Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

DC vs CSK: ಚೆನ್ನೈ ಗೆಲುವಿಗೆ 192 ರನ್‌ ಟಾರ್ಗೆಟ್ ನೀಡಿದೆ ಡೆಲ್ಲಿ ಕ್ಯಾಪಿಟಲ್ಸ್‌

ಭರವಸೆಯ ಆಟಗಾರರಾದ ಡೇವಿಡ್‌ ವಾರ್ನರ್‌ ಹಾಗೂ ಗಾಯದಿಂದ ಚೇತರಿಸಿಕೊಂಡು ಐಪಿಎಲ್‌ 2024ರಲ್ಲಿ ಮೈದನಾಕ್ಕೆ ಇಳಿದಿರುವ ರಿಷಭ್ ಪಂಥ್‌ ಅವರು ಸಿಡಿಸಿರುವ ಅರ್ಧಶತಕದ ಬಲದಿಂದ ಡೆಲ್ಲಿ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಸೊಗಸಾಗಿತ್ತು. ತಂಡದ ಪರ ಇನ್ನಿಂಗ್ಸ್‌ ಆರಂಭಿಸಿದ ಸ್ಟಾರ್‌ ಆಟಗಾರ ಡೇವಿಡ್‌ ವಾರ್ನರ್‌ ಹಾಗೂ ಭರವಸೆಯ ಆಟಗಾರ ಪೃಥ್ವಿ ಶಾ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್‌ ಆಟದ ಪ್ರದರ್ಶನ ನೀಡಿ, ಸಿಎಸ್‌ಕೆ ತಂಡದ ಚಿಂತೆಯನ್ನು ಹೆಚ್ಚಿಸಿತು.

DV vs CSK IPL Match First Innings Report


95 ರನ್‌ ಜೊತೆಯಾಟ

ಮೊದಲ ವಿಕೆಟ್‌ಗೆ ಭರವಸೆಯ ಆಟರಂಭಿಕರಾದ ಡೇವಿಡ್‌ ವಾರ್ನರ್‌ ಹಾಗೂ ಪೃಥ್ವಿ ಶಾ ಅಬ್ಬರ ನಡೆಸಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಚೆನ್ನೈ ವಿಫಲವಾಯಿತು. ಪವರ್ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡು ಆಡಿದ ಜೋಡಿ ಅಬ್ಬರ ನಡೆಸಿತು. 9.3 ಓವರ್‌ಗಳ ವರೆಗೆ ವಿಕೆಟ್‌ ನೀಡದಂತೆ ಆಡಿದ ಜೋಡಿ, ಬೌಂಡರಿ, ಸಿಕ್ಸರ್‌ಗಳ ಸುರಿಮಳೆ ಗೈಯಿತು. 58 ಎಸೆತಗಳಲ್ಲಿ ಈ ಜೋಡಿ 93 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು.
ಡೇವಿಡ್‌ ವಾರ್ನರ್‌ 35 ಎಸೆತಗಳಲ್ಲಿ 148.57ರ ಸ್ಟ್ರೈಕರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ 52 ರನ್‌ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 5 ಬೌಂಡರಿ, 3 ಸಿಕ್ಸರ್ ಸೇರಿವೆ. ಇನ್ನು ಬಹುದಿನಗಳ ಬಳಿಕ ಮೈದಾನಕ್ಕೆ ಇಳಿದ ಪೃಥ್ವಿ ಶಾ ಅಬ್ಬರಿಸಿದರು. ಇವರು 27 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ 43 ರನ್‌ ಬಾರಿಸಿ ಔಟ್ ಆದರು.
ಮಿಚ್ ಮಾರ್ಷ್ (18), ಟ್ರಿಸ್ಟಿಯನ್ ಸ್ಟಬ್ಸ್ (0) ದೊಡ್ಡ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು.]


ಮೈ ಚಳಿ ಬಿಟ್ಟು ಆಡಿದ ಪಂತ್‌

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಭ್‌ ಪಂತ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಗಾಯದ ಬಳಿಕ ಮೈದಾನಕ್ಕೆ ಇಳಿದ ಬಳಿಕ ತಮ್ಮಲ್ಲಿ ಇನ್ನು ಕ್ರಿಕೆಟ್‌ ಆಡುವ ಕ್ಷಮತೆ ಇದೆ ಎಂದು ತೋರಿಸಿದರು. ಇವರು 32 ಎಸೆತಗಳಲ್ಲಿ 51 ರನ್ ಬಾರಿಸಿ ಔಟ್ ಆದರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 3 ಸಿಕ್ಸರ್ ಸೇರಿವೆ.

DV vs CSK IPL Match First Innings Report

ಅಕ್ಷರ್‌ ಪಟೇಲ್‌ ಅಜೇಯ 7, ಅಭಿಷೇಕ್‌ ಪೋರೆಲ್‌ ಅಜೇಯ 9 ರನ್‌ ಸಿಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ ಅಂತಿಮವಾಗಿ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್‌ ಸೇರಿಸಿತು. ಚೆನ್ನೈ ಸೂಪರ್‌ ಕಿಂಗ್ಸ್ ಪರ ಮತೀಶ್‌ ಪತಿರಾಣಾ 4 ಓವರ್‌ ಬೌಲಿಂಗ್ ಮಾಡಿ 31 ರನ್ ನೀಡಿ ಮೂರು ವಿಕೆಟ್‌ ಪಡೆದರು. ಉಳಿದಂತೆ ಮುಷ್ತಾಫಿಜುರ್‌ ರೆಹಮನಾ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಪಡೆದರು.

Story first published: Sunday, March 31, 2024, 21:18 [IST]
Other articles published on Mar 31, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+