ENG vs NZ: ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್: ಮತ್ತೆ ಕಣಕ್ಕಿಳಿಯಲು ಸಜ್ಜಾದ ದಿಗ್ಗಜ ವೇಗಿಗಳು!

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗಲಿದೆ. ಎರಡು ತಂಡಗಳು ಕೂಡ ಬಲಿಷ್ಠ ತಂಡಗಳೊಂದಿಗೆ ಕಣಕ್ಕಿಳಿಯಲಿ ಸಜ್ಜಾಗಿದ್ದು ಈ ಸರಣಿ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಈ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಆಡುವ 11 ಆಟಗಾರರ ಬಳಗವನ್ನು ಪ್ರಕಡಿಸಿದ್ದು ಈ ತಂಡದಲ್ಲಿ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವಕಾಶ ಪಡೆದುಕೊಂಡಿದ್ದಾರೆ.
ಮೊದಲ ಪಂದ್ಯಕ್ಕೆ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳಲಿದೆ.ಇನ್ನು ಈ ಸರಣಿಗೂ ಮುನ್ನ ಪ್ರವಾಸಿ ನ್ಯೂನಿಲೆಂಡ್ ತಂಡ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದು ಸಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದರೆ ಕೌಂಟಿ ಸೆಲೆಕ್ಟ್ XI ವಿರುದ್ಧ ಕಿವೀಸ್ ಬಳಗ ಸೋಲು ಅನುಭವಿಸಿತ್ತು.

ಮ್ಯಾಥ್ಯೂ ಪಾಟ್ಸ್ ಪದಾರ್ಪಣೆ
ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಇಬ್ಬರು ಅನುಭವಿ ವೇಗಿಗಳು ಸ್ಥಾನವನ್ನು ಪಡೆಯುವ ಜೊತೆಗೆ ಓರ್ವ ಆಟಗಾರ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಆಡುವ ಅವಕಾಶವನನು ಗಿಟ್ಟಿಸಿಕೊಂಡಿದ್ದಾರೆ. ಡರ್ಹಮ್‌ನ ವೇಗಿ ಮ್ಯಾಥ್ಯೂ ಪಾಟ್ಸ್ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪರವಾಗಿ ಟೆಸ್ಟ್ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ಯಾಫ್ ಧರಿಸಿದ 704ನೇ ಆಟಗಾರ ಎನಿಸಲಿದ್ದಾರೆ.

ಸ್ಟೋಕ್ಸ್, ಮೆಕ್ಕಲಮ್‌ಗೆ ಹೊಸ ಜವಾಬ್ಧಾರಿ
ಇನ್ನು ಇಂಗ್ಲೆಂಡ್ ತಂಡದ ನಾಯಕತ್ವದಿಂದ ಜೋ ರೂಟ್ ಕೆಳಗಿಳಿದ ಬಳಿಕ ನಡೆಯುತ್ತಿರುವ ಮೊದಲ ಸರಣಿ ಇದಾಗಿದ್ದು ಪೂರ್ಣ ಪ್ರಮಾಣದ ನಾಯಕನಾಗಿ ಬೆನ್ ಸ್ಟೋಕ್ಸ್‌ಗೆ ಮೊದಲ ಸವಾಲಾಗಿದೆ. ಇನ್ನು ಟೆಸ್ಟ್ ತಂಡದ ನೂತನ ಕೋಚ್ ಆಗಿ ನೇಮಕವಾಗಿರುವ ಬ್ರೆಂಡನ್ ಮೆಕ್ಕಲಮ್ ಅವರಿಗೂ ಇದು ಮೊದಲ ಸರಣಿಯಾಗಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿದ್ದು ಜೂನ್ 2ರಿಂದ ಜೂನ್ 27ರವರೆಗೆ ಈ ಸರಣಿ ನಡೆಯಲಿದೆ. ಲಾರ್ಡ್ಸ್, ಟ್ರೆಂಟ್ ಬ್ರಿಡ್ಜ್ ಹಾಗೂ ಹೆಡಿಂಗ್ಲೆಯಲ್ಲಿ ಈ ಮೂರು ಪಂದ್ಯಗಳು ಆಯೋಜನೆಯಾಗಲಿದೆ.

ಮತ್ತೆ ತಂಡ ಸೇರಿಕೊಂಡ ದಿಗ್ಗಜರು
ಇನ್ನು ಇಂಗ್ಲೆಂಡ್ ತಂಡ ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಆಶನ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು 4-0 ಅಂತರದಿಂದ ಸರಣಿಯನ್ನು ಕಳೆದುಕೊಂಡಿತ್ತು. ಅದಾದ ಬಳಿಕ ಕೆಲ ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ದಿಗ್ಗಜ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಕೂಡ ಈ ಆಟಗಾರರಲ್ಲಿ ಸೇರಿದ್ದು ವೆಸ್ಟ್ ಇಂಡೀಸ್ ವಿರುದ್ಧಧ ಸರಣಿಯಿಮದ ಈ ಇಬ್ಬರು ಆಟಗಾರರನ್ನು ಕೂಡ ಕೈಬಿಡಲಾಗಿತ್ತು. ಆದರೆ ಇದೀಗ ಈ ಇಬ್ಬರು ಆಟಗಾರರು ಮತ್ತೆ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಒಲ್ಲಿ ಪೋಪ್, ಜೋ ರೂಟ್, ಜೊನಾಥನ್ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮ್ಯಾಥ್ಯೂ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications