Eng vs NZ 2nd Test: 2ನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ರೋಚಕ ಗೆಲುವು ಸಾಧಿಸಿದ್ದು, ಇನ್ನೊಂದು ಟೆಸ್ಟ್ ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.
ನ್ಯೂಜಿಲೆಂಡ್ ನೀಡಿದ್ದ 299ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಪರ ಜಾನಿ ಬೈಸ್ಟ್ರೋವ್ ವೇಗದ ಶತಕ ಹಾಗೂ ನಾಯಕ ಬೆನ್‌ಸ್ಟೋಕ್ಸ್ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಅಂತಿಮ ದಿನದಾಟದಲ್ಲಿ ಗುರಿ ತಲುಪಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 284ರನ್‌ಗಳಿಗೆ ಆಲೌಟ್ ಆದ ನ್ಯೂಜಿಲೆಂಡ್ 298ರನ್‌ಗಳ ಮುನ್ನಡೆ ಸಾಧಿಸಿತು. ಈ ಗುರಿಯನ್ನ ಬೆನ್ನತ್ತಲು ಇಂಗ್ಲೆಂಡ್‌ಗೆ 72 ಓವರ್‌ಗಳು ಬಾಕಿ ಉಳಿದಿದ್ದವು.
ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಜಾಕ್ ಕ್ರಾವ್ಲಿ, ಒಲ್ಲಿ ಪೋಪ್, ಜೋ ರೂಟ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು.
ಈ ವೇಳೆ ಓಪನರ್ ಅಲೆಕ್ಸ್ ಹೇಲ್ಸ್ ಮತ್ತು ಜಾನಿ ಬೈಸ್ಟೋವ್ ಆರಂಭಿಕ ಕುಸಿತ ಕಂಡ ತಂಡವನ್ನ ಮೇಲೆತ್ತಿದರು. ಹೇಲ್ಸ್ 44ರನ್ ಕಲೆಹಾಕಿ ಸೌಥಿಗೆ ವಿಕೆಟ್ ಒಪ್ಪಿಸಿದ ಬಳಿಕ ಅಬ್ಬರದ ಆಟವಾಡಿದ ಜಾನಿ ಬೈಸ್ಟ್ರೋವ್ ಟೆಸ್ಟ್ ಕ್ರಿಕೆಟ್ ಅನ್ನೋದನ್ನೇ ಮರೆತಂತೆ ಬ್ಯಾಟ್ ಬೀಸಿದರು. 92 ಎಸೆತಗಳಲ್ಲಿ 136 ರನ್ ಸಿಡಿಸಿದ ಬೈಸ್ಟ್ರೋವ್ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಏಳು ಅಮೋಘ ಸಿಕ್ಸರ್‌ಗಳಿದ್ದವು.
ಇನ್ನು ಬೈಸ್ಟ್ರೋವ್‌ಗೆ ಉತ್ತಮ ಸಾಥ್ ನೀಡಿದ ನಾಯಕ ಬೆನ್‌ಸ್ಟೋಕ್ಸ್ 70 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಬೆನ್ ಸ್ಟೋಕ್ಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 4 ಬೌಂಡರಿಗಳಿದ್ದವು.
50 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 299ರನ್‌ಗಳ ಗುರಿ ಮುಟ್ಟಿದ ಇಂಗ್ಲೆಂಡ್ ಐದು ವಿಕೆಟ್‌ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications