Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND Vs PAK: ಪಂದ್ಯದ ದಿನ ಸ್ವಿಗ್ಗಿಗೆ ಬಿರಿಯಾನಿ, ಕಾಂಡೋಮ್‌ನ ಸುಗ್ಗಿಯೋ ಸುಗ್ಗಿ

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ ಗೆಲುವು ಸಾಧಿಸಿದೆ. ತುಂಬಿ ತುಳುಕುತ್ತಿದ್ದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತವರಿನ ಬೆಂಬಲ ಟೀಮ್ ಇಂಡಿಯಾಗೆ ಭರಪೂರವಾಗಿ ಸಿಕ್ಕಿದೆ.

ಆರಂಭದಲ್ಲಿ ಪಾಕಿಸ್ತಾನದ ಕ್ರಿಕೆಟಿಗರು ಉತ್ತಮ ಲಯದಲ್ಲಿದ್ದರೂ, ಮಿಡಲ್ ಆರ್ಡನ್ ಆಟಗಾರರನ್ನು ಪೆವಲಿಯನಿಗೆ ಕಳುಹಿಸುವಲ್ಲಿ ಭಾರತದ ಬೌಲರ್ ಯಶಸ್ವಿಯಾದರು. ಎರಡನೇ ಶನಿವಾರ ಮತ್ತು ಮಹಾಲಯಾ ಅಮಾವಾಸ್ಯೆಯ ದಿನವಾಗಿದ್ದರಿಂದ ದಾಖಲೆ ಸಂಖ್ಯೆಯ ಟಿವಿ/ಆಪ್ ವೀಕ್ಷಕರನ್ನು ಪಡೆದುಕೊಂಡಿದೆ.

During India And Pakistan Match 250 Biriyanis Ordered Per Minute On Swiggy


ಇದೇ ರೀತಿ ಸ್ವಿಗ್ಗಿ ಕೂಡಾ ಪಂದ್ಯದ ವೇಳೆ ದಾಖಲೆಯ ವಹಿವಾಟನ್ನು ನಡೆಸಿದೆ. ಪಂದ್ಯದ ಆರಂಭದಿಂದ ಕೊನೆಯ ವರೆಗೆ ಪ್ರತಿ ನಿಮಿಷಕ್ಕೆ 250ಕ್ಕೂ ಹೆಚ್ಚು ಬಿರಿಯಾನಿ ಆರ್ಡರ್ ಅನ್ನು ಸ್ವೀಕರಿಸಲಾಗಿದೆ ಎಂದು ಸ್ವಿಗ್ಗಿ (Swiggy) ಹೇಳಿದೆ.

ಇದಲ್ಲದೇ ಲೇಸ್ ಪ್ಯಾಕೆಟ್ ಗಳ ಆರ್ಡರ್ ಕೂಡಾ ಜೋರಾಗಿತ್ತು ಎಂದು ಸ್ವಿಗ್ಗಿ ಸಂಸ್ಥೆ ಟ್ವೀಟ್ ಮಾಡಿದೆ. 10,916 ನೀಲಿ ಪ್ಯಾಕೆಟಿನ ಲೇಸ್ ಮತ್ತು 8,504 ಹಸಿರು ಕಲರಿನ ಲೇಸ್ ಪ್ಯಾಕೆಟ್ ಈ ಅವಧಿಯಲ್ಲಿ ಬಿಕರಿಯಾಗಿದೆ.

ಮತ್ತೊಂದು ಗಮನಿಸಬೇಕಾದ ವಿಚಾರ ಏನಂದರೆ, ಪಂದ್ಯ ಮುಗಿಯುವಷ್ಟರಲ್ಲಿ 3,509 ಕಾಂಡೋಮ್ ಆರ್ಡರ್ ಅನ್ನು ಕೂಡಾ ಸ್ವೀಕರಿಸಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. ಆರ್ಡರ್ ಬಂದ ಲೇಸ್ ಪ್ಯಾಕೆಟ್ ನಲ್ಲಿ ಕೂಡಾ ಬ್ಲೂ ಮೇಲುಗೈ ಸಾಧಿಸಿದೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.

ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ 191 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಅನ್ನು ಕಳೆದುಕೊಂಡಿತ್ತು. ಇದರ ಬೆನ್ನತ್ತಿದ್ದ ಟೀಮ್ ಇಂಡಿಯಾ, ಇನ್ನೂ 19 ಓವರ್ ಇರುವಾಗಲೇ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

Story first published: Sunday, October 15, 2023, 9:36 [IST]
Other articles published on Oct 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+