Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs NZ 2nd Test: ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸಿದ ಕಿವೀಸ್

New zealand

ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲ ದಿನದಾಟದಲ್ಲಿ ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿದೆ.

ಟಾಪ್ ಆರ್ಡರ್ ಸಾಧಾರಣ ಪ್ರದರ್ಶನ ನಡುವೆ ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಡೆರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಆಧಾರವಾಗಿದ್ದು, ಅರ್ಧಶತಕದ ಮೂಲಕ ತಂಡದ ಸ್ಕೋರನ್ನು 300ರ ಗಡಿ ದಾಟಿಸಿದ್ದಾರೆ.

ನ್ಯೂಜಿಲೆಂಡ್ 1 ನೇ ದಿನದ ಅಂತ್ಯಕ್ಕೆ ಡ್ಯಾರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಅತ್ಯುತ್ತಮ ಪ್ರದರ್ಶನದ ಮೂಲಕ ಮೊದಲ ದಿನದಾಟದ ಗೌರವ ಸಂಪಾದಿಸಿದೆ. ಕಿವೀಸ್ ಪರ ಮಿಚೆಲ್ ಮತ್ತು ಬ್ಲಂಡೆಲ್ ಪ್ರಸ್ತುತ ಕ್ರಮವಾಗಿ 81 ಮತ್ತು 67 ರನ್ ಗಳಿಸಿ ಅಜೇಯರಾಗಿದ್ದಾರೆ.

ನ್ಯೂಜಿಲೆಂಡ್ ಒಂದು ಹಂತದಲ್ಲಿ ಟಾಪ್ ಆರ್ಡರ್ ವೈಫಲ್ಯದಿಂದ ನಾಲ್ಕು ವಿಕೆಟ್ ನಷ್ಟಕ್ಕೆ 169ರನ್ ಕಲೆಹಾಕಿತ್ತು. ನಾಯಕ ಟಾಮ್ ಲಥಾಮ್ 26, ವಿಲ್ ಯಂಗ್ 47, ಡೆವೊನ್ ಕಾನ್ವೆ 46, ಹೆನ್ರಿ ನಿಕೊಲ್ಸ್ 30ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಅಜೇಯ 149 ರನ್‌ಗಳ ಜೊತೆಯಾಟವನ್ನು ನೀಡಿ ನ್ಯೂಜಿಲೆಂಡ್‌ಗೆ ಮೊದಲ ದಿನದ ಗೌರವವನ್ನು ನೀಡಿದರು.

ಇದಕ್ಕೂ ಮೊದಲು, ಬೆನ್ ಸ್ಟೋಕ್ಸ್ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ನಡುವಿನ 77 ರನ್‌ಗಳ ಜೊತೆಯಾಟವನ್ನು ಅಂತ್ಯಗೊಳಿಸಿದ್ದರು. ನಿಕೋಲ್ಸ್ ಅವರು 30 ರನ್ ಗಳಿಸಿದ ನಂತರ ನಿರ್ಗಮಿಸಿದರು. ಶೀಘ್ರದಲ್ಲೇ ಜೇಮ್ಸ್ ಆಂಡರ್ಸನ್ ಡೆವೊನ್ ಕಾನ್ವೇ ಅವರನ್ನು ಔಟ್‌ ಮಾಡಿದರು. ಈ ಮೂಲಕ ನ್ಯೂಜಿಲೆಂಡ್ 42 ಓವರ್‌ಗಳ ಒಳಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪರ ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ನ್ಯೂಜಿಲೆಂಡ್‌ಗೆ ಅತ್ಯುತ್ತಮ ಆರಂಭವನ್ನು ಒದಗಿಸಿದರು. ಇವರಿಬ್ಬರು 84 ರನ್‌ಗಳ ಜೊತೆಯಾಟವನ್ನು ನಡೆಸಿದರು ಮತ್ತು ಅಂತಿಮವಾಗಿ ಬೆನ್ ಸ್ಟೋಕ್ಸ್ ಅವರು ಯಂಗ್ ಅವರನ್ನು 47 ರನ್‌ಗಳಿಗೆ ಔಟ್ ಮಾಡಿದರು. ನಂತರದ ಓವರ್‌ನಲ್ಲಿ ಜೇಮ್ಸ್ ಆಂಡರ್ಸನ್ ಟಾಮ್ ಲ್ಯಾಥನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ ಮತ್ತು ನಾಯಕ ಬೆನ್‌ ಸ್ಟೋಕ್ಸ್ ತಲಾ ಎರಡು ವಿಕೆಟ್ ಪಡೆದಿದ್ದಾರೆ. ನ್ಯೂಜಿಲೆಂಡ್ 4 ವಿಕೆಟ್ ನಷ್ಟಕ್ಕೆ 318 ರನ್ ಕಲೆಹಾಕಿದೆ.

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪ್ಲೇಯಿಂಗ್ 11

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಕೈಲ್ ಜೇಮಿಸನ್, ಟಿಮ್ ಸೌಥಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್

Story first published: Saturday, June 11, 2022, 0:05 [IST]
Other articles published on Jun 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+