For Quick Alerts
ALLOW NOTIFICATIONS  
For Daily Alerts
 

IND vs PAK: ಅಕ್ಟೋಬರ್ 19ರಂದು ಭಾರತ-ಪಾಕಿಸ್ತಾನ ಮುಖಾಮುಖಿ; ಲೈವ್ ಸ್ಟೀಮಿಂಗ್ ಜಿಯೋ ಸಿನಿಮಾ, ಹಾಟ್‌ಸ್ಟಾರ್‌ನಲ್ಲಿ ಅಲ್ಲ!

ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಮ್ಮೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಉಭಯ ತಂಡಗಳ ಕಾದಾಟ ನೋಡಲು ವಿಶ್ವ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿದ್ದಾರೆ. ಉದಯೋನ್ಮುಖ ಏಷ್ಯಾ ಕಪ್‌ 2024ರ ಟೂರ್ನಿಯಲ್ಲಿ ಅಕ್ಟೋಬರ್ 19ರಂದು ಭಾರತ ಮತ್ತು ಪಾಕಿಸ್ತಾನ ಮುಖಮುಖಿಯಾಗಲಿವೆ.

ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳಿಗೆ ಆರಂಭಿಕ ಪಂದ್ಯ ಇದಾಗಿದ್ದು, ಶುಭರಾಂಭ ಮಾಡಲು ತಯಾರಾಗುತ್ತಿವೆ. ಮೊದಲ ಬಾರಿಗೆ ಭಾರತ ಎ ತಂಡವನ್ನು ಯುವ ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ಮುನ್ನಡೆಸುತ್ತಿದ್ದಾರೆ. ಮೊಹಮ್ಮದ್ ಹ್ಯಾರಿಸ್ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿದ್ದಾರೆ.

Emerging Asia Cup 2024 India vs Pakistan match on October 19

ಪಾಕಿಸ್ತಾನ ಕಳೆದ ಬಾರಿ ಚಾಂಪಿಯನ್ ಆಗಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಈ ಟೂರ್ನಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನು ಪ್ರಕಟಿಸಲಾಗಿದೆ. ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ಸಾಯಿ ಕಿಶೋರ್ ಅವರಂತಹ ಸ್ಫೋಟಕ ಬ್ಯಾಟರ್‌ಗಳು ಇದ್ದಾರೆ.

ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ತಲಾ 4 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಅಫ್ಘಾನಿಸ್ತಾನ ಎ, ಬಾಂಗ್ಲಾದೇಶ ಎ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ಎ ಸ್ಥಾನ ಪಡೆದಿವೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಎ, ಭಾರತ ಎ, ಓಮನ್ ಯುಎಇ ಬಿ ಗುಂಪಿನಲ್ಲಿವೆ. ಒಮಾನ್‌ನಲ್ಲಿ ನಡೆಯಲಿರುವ ಉದಯೋನ್ಮುಖ ಏಷ್ಯಾ ಕಪ್‌ 2024ರ ಫೈನಲ್ ಪಂದ್ಯ ಅಕ್ಟೋಬರ್ 27 ರಂದು ನಡೆಯಲಿದೆ.

ಲೈವ್ ಸ್ಟ್ರೀಮಿಂಗ್

ಉದಯೋನ್ಮುಖ ಏಷ್ಯಾ ಕಪ್‌ 2024ರ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಜಿಯೋ ಸಿನಿಮಾ ಅಥವಾ ಡಿಸ್ನಿ+ ಹಾಟ್‌ಸ್ಟಾರ್ ಆಪ್‌ನಲ್ಲಿ ಲೈವ್ ವೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಈ ಬಾರಿ ಉದಯೋನ್ಮುಖ ಏಷ್ಯಾ ಕಪ್‌ 2024ರ ಪಂದ್ಯಗಳು ಒಮಾನ್‌ನಲ್ಲಿ ನಡೆಯಲಿವೆ. ಈ ಕಾರಣದಿಂದ
ಫ್ಯಾನ್‌ಕೋಡ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ.

ಆದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಫ್ಯಾನ್‌ಕೋಡ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಎಲ್ಲಾ ಪಂದ್ಯಗಳು ಮಧ್ಯಾಹ್ನ 2.30 ಮತ್ತು ರಾತ್ರಿ 7.30 ಗಂಟೆಗೆ ಆರಂಭವಾಗಲಿವೆ. ಅಕ್ಟೋಬರ್ 19 ರಂದು ರಾತ್ರಿ 7.30 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಫೈಟ್ ಆರಂಭವಾಗಲಿದೆ.

ಉಭಯ ತಂಡಗಳು

ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಅಭಿಷೇಕ್ ಶರ್ಮಾ, ಆಯುಷ್ ಬದೋನಿ, ನಿಶಾಂತ್ ಸಿಂಧು, ರಮಣ್‌ದೀಪ್ ಸಿಂಗ್, ಅನುಜ್ ರಾವತ್ (ವಿಕೆಟ್‌ ಕೀಪರ್), ಪ್ರಭ್ ಸಿಮ್ರಾನ್ ಸಿಂಗ್, ನೆಹಾಲ್ ವಧೇರಾ, ಅನ್ಶುಲ್ ಕಾಂಬೋಜ್, ಹೃತಿಕ್ ಶೌಕೀನ್, ಆಕಿಬ್ ಖಾನ್, ವೈಭವ್ ಅರೋರಾ, ರಾಸಿಖ್ ಸಲಾಂ, ಚಾಹರ್ ಕಿಶೋರ್, ರಾಹುಲ್ ಚಹಾರ್.

ಪಾಕಿಸ್ತಾನ ಎ ತಂಡ: ಮೊಹಮ್ಮದ್ ಹ್ಯಾರಿಸ್ (ನಾಯಕ), ಅಬ್ಬಾಸ್ ಅಫ್ರಿದಿ, ಖಾಸಿಮ್ ಅಕ್ರಮ್, ಅಹ್ಮದ್ ದಾನಿಯಾಲ್, ಶಹನವಾಜ್ ದಹಾನಿ, ಮೊಹಮ್ಮದ್ ಇಮ್ರಾನ್, ಹಸಿಬುಲ್ಲಾ ಖಾನ್, ಯಾಸಿರ್ ಖಾನ್, ಜಮಾನ್ ಖಾನ್, ಅರಾಫತ್ ಮಿನ್ಹಾಸ್, ಸುಫಿಯಾನ್ ಮೊಕಿಮ್, ಮೆಹ್ರಾನ್ ಮುಮ್ತಾಜ್, ಅಬ್ದುಲ್ ಸಮದ್, ಒಮೈರ್ ಯೂಸುಫ್.

Story first published: Wednesday, October 16, 2024, 16:56 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+