IPL 2022: ಭಾರತದ ಅನ್‌ಕ್ಯಾಪ್ಡ್ ಆಟಗಾರರಿಗೆ 1 ಕೋಟಿ ಕೊಟ್ಟು ಹಾಳು ಮಾಡಬೇಡಿ!

ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅನ್‌ಕ್ಯಾಪ್ಡ್ ಆಟಗಾರರು, ಅಂಡರ್-19 ಯುವ ಆಟಗಾರರು ಈಗಲೇ ಕೋಟ್ಯಾಧಿಪತಿಗಳಾದ್ರೆ, ಅವರ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಟೀಂ ಇಂಡಿಯಾ ಪರ ಆಡದ ಆಟಗಾರರು ಮತ್ತು ಅಂಡರ್-19 ಆಟಗಾರರಿಗೆ ಗರಿಷ್ಠ ಒಂದು ಕೋಟಿ ರೂಪಾಯಿ ಹಣವನ್ನ ಮಾತ್ರ ನೀಡಬೇಕು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವುದು ಪ್ರತಿಯೊಬ್ಬ ಆಟಗಾರನ ಮನಸ್ಸಿನಲ್ಲಿಯೂ ಇರುತ್ತದೆ. ಐಪಿಎಲ್ 2022 ರ ಮೆಗಾ ಹರಾಜಿಗೆ ಭಾರತ ಅಂಡರ್-19 ವಿಶ್ವಕಪ್ ವಿಜೇತ ತಂಡದ ಹಲವಾರು ಸದಸ್ಯರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಮತ್ತು ಅವರು ಎರಡು ದಿನಗಳ ಈವೆಂಟ್‌ನಲ್ಲಿ ಹ್ಯಾಮರ್ ಅಡಿಯಲ್ಲಿ ಹೋಗುತ್ತಾರೆ.
ಹಿಂದಿನ ಹರಾಜಿನಲ್ಲಿ ಯೋಗ್ಯ ಮೊತ್ತವನ್ನು ಪಡೆದ ಅಂಡರ್-19 ಕ್ರಿಕೆಟಿಗರ ಪಟ್ಟಿ ಇದೆ ಮತ್ತು ಪ್ರಸ್ತುತ ತಂಡದ ಕೆಲವು ಸದಸ್ಯರು ಕೂಡ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
ಮೆಗಾ ಹರಾಜಿನ ಮೊದಲು, ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಐಪಿಎಲ್ ಹರಾಜಿನಲ್ಲಿ ಆಮೂಲಾಗ್ರ ಬದಲಾವಣೆಯನ್ನು ಬಯಸಿದ್ದಾರೆ. ಅನ್‌ಕ್ಯಾಪ್ಡ್ ಆಟಗಾರರಿಗೆ ಸಂಬಳದ ಮಿತಿಯನ್ನು ಸೂಚಿಸಿದ್ದಾರೆ. ಅನ್‌ಕ್ಯಾಪ್ಡ್ ಆಟಗಾರರಿಗೆ 1 ಕೋಟಿ ರೂ.ಗಳ ಮಿತಿ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ಯಾಪ್ಡ್ ಆಟಗಾರರಿಗೆ ಹೋಲಿಸಿದರೆ ಅನ್‌ಕ್ಯಾಪ್ಡ್ ಆಟಗಾರರು ಕಡಿಮೆ ಮೂಲ ಬೆಲೆಯನ್ನು ಹೊಂದಿದ್ದರೂ ಸಹ, ಕೆಲವು ಅನ್‌ಕ್ಯಾಪ್ಡ್ ಆಟಗಾರರು ಅಂತರರಾಷ್ಟ್ರೀಯ ತಾರೆಗಳಿಗಿಂತ ಹೆಚ್ಚು ಹಣ ಗಳಿಸಿದ್ದಾರೆ.
ಐಪಿಎಲ್ 2014 ರ ಮೊದಲು, ಅನ್ ಕ್ಯಾಪ್ಡ್ ಆಟಗಾರರು ಹರಾಜಿನ ಭಾಗವಾಗಿರಲಿಲ್ಲ. ಆದ್ರೆ ಲೀಗ್‌ನ ಏಳನೇ ಆವೃತ್ತಿಯಲ್ಲಿ ಅವರು ಮೊದಲ ಬಾರಿಗೆ ಹರಾಜಿಗೆ ಬಂದರು. ಈ ವರ್ಷ, 355 ಅನ್‌ಕ್ಯಾಪ್ಡ್ ಆಟಗಾರರನ್ನು ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಮತ್ತು ಅವರಲ್ಲಿ ಕೆಲವರು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications