Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs NZ: ಮೂರನೇ ಟೆಸ್ಟ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಸಂಕಷ್ಟ, ಡೆವೊನ್ ಕಾನ್ವೆಗೆ ಕೊರೊನಾ ಪಾಸಿಟಿವ್

Devon conway

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೆಗೆ ಕೊರೊನಾ ಪಾಸಿಟಿವ್ ಆಗಿದ್ದು, ಬುಧವಾರ ಲಂಡನ್‌ನಲ್ಲಿ ಪಿಸಿಆರ್‌ ಧನಾತ್ಮಕ ಪರೀಕ್ಷೆ ನಡೆಸಲಾಯಿತು. ಅವರು ಐದು ದಿನಗಳ ಕಾಲ ಐಸೋಲೇಶನ್‌ನಲ್ಲಿರುತ್ತಾರೆ.

ಜೂನ್ 23 ರಿಂದ 27 ರವರೆಗೆ ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲಿಯಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಟೆಸ್ಟ್‌ಗೆ ಅವರು ಲಭ್ಯರಾಗುತ್ತಾರೆಯೇ ಎಂಬಕುರಿತು ಯಾವುದೇ ಖಚಿತ ಮಾಹಿತಿ ಹೊರಬಂದಿಲ್ಲ. ಕಾನ್ವೇ ಜೊತೆಗೆ, ನ್ಯೂಜಿಲೆಂಡ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಮತ್ತು ಇಬ್ಬರು ಸಹಾಯಕ ಸಿಬ್ಬಂದಿ ಕೂಡ ಕೊರೊನಾದಿಂದ ಪ್ರಭಾವಿತರಾಗಿದ್ದಾರೆ. ಬುಧವಾರ ಸಂಜೆ ಲಂಡನ್‌ಗೆ ಬಂದ ನಂತರ ಪಿಸಿಆರ್‌ ಪರೀಕ್ಷೆಯಲ್ಲಿ ಕಾನ್ವೇ ಪಾಸಿಟಿವ್‌ ಎಂದು ತಿಳಿದುಬಂದಿದೆ.

ಅವರೊಂದಿಗೆ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್, ಸಹಾಯಕ ಸಿಬ್ಬಂದಿ ವಿಜಯ್ ವಲ್ಲಭ್ (ಫಿಸಿಯೋ) ಮತ್ತು ಕ್ರಿಸ್ ಡೊನಾಲ್ಡ್ಸನ್ ಇದ್ದರು. ಅವರು ಕೂಡ ಕ್ವಾರಂಟೈನ್‌ಗೆ ಹೋಗಲಿದ್ದಾರೆ. ಈ ಕುರಿತಾಗಿ ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತವಾಗಿ ಘೋಷಿಸಿದೆ. ಅವರು ಅಂತಿಮ ಟೆಸ್ಟ್‌ಗೆ ಲಭ್ಯರಾಗುತ್ತಾರೆ ಎಂದು ನ್ಯೂಜಿಲೆಂಡ್ ತಂಡದ ಆಡಳಿತವು ಭರವಸೆ ಹೊಂದಿದೆ. ಆದ್ದರಿಂದ ಕಾನ್ವೇ ಮತ್ತು ಬ್ರೇಸ್‌ವೆಲ್ ಬದಲಿಗೆ ಮತ್ತೊಬ್ಬ ಆಟಗಾರ ಲಭ್ಯರಾಗುತ್ತಾರೆ ಎಂದು ನಮೂದಿಸಲಾಗಿಲ್ಲ.

ಟ್ರೆಂಟ್ ಬಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗೆ ಮುನ್ನ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೊರೊನಾದಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ವಿಲಿಯಮ್ಸನ್ ಎರಡನೇ ಟೆಸ್ಟ್ ನಿಂದ ಹೊರಗುಳಿಯಬೇಕಾಯಿತು. ಅವರ ಅನುಪಸ್ಥಿತಿಯಲ್ಲಿ ಟಾಮ್ ಲ್ಯಾಥಮ್ ತಂಡದ ನಾಯಕರಾಗಿದ್ದರು. ಬ್ರೇಸ್‌ವೆಲ್ ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ ನ್ಯೂಜಿಲೆಂಡ್ ತಂಡದ ಎರಡನೇ ಕೊರೊನಾ ಪಾಸಿಟಿವ್ ಆದ ಆಟಗಾರನಾಗಿದ್ದು, ಇದೀಗ ಡೆವೊನ್ ಕಾನ್ವೆ ಕೂಡ ಇದಕ್ಕೆ ಸೇರಿಕೊಂಡಿದ್ದಾರೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಜಾನಿ ಬೈರ್‌ಸ್ಟೋವ್ (136) ವೇಗದ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು. ಮೂರು ಟೆಸ್ಟ್‌ಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಇಂಗ್ಲೆಂಡ್ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಒಂದು ಹಂತದಲ್ಲಿ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 93/4 ಆಗಿತ್ತು, ಇಂಗ್ಲೆಂಡ್ ಪಂದ್ಯವನ್ನು ಡ್ರಾ ಮಾಡಲು ಪ್ರಯತ್ನಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾಯಕ ಬೆನ್ ಸ್ಟೋಕ್ಸ್ (ಔಟಾಗದೆ 75) ಬೈರ್‌ಸ್ಟೋವ್ ಅವರ ಅಬ್ಬರದ ಆಟದಿಂದಾಗಿ ಇಂಗ್ಲೆಂಡ್ ಪಂದ್ಯವನ್ನ ಐದು ವಿಕೆಟ್‌ಗಳಿಂದ ಜಯಿಸಿತು.

Story first published: Friday, June 17, 2022, 9:49 [IST]
Other articles published on Jun 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+