
ಇಂಗ್ಲೆಂಡ್ 400 ರನ್ ಗಳಿಸಲಿದೆ ಎಂದಿದ್ದ ವಾನ್
ಏಕದಿನ ಸರಣಿಯ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಮೈಕಲ್ ವಾನ್ ಭಾರತದ ವಿರುದ್ಧ ಇಂಗ್ಲೆಂಡ್ ತಂಡ 400 ರನ್‌ಗಳಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಸ್ಕಾಟ್ಲೆಂಡ್ ವಿರುದ್ಧದ ಇಂಗ್ಲೆಂಡ್ ನೀಡಿದ್ದ ಪ್ರದರ್ಶನವನ್ನು ಉಲ್ಲೇಖಿಸಿ ಈ ಆತ್ಮ ವಿಶ್ವಾಸದ ಮಾತುಗಳನ್ನಾಡಿದ್ದರು. ಆದರೆ ಈ ಅತಿ ಆತ್ಮವಿಶ್ವಾಸದ ಮಾತುಗಳಿಂದ ಇದೀಗ ಸ್ವತಃ ಮೈಕಲ್ ವಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧದ ಪ್ರದರ್ಶನ ಉಲ್ಲೇಖಿಸಿದ್ದ ವಾನ್
ಈ ಸಂದರ್ಭದಲ್ಲಿ ಮೈಕಲ್ ವಾನ್ ಇಂಗ್ಲೆಂಡ್ ತಂಡ ಇತ್ತೀಚೆಗೆ ನೆದರ್ಲೆಂಡ್ಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯವನ್ನು ಉಲ್ಲೇಖಿಸಿದ್ದರು. "ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಈ ಪಿಚ್ ಫ್ಲ್ಯಾಟ್ ಆಗಿದೆ. ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ 498 ರನ್‌ಗಳನ್ನು ಗಳಿಸಿತ್ತು, ಇದು ಭಾರತದ ವಿರುದ್ಧವೂ ಅಸಾಧ್ಯವಲ್ಲ. ಆದರೆ ಭಾರತದ ವಿರುದ್ಧ ಇಂಗ್ಲೆಂಡ್ ತಂಡ 400 ರನ್‌ಗಳಿಸಿದರೆ ನನಗೆ ಅಚ್ಚರಿಯಾಗಲಾರದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಮೈಕಲ್ ವಾನ್. ಈ ಮೂಲಕ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ಬೃಹತ್ ಮೊತ್ತವನ್ನು ಗಳಿಸುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೂರ್ಣ ಪ್ರಮಾಣದ ಬ್ಯಾಟಿಂಗ್ ವಿಭಾಗದೊಂದಿಗೆ ಕಣಕ್ಕೆ!
ಇಂಗ್ಲೆಂಡ್ ತಂಡ ಸುದೀರ್ಘ ಕಾಲದ ಬಳಿಕ ಪೂರ್ಣ ಪ್ರಮಾಣದ ಬ್ಯಾಟಿಂಗ್ ಲೈನ್‌ಅಪ್‌ನೊಂದಿಗೆ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿತ್ತು. 2019ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಈ ಬಲಿಷ್ಠ ಬ್ಯಾಟಿಂಗ್ ವಿಭಾಗ ಜೊತೆಯಾಗಿ ಕಣಕ್ಕಿಳಿದಿತ್ತು. ಆದರೆ ಬಲಿಷ್ಠ ಆಟಗಾರರ ಪಡೆಯಿದ್ದರೂ ಭಾರತೀಯ ಬೌಲಿಂಗ್ ವಿಭಾಗದ ಅದ್ಭುತ ಪ್ರದರ್ಶನದ ಮುಂದೆ ಇಂಗ್ಲೆಮಡ್ ದುರ್ಬಲವಾಗಿ ಕಾಣಿಸಿತ್ತು. ಅದರಲ್ಲೂ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಪ್ರಮುಖ ಐವರು ದಾಂಡಿಗರು ಕೇವಲ 25 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡಿದ್ದರು.

ಮೈಕಲ್ ವಾನ್‌ಗೆ ಇಂಥಾ ಮುಖಭಂಗ ಹೊಸತಲ್ಲ
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್‌ವಾನ್ ಈ ರೀತಿ ಬವಿಷ್ಯ ನುಡಿದು ಮುಖಭಂಗಕ್ಕೆ ಒಳಗಾಗುವುದು ಹೊಸತೇನೂ ಅಲ್ಲ. ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಹೀಗೆ ಆಗಿತ್ತು. ಅದರಲ್ಲೂ ಟೀಮ್ ಇಂಡಿಯಾ ಪರವಾಗಿ ನಕಾರಾತ್ಮಕವಾಗಿ ಭವಿಷ್ಯ ನುಡಿದು ಪದೇ ಪದೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ತಮಾಷೆಗೆ ಒಳಗಾಗುತ್ತಿದ್ದಾರೆ ಮೈಕಲ್ ವಾನ್.


Click it and Unblock the Notifications












