
ಈ ಬಾರಿಯ ಐಪಿಎಲ್ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಗರಿಗೆದರಿದ್ದು, ಇಂಗ್ಲೆಂಡ್ ಏಕಕಾಲಕ್ಕೆ 2 ತಂಡಗಳೊಂದಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಹಾಗೂ ನೆದರ್ಲೆಂಡ್ಸ್ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ.
ಹೌದು, ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ವಿರುದ್ಧ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಂಡಿರುವ ಇಂಗ್ಲೆಂಡ್ ಆತಿಥೇಯ ನೆದರ್ಲೆಂಡ್ಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿದಿದೆ. ನೆದರ್ಲೆಂಡ್ಸ್ ವಿರುದ್ಧದ ಈ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಜೋಸ್ ಬಟ್ಲರ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಇನ್ನು ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ಈ 3 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು ಎರಡೂ ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಜಯ ಗಳಿಸಿ ಸರಣಿಯಲ್ಲಿ 2 - 0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಸೋತಿರುವ ನೆದರ್ಲೆಂಡ್ಸ್ ತೃತೀಯ ಏಕದಿನ ಪಂದ್ಯದಲ್ಲಿ ಗೆದ್ದು ತವರಿನಲ್ಲಿ ವೈಟ್ ವಾಷ್ ಮುಖಭಂಗವನ್ನು ತಪ್ಪಿಸಿಕೊಳ್ಳಬೇಕಿದೆ.
ಇತ್ತಂಡಗಳ ನಡುವಿನ ತೃತೀಯ ಏಕದಿನ ಪಂದ್ಯ ಇಂದು ( ಜೂನ್ 22 ) ಅಮ್ಸ್ಟೆಲ್ವೀನ್ ವಿ ಆರ್ ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಿನ ತೃತೀಯ ಏಕದಿನ ಪಂದ್ಯದ ಲೈವ್ ಸ್ಕೋರ್ ಇಲ್ಲಿದೆ:
ಆಡುವ ಬಳಗಗಳು
ಇಂಗ್ಲೆಂಡ್ ಆಡುವ ಬಳಗ: 1 ಜೇಸನ್ ರಾಯ್, 2 ಫಿಲ್ ಸಾಲ್ಟ್, 3 ಡೇವಿಡ್ ಮಲನ್, 4 ಜೋಸ್ ಬಟ್ಲರ್ (ಕ್ಯಾಪ್ಟನ್/ವಾಕ್), 5 ಲಿಯಾಮ್ ಲಿವಿಂಗ್‌ಸ್ಟೋನ್, 6 ಮೊಯಿನ್ ಅಲಿ, 7 ಸ್ಯಾಮ್ ಕರ್ರನ್, 8 ಡೇವಿಡ್ ವಿಲ್ಲಿ, 9 ಬ್ರೈಡನ್ ಕಾರ್ಸೆ, 10 ಆದಿಲ್ ರಶೀದ್ ಮತ್ತು 11 ಡೇವಿಡ್ ಪೇನ್
ನೆದರ್ಲೆಂಡ್ಸ್ ಆಡುವ ಬಳಗ: 1 ವಿಕ್ರಮಜಿತ್ ಸಿಂಗ್, 2 ಮ್ಯಾಕ್ಸ್ ಒ'ಡೌಡ್, 3 ಟಾಮ್ ಕೂಪರ್, 4 ಬಾಸ್ ಡಿ ಲೀಡ್, 5 ಸ್ಕಾಟ್ ಎಡ್ವರ್ಡ್ಸ್ (ಕ್ಯಾಪ್ಟ್/ವಾಕ್), 6 ತೇಜ ನಿಡಮನೂರು, 7 ಲೋಗನ್ ವ್ಯಾನ್ ಬೀಕ್, 8 ಟಿಮ್ ಪ್ರಿಂಗಲ್, 9 ಆರ್ಯನ್ ದತ್, 10 ಪಾಲ್ ವ್ಯಾನ್ ಮೀಕೆರೆನ್ ಮತ್ತು 11 ಫ್ರೆಡ್ ಕ್ಲಾಸೆನ್