
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಗೆ ಅರ್ಪಿಸುವ ತನ್ನ ಹಾಡಿನ ಬಿಡುಗಡೆ ದಿನಾಂಕವನ್ನು ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಬ್ರಾವೋ ಹಾಡಿನ ಟೀಸರ್‌ವೊಂದನ್ನು ಕೂಡ ಬಿಡುಗಡೆಗೊಳಿಸಿದರು.
ಬ್ರಾವೋ ತನ್ನ ಹಾಡು ಧೋನಿಯ ಹುಟ್ಟುಹಬ್ಬದ ದಿನದಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಜುಲೈ 7ರಂದು ಧೋನಿ ಹುಟ್ಟುಹಬ್ಬ ಇರಲಿದ್ದು ಅಂದು ಧೋನಿಯ ಕುರಿತಾಗಿ ರಚಿಸಿರುವ ಬ್ರಾವೋ ಹಾಡು ಬಿಡುಗಡೆಯಾಗಲಿದೆ
ಭಾರತ ಮೊದಲ ವಿಶ್ವಕಪ್ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರೋಚಕ ಹಾದಿ!
ಇನ್ಸ್ಟಾಗ್ರಾಮ್‌ನಲ್ಲಿ ಮಾತನಾಡಿದ ಬ್ರಾವೋ ತನ್ನ ಹಾಗೂ ಧೋನಿ ಅಭಿಮಾನಿಗಳಿಗೆ ಮತ್ತೊಂದು ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿಶೇಷ ನೃತ್ಯವನ್ನೂ ಹೊಂದಿದ್ದು ಅದಕ್ಕೆ ಹೆಲಿಕಾಫ್ಟರ್ ಎಂದು ಹೆಸರಿಡಲಾಗಿದೆ ಎಂದು ಬ್ರಾವೋ ತಿಳಿಸಿದ್ದಾರೆ. ಧೋನಿಗಾಗಿ ಈ ವಿಶೇಷ ನೃತ್ಯವನ್ನು ಮಾಡಲಾಗಿದೆ ಎಂದಿದ್ದಾರೆ.
ಧೋನಿ ಮತ್ತು ಡ್ವೇಯ್ನ್ ಬ್ರಾವೋ ಚೆನ್ನೈ ಸೂಒರ್ ಕಿಂಗ್ಸ್ ತಂಡದ ಸಹ ಆಟಗಾರರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಂದೇ ತಂಡದಲ್ಲಿದ್ದು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಗಾಗಿ ವಿಶೇಷ ಹಾಡೊಂದನ್ನು ರಚಿಸಿದ್ದಾರೆ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ.
ಬ್ರಾವಓ ಈ ಹಿಂದೆ ಕೂಡ ಒಂದು ಆಲ್ಬಮ್‌ಅನ್ನು ಹೊರತಂದಿದ್ದರು. ಸಂಗೀತ ಕ್ಷೇತ್ರದಲ್ಲಿ ಭ್ರಾವೋಗೆ ಎಂತಾ ಆಸಕ್ತಿಯಿದೆ ಎಂಬುದು ಕ್ರಿಕೆಟ್ ಲೋಕಕ್ಕೆ ಆಗಲೇ ಅರಿವಿಗೆ ಬಂದಿತ್ತು. ಚಾಂಪಿಯನ್ ಎಂಬ ಹೆಸರಿನ ಆ ಹಾಡು ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿತ್ತು. ಕ್ಇಕೆಟ್ ಅಭಿಮಾನಿಗಳನ್ನು ಹೊರತಾಗಿಯೂ ಆ ಹಾಡು ಪ್ರಸಿದ್ದವಾಗಿತ್ತು. ಈಗ ಬ್ರಾವೋ ಧೋನಿಗಾಗಿ ರಚಿಸಿರುವ ಹಾಡಿನ ಮೇಲೂ ಅಂತದ್ದೇ ಭರವಸೆ ಮೂಡಿದೆ.