂತಾಗಿದೆ.
Duleep Trophy 2023: ಈಶಾನ್ಯ ವಲಯ ವಿರುದ್ಧ ಬೃಹತ್ ಗೆಲುವು ಪಡೆದು ಸೆಮಿಸ್ ತಲುಪಿದ ಉತ್ತರ ವಲಯ
ಇದೇ ವೇಳೆ ಸರ್ಫರಾಜ್ ಖಾನ್ ಕೂಡ ಅದೇ ರೀತಿ ಸಾಗುತ್ತಿದ್ದಾರೆ. ದೇಶೀಯ ಟೂರ್ನಿಯಲ್ಲಿ ಸತತ ಎರಡು ಋತುಗಳಲ್ಲಿ 900ಕ್ಕೂ ಹೆಚ್ಚು ರನ್ ಗಳಿಸಿದ ಕೆಲವೇ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25 ವರ್ಷದ ಸರ್ಫರಾಜ್ ಖಾನ್ 79ಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ.
ಅದೇ ರೀತಿ ಶಿವಂ ಮಾವಿ ನಾಯಕತ್ವದ ಕೇಂದ್ರ ವಲಯ ತಂಡದಲ್ಲಿ ಹೆಚ್ಚು ಯುವ ಆಟಗಾರರಿದ್ದು, ಐಪಿಎಲ್ ಸ್ಟಾರ್‌ಗಳಾದ ರಿಂಕು ಸಿಂಗ್, ಧ್ರುವ್ ಜುರೆಲ್, ಅವೇಶ್ ಖಾನ್, ಯಶ್ ಠಾಕೂರ್, ಸೌರಭ್ ಕುಮಾರ್ ಅವರಂತಹ ಆಟಗಾರರನ್ನು ಹೊಂದಿದೆ.
ಕೇಂದ್ರ ವಲಯ: ಶಿವಂ ಮಾವಿ (ನಾಯಕ), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ವಿವೇಕ್ ಸಿಂಗ್, ಹಿಮಾಂಶು ಮಂತ್ರಿ, ಕುನಾಲ್ ಚಂಡೇಲಾ, ಶುಭಂ ಶರ್ಮಾ, ಅಮನ್‌ದೀಪ್ ಖರೆ, ರಿಂಕು ಸಿಂಗ್, ಅಕ್ಷಯ್ ವಾಡ್ಕರ್, ಧ್ರುವ್ ಜುರೆಲ್, ಸೌರಭ್ ಕುಮಾರ್, ಮಾನವ್ ಸತಾರ್, ಸರನ್ಶ್ ಜೈನ್, ಅವೇಶ್ ಖಾನ್, ಯಶ್ ಠಾಕೂರ್.
ಪಶ್ಚಿಮ ವಲಯ: ಪ್ರಿಯಾಂಕ್ ಪಾಂಚಾಲ್ (ನಾಯಕ), ರುತುರಾಜ್ ಗಾಯಕ್ವಾಡ್, ಶ್ರುಯಕುಮಾರ್ ಯಾದವ್, ಚೇತೇಶ್ವರ್ ಪೂಜಾರ, ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಪೃಥ್ವಿ ಶಾ, ಹೆಟ್ ಪಟೇಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಅರ್ಪಿತ್ ವಾಸವಾಡ, ಅತಿತ್ ಸೇಠ್, ಶಮ್ಸ್ ಮುಲಾನಿ, ಯುವರಾಜ್ ದೋಡಿಯಾ, ಧರ್ಮೇಂದ್ರಸಿನ್ಹ್ ಜಡೇಜಾ, ಚೇತನ್ ಸಕರಿಯಾ, ಚಿಂತನ್ ಗಜ, ಅರ್ಜಾನ್ ನಗ್ವಾಸ್ವಾಲ್ಲಾ.