For Quick Alerts
ALLOW NOTIFICATIONS  
For Daily Alerts
 

ENG vs NED: ಜೇಸನ್ ರಾಯ್ ಭರ್ಜರಿ ಶತಕ, ನೆದರ್ಲೆಂಡ್ಸ್‌ ವಿರುದ್ಧ ಇಂಗ್ಲೆಂಡ್‌ಗೆ ಸುಲಭ ಜಯ

jos butler

ನೆದರ್ಲೆಂಡ್ಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಸುಲಭವಾಗಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಆತಿಥೇಯರ ವಿರುದ್ಧ ವೈಟ್‌ವಾಶ ಜಯ ಸಾಧಿಸಿದೆ.

ಆಮ್‌ಸ್ಟೀಲ್ವಿನ್‌ನ ವಿಆರ್‌ಎ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ನೆದರ್ಲೆಂಡ್ಸ್‌ ತಂಡವನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕ ಬ್ಯಾಟರ್ ವಿಕ್ರಮ್ ಜಿತ್ ಸಿಂಗ್ ಡೇವಿಡ್ ವಿಲ್ಲಿಗೆ ವಿಕೆಟ್‌ ಒಪ್ಪಿಸಿದ್ರು. ಇದಾದ ಬಳಿಕ ಹೋರಾಟ ಪ್ರದರ್ಶಿಸಿದ ಕ್ರಿಕೆಟ್ ಶಿಶು ನೆದರ್ಲೆಂಡ್‌ ಮಧ್ಯಮ ಕ್ರಮಾಂಕದ ಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದಾಗಿ 244 ರನ್‌ಗಳಿಸಲಷ್ಟೇ ಶಕ್ತವಾಯ್ತು.

ನೆದರ್ಲೆಂಡ್ಸ್ ಪರ ಮ್ಯಾಕ್ಸ್ ಓವ್ಡ್‌ 50, ಟಾಮ್ ಕೂಪರ್ 33, ಬಾಸ್ ಡಿ ಲೀಡ್ 56, ನಾಯಕ ಎಡ್ವರ್ಡ್‌ 64 ರನ್‌ ಕಲೆಹಾಕಿದರು. ಉಳಿದ ಆರು ಜನರು ಬ್ಯಾಟರ್‌ಗಳಲ್ಲಿ ಇಬ್ಬರು ಶೂನ್ಯಕ್ಕೆ ಔಟಾದ್ರೆ, ಮೂವರು ಸಿಂಗಲ್‌ ಡಿಜಿಟ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಪರಿಣಾಮ ನೆದರ್ಲೆಂಡ್ಸ್‌ 49.2 ಓವರ್‌ಗಳಲ್ಲಿ 244ರನ್‌ಗಳಿಗೆ ಸರ್ವಪತನಗೊಂಡಿದೆ. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ನಾಲ್ಕು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡ್ರು.

ಈ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಪರ ಇಂಗ್ಲೆಂಡ್ ಅತಿ ಸುಲಭವಾಗಿ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ 85ರನ್‌ಗಳ ಜೊತೆಯಾಟ ಮೂಡಿಬಂದಿತು. 39 ಎಸೆತಗಳಲ್ಲಿ 49 ರನ್ ಸಿಡಿಸಿದ್ದ ಫಿಲಿಪ್ ಸಾಲ್ಟ್‌ ಒಂದು ರನ್‌ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡು ಪೆವಿಲಿಯನ್ ಸೇರಿಕೊಂಡರು. ಇದರ ನಂತರದಲ್ಲೇ ಡೇವಿಡ್ ಮಲನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದು ಇಂಗ್ಲೆಂಡ್‌ಗೆ ಕೊಂಚ ಆಶ್ಚರ್ಯ ಮೂಡಿಸಿತು.

ಆದ್ರೆ ನಂತರದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಹಾಗೂ ನಾಯಕನಾಗಿ ಕಣಕ್ಕಿಳಿದ ಜಾಸ್ ಬಟ್ಲರ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ನಾಯಕನಿಗೆ ಸಾಥ್ ಕೊಟ್ಟ ಓಪನರ್ ಜೇಸನ್ ರಾಯ್ 86 ಎಸೆತಗಳಲ್ಲಿ ಅಜೇಯ 101 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಇನ್ನೂ ಕಳೆದ ಪಂದ್ಯದಲ್ಲಿ ದಾಖಲೆಯ ಶತಕ ದಾಖಲಿಸಿದ್ದ ಜಾಸ್ ಬಟ್ಲರ್ 64 ಎಸೆತಗಳಲ್ಲಿ ಅಜೇಯ 86 ರನ್ ಸಿಡಿಸಿ ಮಿಂಚಿದರು. ಇವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿತ್ತು. ಜೇಸನ್ ರಾಯ್ ಮತ್ತು ಬಟ್ಲರ್ ಅಬ್ಬರದಿಂದಾಗಿ ಇಂಗ್ಲೆಂಡ್ ಕೇವಲ 30.1 ಓವರ್‌ಗಳಲ್ಲಿಯೇ ಗುರಿ ತಲುಪಿ ಪಂದ್ಯವನ್ನ ಜಯಿಸಿತು. ಅಲ್ಲದೆ ಸರಣಿಯನ್ನು 3-0 ಅಂತರದಲ್ಲಿ ವೈಟ್‌ವಾಶ್ ಮಾಡಿ ಗೆದ್ದಿದೆ.

ಅಜೇಯ 101 ರನ್ ಕಲೆಹಾಕಿದ ಜೇಸನ್ ರಾಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ್ರು.

ಉಭಯ ತಂಡಗಳ ಪ್ಲೇಯಿಂಗ್ 11

ನೆದರ್ಲೆಂಡ್ಸ್‌ ಪ್ಲೇಯಿಂಗ್ 11
ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಟಾಮ್ ಕೂಪರ್, ಬಾಸ್ ಡಿ ಲೀಡ್, ಸ್ಕಾಟ್ ಎಡ್ವರ್ಡ್ಸ್ (ನಾಯಕ ಮತ್ತು ವಿಕೆಟ್ ಕೀಪರ್), ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ಟಿಮ್ ಪ್ರಿಂಗಲ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್, ಫ್ರೆಡ್ ಕ್ಲಾಸೆನ್

ಇಂಗ್ಲೆಂಡ್ ಪ್ಲೇಯಿಂಗ್ 11
ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಬ್ರೈಡನ್ ಕಾರ್ಸೆ, ಡೇವಿಡ್ ಪೇನ್

Story first published: Thursday, June 23, 2022, 10:11 [IST]
Other articles published on Jun 23, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+