ಭಾವುಕರಾಗಿದ್ದ ಸಚಿನ್, ದ್ರಾವಿಡ್ ವಿಶ್ವಕಪ್‌ನಲ್ಲಿ ಭಾರತ ಗೆಲ್ಲಿಸಿದ್ದು ಇದೇ ದಿನ!

ಮುಂಬೈ, ಮೇ 23: ಇಂಗ್ಲೆಂಡ್‌ನಲ್ಲಿ 1999ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಟೂರ್ನಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪಾಲಿಗೆ ನೋವು ತಂದಿತ್ತು. ಯಾಕೆಂದರೆ ಆವತ್ತು ಟೀಮ್ ಇಂಡಿಯಾ ಸೂಪರ್ ಸಿಕ್ಸ್‌ನಿಂದ ಎಲಿಮಿನೇಟ್ ಆಗಿದ್ದಷ್ಟೇ ಅಲ್ಲ, ಟೂರ್ನಿಯ ಮಧ್ಯೆ ಸಚಿನ್ ಅವರ ತಂದೆ ಸಾವನ್ನಪ್ಪಿದ್ದರು. ಅತ್ತ ತಂಡದ ಸೋಲು, ಇತ್ತ ತಂದೆಯ ಸಾವು ಸಚಿನ್ ಅವರನ್ನು ನೋವಿಗೀಡುವಾಡಿತ್ತು. ತಂದೆ ಮರಣವಾಗಿದ್ದರಿಂದ ಸಚಿನ್ ವಿಶ್ವಕಪ್ ಟೂರ್ನಿಯ ಅರ್ಧದಿಂದಲೇ ಭಾರತಕ್ಕೆ ವಾಪಸ್ಸಾಗಬೇಕಾಗಿ ಬಂದಿತ್ತು. ಆದರೆ ಸಚಿನ್ ಭಾರತಕ್ಕೆ ವಾಪಸ್ಸಾಗಿರಲಿಲ್ಲ, ಅಂಥ ಸಂಕಟದ ಸಂದರ್ಭದಲ್ಲೂ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದ ತೆಂಡೂಲ್ಕರ್, ಸ್ಫೋಟಕ ಶತಕ ಬಾರಿಸಿ ಇಂಡಿಯಾಕ್ಕೆ ಗೆಲುವು ತಂದಿದ್ದರು.
ಆವತ್ತಿನ ವಿಶ್ವಕಪ್ ವಿಶ್ವಕಪ್ ಟೂರ್ನಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ಸೋತಿತ್ತು. ಒಂದು ಪಂದ್ಯವನ್ನಾದರೂ ಗೆಲ್ಲುವುದಕ್ಕಾಗಿ ಭಾರತ ಎದುರು ನೋಡುತ್ತಿತ್ತು. ಗೆಲುವಿನ ಅನಿವಾರ್ಯತೆಯಲ್ಲಿದ್ದ ಭಾರತಕ್ಕೆ ಸಚಿನ್ ಮತ್ತು ಕನ್ನಡಿಗ, ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಜಯ ಸಿಹಿ ತಂದಿದ್ದರು.
ಸಚಿನ್-ದ್ರಾವಿಡ್ ಇಬ್ಬರ ರನ್ ಕೊಡುಗೆಯಿಂದ ಭಾರತ ಆ ಪಂದ್ಯ ಗೆದ್ದಿತ್ತು. ಭಾರತಕ್ಕೆ ಆ ಅಪೂರ್ವ ಗೆಲುವು ಲಭಿಸಿದ್ದು 1999 ಮೇ 23ರ ಇದೇ ದಿನ.

ನೋವಿನಲ್ಲಿದ್ದ ಭಾರತ ಆಟಗಾರರು
ವಿಶ್ವಕಪ್ 15ನೇ ಪಂದ್ಯದಲ್ಲಿ ಭಾರತ-ಕೀನ್ಯಾ ತಂಡಗಳು ಮುಖಾಮುಖಿಯಾಗಿದ್ದವು. ಬ್ರಿಸ್ಟಾಲ್‌ನ ಕೌಂಟಿ ಮೈದಾನದಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯಕ್ಕೂ ಮುನ್ನ ಅಂದರೆ ಮೇ 19ರಂದು ಸಚಿನ್ ಅವರ ತಂದೆ ರಮೇಶ್ ತೆಂಡೂಲ್ಕರ್ ನಿಧನಾರಾಗಿದ್ದರು. ಅಲ್ಲದೆ ಟೀಮ್ ಇಂಡಿಯಾ ಆರಂಭಿಕ ಎರಡೂ ಪಂದ್ಯಗಳನ್ನು (ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ) ಸೋತಿದ್ದರಿಂದ ಆ ನೋವು ಭಾರತದ ಆಟಗಾರರನ್ನಾವರಿಸಿತ್ತು.

ಸಚಿನ್-ದ್ರಾವಿಡ್ ಶತಕದಾಟ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ಸಡಗೋಪ್ಪನ್ ರಮೇಶ್ 44, ಸೌರವ್ ಗಂಗೂಲಿ 13, ರಾಹುಲ್ ದ್ರಾವಿಡ್ ಅಜೇಯ 104 (109 ಎಸೆತ), ಸಚಿನ್ ತೆಂಡೂಲ್ಕರ್ 140 (101 ಎಸತ) ರನ್ ಕೊಡುಗೆಯೊಂದಿಗೆ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 329 ರನ್ ಕಲೆ ಹಾಕಿತ್ತು. ಆವತ್ತು ಭಾವುಕರಾಗಿದ್ದ ಸಚಿನ್, ಶತಕ ಪೂರೈಸುತ್ತಲೇ ಆಕಾಶ ದಿಟ್ಟಿಸಿ ಶತಕವನ್ನು ತಂದೆಗರ್ಪಿಸಿದ್ದರು.

ಭಾರತಕ್ಕೆ ಭರ್ಜರಿ ಜಯ
ಗುರಿ ಬೆನ್ನಟ್ಟಿದ ಕೀನ್ಯಾ, ಆರಂಭಿಕ ಬ್ಯಾಟ್ಸ್‌ಮನ್ ಕೆನಡಿ ಒಟಿಯೆನೊ 56, ಸ್ಟೀವ್ ಟಿಕೊಲೊ 58, ಮಾರಿಸ್ ಒಡುಂಬೆ 14, ಥಾಮಸ್ ಒಡೊಯೊ 39 ರನ್ ಸೇರಿಸಿದ್ದರಿಂದ 50 ಓವರ್‌ಗೆ 7 ವಿಕೆಟ್‌ನಷ್ಟದಲ್ಲಿ 235 ರನ್ ಬಾರಿಸಿ 94 ರನ್‌ನಿಂದ ಭಾರತಕ್ಕೆ ಶರಣಾಗಿತ್ತು.

ಮೊಹಂತಿ ಅದ್ಭುತ ಬೌಲಿಂಗ್
ಆ ವಿಶ್ವಕಪ್ ಪಂದ್ಯದಲ್ಲಿ ಭಾರತ ಗೆದ್ದಿದ್ದರ ಕ್ರೆಡಿಟ್ ಬೌಲರ್ ದೆಬಾಸಿಸ್ ಮೊಹಾಂತಿಗೂ ಸಲ್ಲಬೇಕು. 10 ಓವರ್ ಎಸೆದಿದ್ದ ಮೊಹಾಂತಿ, 56 ರನ್ ನೀಡಿ ಕೀನ್ಯಾದ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಇನ್ನು ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕಾರ್, ನಿಖಿಲ್ ಚೋಪ್ರಾ ತಲಾ 1 ವಿಕೆಟ್ ಪಡೆದಿದ್ದರು. ಸಚಿನ್ ತೆಂಡೂಲ್ಕರ್ ಪಂದ್ಯಶ್ರೇಷ್ಠರೆನಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications