Emerging Asia Cup 2024: ಅಭಿಷೇಕ್ ಶರ್ಮಾ ಜೊತೆ ಪಾಕಿಸ್ತಾನ ಬೌಲರ್ ಕಿರಿಕ್; ವಿಡಿಯೋ ವೈರಲ್
ಒಮಾನ್‌ನಲ್ಲಿ ನಡೆಯುತ್ತಿರುವ ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ 2024ರ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ರೋಚಕ ಪಂದ್ಯ ಏರ್ಪಟ್ಟಿತ್ತು. ಒಮಾನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ತಿಲಕ್ ವರ್ಮಾ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತು.
ಕೊನೆಯ ಎಸೆತದವರೆಗೂ ರೋಚಕತೆ ಹುಟ್ಟು ಹಾಕಿದ ಈ ಪಂದ್ಯದಲ್ಲಿ ಭಾರತ 7 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಟೂರ್ನಿಯಲ್ಲಿ ಗೆಲುವಿನ ಅಭಿಯಾನ ಶುರು ಮಾಡಿದೆ. ಪಂದ್ಯದ ವೇಳೆ ಕುತೂಹಲಕಾರಿ ಘಟನೆವೊಂದು ನಡೆದಿದೆ. ಟೀಮ್ ಇಂಡಿಯಾ ಸ್ಟಾರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಜೊತೆ ಪಾಕಿಸ್ತಾನ ಬೌಲರ್ ಕಿರಿಕ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಪಾಕ್ ಬೌಲರ್ ಕಿರಿಕ್
ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಆರಂಭಿಕರಾಗಿ ಕ್ರೀಸ್‌ಗೆ ಬಂದ ಪ್ರಭಾಸಿಮ್ರಾನ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಅಭಿಷೇಕ್ 22 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 35 ರನ್ ಗಳಿಸುವ ಮೂಲಕ ತಮ್ಮ ಆಕ್ರಮಣವನ್ನು ಮುಂದುವರೆಸಿದರು.
ಭಾರತ ತಂಡದ ಉತ್ತಮ ಆರಂಭದ ನಂತರ, ಅಭಿಷೇಕ್ 7ನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ಈ ಓವರ್ ಪಾಕಿಸ್ತಾನದ ಬೌಲರ್ ಸುಫಿಯಾನ್ ಮುಖೀಮ್ ಅವರು ಅವರದ್ದಾಗಿತ್ತು. ಅಭಿಷೇಕ್ ಆಫ್-ಅಸೈಡ್‌ನಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಚೆಂಡು ಬೌಂಡರಿ ಗೆರೆ ಮಟ್ಟಲು ಶಾಟ್ ಸರಿಯಾಗಿ ಇರಲಿಲ್ಲ. ಹೀಗಾಗಿ ಖಾಸಿಮ್ ಅಕ್ರಮ್ ಅದ್ಭುತ ಡೈವಿಂಗ್ ಕ್ಯಾಚ್ ಪಡೆದರು. ಈ ಮೂಲಕ ಸುಫಿಯಾನ್ ಮುಖೀಮ್ ಪಾಕಿಸ್ತಾನಕ್ಕೆ ಮೊದಲ ವಿಕೆಟ್ ನೀಡಿದರು.
ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದ ನಂತರ ಮುಖೀಮ್, ಅವರಿಗೆ ಮೌನವಾಗ ಹೋಗಲು ಸನ್ನೆ ಮಾಡಿದರು. ತಕ್ಷಣ ಕೋಪಗೊಂಡ ಅಭಿಷೇಕ್ ಪ್ರತಿಯಾಗಿ ಏನನ್ನೋ ಹೇಳಿ ಪಾಕಿಸ್ತಾನದ ಬೌಲರ್ ನತ್ತ ಸಾಗತೊಡಗಿದರು. ಆದರೆ, ಈ ಮಧ್ಯೆ ಮೈದಾನದ ಅಂಪೈರ್‌ಗಳಾದ ಚಾಮರ ಡಿ ಜೋಯ್ಸಾ ಮತ್ತು ರಾಹುಲ್ ಆಶರ್ ಮಧ್ಯಪ್ರವೇಶಿಸಿ ಘಟನೆಯನ್ನು ತಿಳಿಗೊಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications