ಕೊಹ್ಲಿ ಬರ್ತ್‌ಡೇ: ಶುಭಾಶಯ ಕೋರಿ, ಕಾಲೆಳೆದ ಇಂಗ್ಲೆಂಡ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು 32ನೇ ವಸಂತಕ್ಕೆ ಕಾಲಿಟ್ಟರು. ನಾನಾ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂತು. ಸೆಲೆಬ್ರೆಟಿಗಳು, ಕ್ರಿಕೆಟಿಗರು , ಅಭಿಮಾನಿಗಳು, ಐಪಿಎಲ್ ಫ್ರಾಂಚೈಸಿಗಳಿಂದ ಹೀಗೆ ಸಾಲು ಸಾಲು ಶುಭಾಶಯಗಳು ಕೊಹ್ಲಿಗೆ ಸಂದಿದೆ.
ಇದರ ನಡುವೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕೂಡ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಇಷ್ಟಾಗಿದ್ರೆ ಏನೂ ಆಗುತ್ತಿರಲಿಲ್ಲ. ಆದರೆ ಅಲ್ಲಿ ಆಗಿದ್ದೇ ಬೇರೆ. ಕೊಹ್ಲಿಗೆ ಶುಭಾಶಯ ತಿಳಿಸುವುದರ ಜೊತೆಗೆ ವೀಡಿಯೋವೊಂದನ್ನು ಪೋಸ್ಟ್ ಮಾಡಿದ ಇಸಿಬಿ ಕೊಹ್ಲಿ ಕಾಲೆಳೆದಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 2018 ರ ಸರಣಿಯಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ವಿರುದ್ಧ ಕೊಹ್ಲಿ ಬೌಲ್ಡ್ ಆದ ವೀಡಿಯೋವನ್ನು ಇಸಿಬಿ ಹಂಚಿಕೊಂಡಿದೆ. ರಶೀದ್ ಅವರಿಂದ 'ಶತಮಾನದ ಎಸೆತಗಳಲ್ಲಿ ಒಂದನ್ನು' ಕೊಹ್ಲಿಗೆ ನೆನಪಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬೇಕೆಂದೆ ವಿಡಿಯೋವನ್ನು ಹಂಚಿಕೊಂಡಿದೆ.
2018 ರಲ್ಲಿ ಲೀಡ್ಸ್‌ನಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ರಶೀದ್‌ರ ಆ ಅದ್ಭುತ ಎಸೆತವನ್ನು ಹಾಕಿ ಕೊಹ್ಲಿಯನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಸ್ವತಃ ಕೊಹ್ಲಿಯೇ ಒಮ್ಮೆಲೆ ಶಾಖ್ ಆಗಿ ನಿಂತಿದ್ದರು. ಆದರೆ ಈಗ ವಿರಾಟ್ ಹುಟ್ಟುಹಬ್ಬದ ದಿನದಂದು ಈ ವೀಡಿಯೋ ಏಕೆ ಪೋಸ್ಟ್ ಮಾಡಬೇಕಿತ್ತು ಎಂದು ಅಭಿಮಾನಿಗಳು ಇಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications