Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Dushmantha Chameera: ಸೂಪರ್‌ಮ್ಯಾನ್‌ನಂತೆ ಫ್ಲೇಯಿಂಗ್ ಕ್ಯಾಚ್ ಹಿಡಿದ ದುಷ್ಮಂತ ಚಮೀರ

ಅರುಣ್ ಜೀಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2025 ರ 48ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಿತು. ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ ನಿಗದಿತ 20 ಓವರ್‍‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವನ್ನು ಕೆಕೆಆರ್ 14 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ನಲ್ಲಿ ಉಳಿಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಕೋಲ್ಕತ್ತಾ ತಂಡದ ಇನ್ನಿಂಗ್ಸ್ ಸಮಯದಲ್ಲಿ ಮೈದಾನದಲ್ಲಿ ಡೆಲ್ಲಿ ತಂಡದಿಂದ ಅತ್ಯುತ್ತಮ ಫೀಲ್ಡಿಂಗ್ ಕಂಡುಬಂದಿತು.

ಡೆಲ್ಲಿ ತಂಡದ ವೇಗದ ಬೌಲರ್ ದುಷ್ಮಂತ ಚಮೀರ ಸೂಪರ್‌ಮ್ಯಾನ್‌ನಂತೆ ಜಿಗಿದು ಅದ್ಭುತ ಫ್ಲೇಯಿಂಗ್ ಕ್ಯಾಚ್ ಹಿಡಿದರು. ದುಷ್ಮಂತ ಚಾಮಿರ ಹಿಡಿದ ಫ್ಲೈಯಿಂಗ್ ಕ್ಯಾಚ್ ನೋಡಿ ಮೈದಾನದಲ್ಲಿ ನೆರೆದಿದ್ದ ಎಲ್ಲಾ ಅಭಿಮಾನಿಗಳು ಬೆರಗಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Dushmantha Chameera takes a flying catch like Superman in IPL 2025 DC vs KKR Match

ಈ ಘಟನೆ ಕೆಕೆಆರ್ ಇನ್ನಿಂಗ್ಸ್‌ನ ಕೊನೆಯ ಓವರ್‍‌ನಲ್ಲಿ ನಡೆಯಿತು. ಡೆಲ್ಲಿ ಪರ ಕೊನೆಯ ಓವರ್ ಮಾಡುವ ಜವಾಬ್ದಾರಿಯನ್ನು ಮಿಚೆಲ್ ಸ್ಟಾರ್ಕ್ ಹೊತ್ತುಕೊಂಡರು. ಈ ಓವರ್‍‌ನ ಮೂರನೇ ಎಸೆತದಲ್ಲಿ ರೋವ್‌ಮನ್ ಪೊವೆಲ್ ಅವರ ವಿಕೆಟ್ ಪತನವಾಯಿತು. ನಂತರ ಅನುಕುಲ್ ರಾತ್ ಕ್ರೀಸ್‌ಗೆ ಬಂದರು. ಆದಾಗ್ಯೂ, ಅವರು ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಮುಂದಿನ ಎಸೆತದಲ್ಲೇ ಕ್ಯಾಚ್ ಔಟ್ ಆದರು, ಅನುಕೂಲ್ ನಾಲ್ಕನೇ ಎಸೆತವನ್ನು ಬ್ಯಾಕ್‌ವರ್ಡ್‌ ಸ್ವ್ಕೇರ್ ಲೆಗ್ ಕಡೆಗೆ ಫ್ಲಿಕ್ ಮಾಡಿದರು. ಗಾಳಿಯಲ್ಲಿ ಚೆಂಡನ್ನು ನೋಡಿ ಚಮೀರ ಸರಿಯಾದ ಸಮಯದಕ್ಕು ಎಡಕ್ಕೆ ಡೈವ್ ಮಾಡಿ ಎರಡೂ ಕೈಗಳಿಂದ ಚೆಂಡನ್ನು ಹಿಡಯುವಲ್ಲಿ ಯಶಸ್ವಿಯಾದರು.

ಕೆಕೆಆರ್ ಇನ್ನಿಂಗ್ಸ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅವರ ಕೊನೆಯ ಓವರ್ ರೋಚಕವಾಗಿತ್ತು. ಈ ಓವರ್‌ನಲ್ಲಿ ಸತತ ಮೂರು ವಿಕೆಟ್‌ಗಳು ಬಿದ್ದವು. ಆ ಓವರ್‌ನ ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಕೆಕೆಆರ್ ತಂಡದ ಮೂವರು ಬ್ಯಾಟರ್ಸ್ ವಿಕೆಟ್ ಕಳೆದುಕೊಂಡರು. ಆದರೆ ಸ್ಟಾರ್ಕ್ ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ವಿಫಲವಾದರು. ಸ್ಟಾರ್ಕ್ ರಸೆಲ್ ಮತ್ತು ಅನುಕುಲ್ ರಾಯ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರೆ, ಒಂದು ವಿಕೆಟ್‌ಕೀಪರ್ ಅಭಿಷೇಕ್ ಪೊರೆಲ್ ಅವರು ಸ್ಪೋಟಕ ಬ್ಯಾಟರ್ ರಸೆಲ್ ಅವರನ್ನು ರನೌಟ್ ಮಾಡಿದರು.

ಪ್ರಸ್ತುತ ಕೆಕೆಆರ್ ತಂಡ 10 ಪಂದ್ಯಗಳಿಂದ 9 ಅಂಕಗಳನ್ನು ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಡೆಲ್ಲಿ ತಂಡ 10 ಪಂದ್ಯಗಳಿಂದ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Story first published: Wednesday, April 30, 2025, 15:02 [IST]
Other articles published on Apr 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+