Emerging Asia Cup 2023: ಸಾಯಿ ಸುದರ್ಶನ್ ಶತಕ; ಪಾಕಿಸ್ತಾನ ಬಗ್ಗುಬಡಿದ ಭಾರತ ತಂಡ
ಬುಧವಾರ, ಜುಲೈ 19ರಂದು ಕೊಲಂಬೊದಲ್ಲಿ ನಡೆದ 2023ರ ಎಸಿಸಿ ಪುರುಷರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಎ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎ ತಂಡದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಭಾರತ ತಂಡದ ಪರ ಆರಂಭಿಕ ಸಾಯಿ ಸುದರ್ಶನ್ ಭರ್ಜರಿ ಶತಕ ಬಾರಿಸಿ ಮಿಂಚಿದರೆ, ಕನ್ನಡಿಗ ನಿಕಿನ್ ಜೋಸ್ ಅಮೋಘ ಅರ್ಧಶತಕ ಗಳಿಸಿ ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 48 ಓವರ್‌ಗಳಲ್ಲಿ 205 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ 206 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಭಾರತೀಯ ಯುವ ಪಡೆ ಕೇವಲ 36 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.
ಪಾಕಿಸ್ತಾನ ಎ ತಂಡದ ಪರ ಬ್ಯಾಟಿಂಗ್‌ನಲ್ಲಿ ಸಾಹಿಬ್ಜಾದಾ ಫರ್ಹಾನ್ 35 ರನ್, ಹಸೀಬುಲ್ಲಾ ಖಾನ್ 27 ರನ್, ಕಮ್ರಾನ್ ಗುಲಾಮ್ 15 ರನ್, ಮೊಹಮ್ಮದ್ ಹ್ಯಾರಿಸ್ 14 ರನ್, ಖಾಸಿಮ್ ಅಕ್ರಮ್ 48 ರನ್, ಮುಬಾಶಿರ್ ಖಾನ್ 28 ರನ್, ಮೆಹ್ರಾನ್ ಮುಮ್ತಾಜ್ 25 ರನ್, ಮೊಹಮ್ಮದ್ ವಾಸಿಮ್ 8 ರನ್ ಮತ್ತು ಶಹನವಾಜ್ ದಹಾನಿ 4 ರನ್ ಗಳಿಸಿದರು.

ಭಾರತ ಎ ತಂಡದ ಪರ ಬೌಲಿಂಗ್‌ನಲ್ಲಿ ರಾಹವರ್ಧನ್ ಹಂಗೇರ್ಕರ್ 8 ಓವರ್‌ಗಳಲ್ಲಿ 42 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಮಾನವ್ ಸುತಾರ್ 10 ಓವರ್‌ಗಳಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದರೆ, ರಿಯಾನ್ ಪರಾಗ್ ಮತ್ತು ನಿಶಾಂತ್ ಸಂಧು ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇನ್ನು ಭಾರತ ಎ ತಂಡದ ಪರ ಬ್ಯಾಟಿಂಗ್‌ನಲ್ಲಿ ಆರಂಭಿಕ ಸಾಯಿ ಸುದರ್ಶನ್ 110 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 104 ರನ್‌ಗಳ ಶತಕ ಬಾರಿಸಿ ಅಜೇಯರಾಗುಳಿದರು. ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 20 ರನ್ ಗಳಿಸಿ ಔಟಾದರು.
ನಂತರ ಬಂದ ನಿಕಿನ್ ಜೋಸ್ 64 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ನಾಯಕ ಯಶ್ ಧುಲ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 21 ಗಳಿಸಿ ಔಟಾಗದೆ ಉಳಿದರು.
ಪಾಕಿಸ್ತಾನ ಎ ತಂಡದ ಪರ ಬೌಲಿಂಗ್‌ನಲ್ಲಿ ಮುಬಾಶಿರ್ ಖಾನ್ ಮತ್ತು ಮೆಹ್ರಾನ್ ಮುಮ್ತಾಜ್ ತಲಾ ಒಂದೊಂದು ವಿಕೆಟ್ ಪಡೆದರೆ, ಉಳಿದವರು ಹೆಚ್ಚು ರನ್ ನೀಡಿ ವಿಕೆಟ್ ರಹಿತರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications