Ashes 2023: ಆಕ್ರಮಣಕಾರಿ ಆಟದಿಂದ ಹಿಂದೆ ಸರಿಯಲ್ಲ; ಆಸೀಸ್‌ಗೆ ಎಚ್ಚರಿಕೆ ನೀಡಿದ ಜೇಮ್ಸ್ ಆಂಡರ್ಸನ್
ಎಡ್ಜ್‌ಬಾಸ್ಟನ್‌ನಲ್ಲಿ ನಡೆದ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಎರಡು ವಿಕೆಟ್‌ಗಳಿಂದ ರೋಚಕವಾಗಿ ಗೆದ್ದುಕೊಂಡು ಶುಭಾರಂಭ ಮಾಡಿತು. ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್ ಅವರ ಜುಗಲ್‍ಬಂದಿ ಇಂಗ್ಲೆಂಡ್‌ಗೆ ಅವರದೇ ನೆಲದಲ್ಲಿ ಸೋಲುಣಿಸಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅವರು ಸರಣಿಯನ್ನು ಸಮಬಲಗೊಳಿಸಲು ಎದುರು ನೋಡುತ್ತಿದ್ದಾರೆ. ಅಲ್ಲದೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹೆಚ್ಚು ಸಕಾರಾತ್ಮಕ ಮತ್ತು ಹೆಚ್ಚು ಆಕ್ರಮಣಕಾರಿಕಾರಿ ಪ್ರದರ್ಶನ ನೀಡಲಿದೆ ಎಂದು ತಿಳಿಸಿದ್ದಾರೆ.

"ನಾವು ಹೆಚ್ಚು ಸಕಾರಾತ್ಮಕ, ಹೆಚ್ಚು ಆಕ್ರಮಣಕಾರಿ, ಹೆಚ್ಚು ಮನರಂಜನೆಯ ಪ್ರದರ್ಶನ ನೀಡಲು ಸಿದ್ಧರಾಗಿದ್ದೇವೆ ಎಂದು ಭಾವಿಸುತ್ತೇನೆ. ಅಭಿಮಾನಿಗಳು ಪ್ರತಿದಿನ ಸಂತೋಷವಾಗಿ ಮನೆಗೆ ಹಿಂದಿರುಗುವುದನ್ನು ಮಾಡಲು ನಾವು ಪ್ರಯತ್ನಿಸುತ್ತೇವೆ," ಎಂದು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಹೇಳಿದ್ದಾರೆ.
"ಐದು ಪಂದ್ಯಗಳ ಸರಣಿಯಲ್ಲಿ ನಾವು 1-0 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ, ಸದ್ಯ ವಿಭಿನ್ನವಾಗಿ ಏನನ್ನೂ ಮಾಡಲು ಬಯಸುವುದಿಲ್ಲ. ನಾವು ಆಕ್ರಮಣಕಾರಿಯಾಗಿ ಆಡುವುದನ್ನು ಮುಂದುವರಿಸಿದರೆ ಮತ್ತು ಕೆಲವು ಪರಿಸ್ಥಿತಿಗಳನ್ನು ನಿರ್ಮಿಸಿದರೆ, ಮುಂದಿನ ನಾಲ್ಕು ಪಂದ್ಯಗಳನ್ನು ಗೆಲ್ಲಬಹುದು ಎಂದು ಯೋಜಿಸಿದ್ದೇವೆ. ಅದೇ ರೀತಿ ಮುಂದುವರೆಯುತ್ತೇವೆ," ಎಂದು ತಿಳಿಸಿದರು.
ಮೊದಲ ಪಂದ್ಯದ ಸೋಲಿನ ಬಳಿಕ, ಇಂಗ್ಲೆಂಡ್‌ನ ಅತಿ ಆಕ್ರಮಣಕಾರಿ ವಿಧಾನವನ್ನು ಮಾಜಿ ಕ್ರಿಕೆಟಿಗರು ತೀವ್ರವಾಗಿ ಟೀಕಿಸಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲ ದಿನದ ಕೊನೆಯಲ್ಲಿ 8 ವಿಕೆಟ್‌ಗೆ 393 ರನ್ ಗಳಿಸಿದ್ದಾಗ, ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ನಿರ್ಧರಿಸಿದರು. ಉಳಿದ 20 ನಿಮಿಷಗಳಲ್ಲಿ ಪ್ರವಾಸಿ ತಂಡ ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಆದರೆ, ಆಸೀಸ್ ತಂಡದ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಸವಾಲಿನ ಅವಧಿಯಲ್ಲಿ ಯಾವುದೇ ವಿಕೆಟ್ ಬೀಳದಂತೆ ಮುನ್ನೆಚ್ಚರಿಕೆಯಿಂದ ಆಡಿದ ಕಾರಣ, ಆತಿಥೇಯ ತಂಡದ ಯೋಜನೆಯು ಸಫಲವಾಗಲಿಲ್ಲ.
ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್
ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ವಿಕೆಟ್ ಮಾತ್ರ ತೆಗೆದುಕೊಂಡರು. ಅವರು 38 ಓವರ್‌ಗಳನ್ನು ಎಸೆದು 109 ರನ್ ನೀಡಿ 1 ವಿಕೆಟ್ ಪಡೆದಿದ್ದರು.
ಜೇಮ್ಸ್ ಆಂಡರ್ಸನ್ ಹೊರತುಪಡಿಸಿ, ಇಂಗ್ಲೆಂಡ್ ತಂಡಕ್ಕೆ ಕಾಡುತ್ತಿರುವ ಮತ್ತೊಂದು ಚಿಂತೆಯೆಂದರೆ ಅದು ಮೊಯಿನ್ ಅಲಿ. ಏಕೆಂದರೆ, ಮೊದಲ ಪಂದ್ಯದ ಸಮಯದಲ್ಲಿ ಸ್ಪಿನ್ ಆಲ್‌ರೌಂಡರ್ ತನ್ನ ಬೆರಳಿನ ಮೇಲೆ ಗುಳ್ಳೆಗಳಿಂದ ನೋವು ಅನುಭವಿಸಿದರು.
ಹೀಗಾಗಿ, ಮೊಯಿನ್ ಅಲಿ ಅವರಿಗೆ ಬ್ಯಾಕಪ್ ಸ್ಪಿನ್ನರ್ ಆಗಿ ರೆಹಾನ್ ಅಹ್ಮದ್ ಅವರನ್ನು ಬುಧವಾರ, ಜೂನ್ 28ರಂದು ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications