For Quick Alerts
ALLOW NOTIFICATIONS  
For Daily Alerts
 

Eng vs Ned 2ನೇ ODI: ಜೇಸನ್ ರಾಯ್, ಫಿಲ್ ಸಾಲ್ಟ್ ಅಬ್ಬರ; ಇಂಗ್ಲೆಂಡ್‌ಗೆ ಸರಣಿ ಜಯ

Eng vs Ned 2nd ODI: Jason Roy, Phil Salt Power Hitting Batting; England Clinch Series With 2-0

ಆಮ್‌ಸ್ಟರ್‌ಡ್ಯಾಮ್‌ನ ಹೊರವಲಯದ ವಿಆರ್‌ಎ ಕ್ರಿಕೆಟ್ ಮೈದಾನದಲ್ಲಿ 2ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ನೆದರ್‌ಲ್ಯಾಂಡ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಇಂಗ್ಲೆಂಡ್ ಭಾನುವಾರ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು 2-0 ಅಂತರದಿಂದ ಜಯಿಸಿತು.

ಭಾನುವಾರ (ಜೂನ್ 19) ರಂದು ನಡೆದ ತನ್ನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಆರು ವಿಕೆಟ್‌ಗಳಿಂದ ನೆದರ್ಲೆಂಡ್ಸ್ ಅನ್ನು ಸೋಲಿಸಿತು. ಆದರೆ ಇಂಗ್ಲೆಂಡ್ ಅದ್ಭುತ ದಾಖಲೆ-ಮುರಿಯುವ ಮೊದಲ ಪಂದ್ಯದ ಗೆಲುವಿಗಿಂತ ಹೆಚ್ಚು ಶ್ರಮಿಸುವಂತೆ ಮಾಡಿತು.

41 ಓವರ್‌ಗಳಲ್ಲಿ 236-7 ರನ್ನುಗಳ ಗುರಿ

41 ಓವರ್‌ಗಳಲ್ಲಿ 236-7 ರನ್ನುಗಳ ಗುರಿ

ನೆದರ್‌ಲ್ಯಾಂಡ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಇಯಾನ್ ಮಾರ್ಗನ್ ನಾಯಕತ್ವದ ತಂಡಕ್ಕೆ 41 ಓವರ್‌ಗಳಲ್ಲಿ 236-7 ರನ್ನುಗಳ ಗುರಿಯನ್ನು ನಿಗದಿಪಡಿಸಿತು. ನೆದರ್‌ಲ್ಯಾಂಡ್ಸ್ ಪರ ಟಾಂಗಾ ಮೂಲದ ಸ್ಕಾಟ್ ಎಡ್ವರ್ಡ್ಸ್ 73 ಎಸೆತಗಳಲ್ಲಿ 78 ರನ್ ಗಳಿಸಿ ತವರಿನ ಅಭಿಮಾನಿಗಳಿಗೆ ಬ್ಯಾಟಿಂಗ್ ರಸದೌತಣ ನೀಡಿದರು.

ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬ್ಯಾಟ್ಂಗ್ ಸ್ನೇಹಿ ಪಿಚ್ ಮತ್ತು ಔಟ್‌ಫೀಲ್ಡ್‌ನಲ್ಲಿ ಒದ್ದೆಯಾದ ತೇಪೆಗಳು ಒಣಗಲು ಅಂಪೈರ್‌ಗಳು ಕಾಯುವುದರೊಂದಿಗೆ ಪಂದ್ಯದ ಆರಂಭವನ್ನು ವಿಳಂಬಗೊಳಿಸಲಾಯಿತು.

ಜೇಸನ್ ರಾಯ್ (73) ಮತ್ತು ಫಿಲ್ ಸಾಲ್ಟ್ (77)

ಜೇಸನ್ ರಾಯ್ (73) ಮತ್ತು ಫಿಲ್ ಸಾಲ್ಟ್ (77)

ಇನ್ನು ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಜೇಸನ್ ರಾಯ್ (73) ಮತ್ತು ಫಿಲ್ ಸಾಲ್ಟ್ (77) ಮೊದಲ ವಿಕೆಟ್‌ಗೆ 139 ರನ್ ಜೊತೆಯಾಟ ಗಳಿಸಿದಾಗ ಇಂಗ್ಲೆಂಡ್ ಗೆಲುವಿನತ್ತ ದಾಪುಗಾಲಿಟ್ಟಿತ್ತು. ಆದರೆ ಇವರಿಬ್ಬರನ್ನೂ ಆರ್ಯನ್ ದತ್ ಔಟ್ ಮಾಡಿದರು. ನಂತರ ಬಂದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಡಕ್‌ಗೆ ಔಟಾದರು ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಟಿಮ್ ಪ್ರಿಂಗಲ್ ಅವರ ಬೌಲಿಂಗ್‌ನಲ್ಲಿ ನಾಲ್ಕು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆದರೂ ಇಂಗ್ಲೆಂಡ್ ಎಂದಿಗೂ ಯಾವುದೇ ನಿಜವಾದ ಅಪಾಯದಲ್ಲಿ ಸಿಲುಕಲಿಲ್ಲ. ಕೊನೆಯಲ್ಲಿ ಡೇವಿಡ್ ಮಲಾನ್ ಮತ್ತು ಮೊಯಿನ್ ಅಲಿ 29 ಎಸೆತಗಳು ಬಾಕಿ ಇರುವಂತೆಯೇ ಆತಿಥೇಯ ತಂಡವನ್ನು ಸೋಲಿಸಿದರು. ಶುಕ್ರವಾರದ ಪಂದ್ಯದಲ್ಲಿ ಜೋಸ್ ಬಟ್ಲರ್, ಮಲಾನ್ ಮತ್ತು ಸಾಲ್ಟ್ ಎಲ್ಲರೂ ಶತಕಗಳನ್ನು ಗಳಿಸಿದ್ದರು. ಇನ್ನು ಲಿವಿಂಗ್‌ಸ್ಟೋನ್ ಇಂಗ್ಲೆಂಡ್‌ನ ವೇಗದ ಏಕದಿನ ಅರ್ಧಶತಕ (17 ಎಸೆತಗಳು) ಗಳಿಸಿದ್ದರು. ಹೀಗಾಗಿ ಇಂಗ್ಲೆಂಡ್ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ್ದ 481 ರನ್ ತಮ್ಮ ಹಿಂದಿನ ದಾಖಲೆಯನ್ನು ಮುರಿದರು.

100ನೇ, 150ನೇ ಏಕದಿನ ಪಂದ್ಯವಾಡಿದ ರಾಯ್ ಮತ್ತು ಬಟ್ಲರ್

100ನೇ, 150ನೇ ಏಕದಿನ ಪಂದ್ಯವಾಡಿದ ರಾಯ್ ಮತ್ತು ಬಟ್ಲರ್

ಈ ಮಧ್ಯೆ ಇಂಗ್ಲೆಂಡ್ ಬ್ಯಾಟರ್‌ಗಳಾದ ಜೇಸನ್ ರಾಯ್ ಮತ್ತು ಜೋಸ್ ಬಟ್ಲರ್ ಈಗ ಕ್ರಮವಾಗಿ ತಮ್ಮ 100ನೇ ಮತ್ತು 150ನೇ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡರು. ಭಾನುವಾರ ಆಮ್‌ಸ್ಟೆಲ್‌ವೀನ್‌ನ ವಿಆರ್‌ಎ ಕ್ರಿಕೆಟ್ ಮೈದಾನದಲ್ಲಿ ನೆದರ್ಲೆಂಡ್ಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಈ ಮಹತ್ವದ ಹೆಗ್ಗುರುತನ್ನು ತಲುಪಿದರು.

ಎರಡೂ ಬ್ಯಾಟರ್‌ಗಳು ಇಂಗ್ಲೆಂಡ್‌ನ ಸೀಮಿತ-ಓವರ್‌ಗಳ ತಂಡದ ಅತ್ಯಂತ ಪ್ರಮುಖ ಭಾಗವಾಗಿದ್ದಾರೆ. ಇದಕ್ಕೂ ಮೊದಲು ಆಡಿದ 149 ಪಂದ್ಯಗಳಲ್ಲಿ ಜೋಸ್ ಬಟ್ಲರ್ 40.34 ಸರಾಸರಿಯಲ್ಲಿ 4,034 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 10 ಶತಕ ಮತ್ತು 20 ಅರ್ಧ ಶತಕಗಳು ಸಿಡಿದಿವೆ. ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 162 ಆಗಿದೆ. ಅವರು ನೆದರ್ಲ್ಯಾಂಡ್ಸ್ ವಿರುದ್ಧದ ಹಿಂದಿನ ಏಕದಿನ ಪಂದ್ಯದಲ್ಲಿ ಕೇವಲ 70 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 14 ಸಿಕ್ಸರ್‌ಗಳನ್ನು ಬಾರಿಸಿದರು. ಇದರಿಂದ ಇಂಗ್ಲೆಂಡ್ 232 ರನ್‌ಗಳ ಅಂತರದಿಂದ ಗೆದ್ದಿತು.

11 ನಾಯಕರು ಬಂದು ಹೋದ್ರೂ ದಿನೇಶ್ ಕಾರ್ತಿಕ್‌ ಮಾತ್ರ ಟೀಂ‌ ಇಂಡಿಯಾದಲ್ಲಿ ತಳವೂರಿದ್ದೇ ರೋಚಕ | Oneindia Kannada
ಜೇಸನ್ ರಾಯ್ 39.77 ಸರಾಸರಿಯಲ್ಲಿ 3,659 ರನ್

ಜೇಸನ್ ರಾಯ್ 39.77 ಸರಾಸರಿಯಲ್ಲಿ 3,659 ರನ್

ಗಮನಾರ್ಹವೆಂದರೆ, ಆ ಪಂದ್ಯದಲ್ಲಿ ಇಂಗ್ಲೆಂಡ್ ಅತ್ಯಧಿಕ ಏಕದಿನ ಮೊತ್ತವನ್ನು 498/4 ದಾಖಲಿಸಿತ್ತು. ಅಲ್ಲದೆ, ಇದಕ್ಕೂ ಮೊದಲು ಆಡಿದ 99 ಪಂದ್ಯಗಳಲ್ಲಿ, ಜೇಸನ್ ರಾಯ್ 39.77 ಸರಾಸರಿಯಲ್ಲಿ 3,659 ರನ್ ಗಳಿಸಿದ್ದಾರೆ. ಒಂಬತ್ತು ಶತಕಗಳು ಮತ್ತು 20 ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ದಾಖಲಾಗಿದ್ದು, ಅವರ ಅತ್ಯುತ್ತಮ ವೈಯಕ್ತಿಕ ಸ್ಕೋರ್ 180 ಆಗಿದೆ.

ನೆದರ್‌ಲ್ಯಾಂಡ್ಸ್ 41 ಓವರ್‌ಗಳಲ್ಲಿ 235/7 (ಸ್ಕಾಟ್ ಎಡ್ವರ್ಡ್ಸ್ 78, ಬಾಸ್ ಡಿ ಲೀಡೆ 34; ಡೇವಿಡ್ ವಿಲ್ಲಿ 2/46, ಆದಿಲ್ ರಶೀದ್ 2/50) ಇಂಗ್ಲೆಂಡ್: 36.1 ಓವರ್‌ಗಳಲ್ಲಿ 239/4 (ಫಿಲ್ ಸಾಲ್ಟ್ 77, ಜೇಸನ್ ರಾಯ್ 73, ಮೊಯಿನ್ ಅಲಿ 42 ನಾಟೌಟ್)

Story first published: Monday, June 20, 2022, 13:35 [IST]
Other articles published on Jun 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+