ತವರಿನಲ್ಲೇ ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಇಂಗ್ಲೆಂಡ್ ವಿರುದ್ಧದ ವೈಟ್‌ವಾಶ್ ಅವಮಾನ!

17 ವರ್ಷಗಳ ಬಳಿಕ ಪಾಕಿಸ್ತಾನ ನೆಲದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡ ಪಾಕ್ ಪಡೆಗೆ ಭಾರೀ ಮುಖಭಂಗವನ್ನುಂಟು ಮಾಡಿದೆ. ಪಾಕಿಸ್ತಾನ ತನ್ನ ತವರಿನಲ್ಲಿಯೇ ಇಂಗ್ಲೆಂಡ್ ವಿರುದ್ಧ ವೈಟ್‌ಬಾಶ್ ಅವಮಾನಕ್ಕೆ ತುತ್ತಾಗಿದೆ. ಕರಾಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಪಾಕಿಸ್ತಾನ ಹೀನಾಯ ಸೋಲು ಅನುಭವಿಸುವ ಮೂಲಕ ಟೆಸ್ಟ್ ಸರಣಿಯನ್ನು ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ 0-3 ಅಂತರದಿಂದ ಬಿಟ್ಟುಕೊಟ್ಟಿದೆ.
ಮತ್ತೊಮ್ಮೆ ಸರ್ವಾಂಗೀಣ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಪಾಕಿಸ್ತಾನ ಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 167 ರನ್‌ಗಳ್ನು ಸ್ವೀಕರಿಸಿದ ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡ ತನ್ನ ಆಕ್ರಮಣಕಾರಿ ಶೈಲಿಯಲ್ಲಿ ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆದ ಇಂಗ್ಲೆಂಡ್
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿ ಆತಿಥೇಯ ಪಾಕಿಸ್ತಾನ 304 ರನ್‌ಗಳನ್ನು ಗಳಿಸಿತು. ನಾಯಕ ಬಾಬರ್ ಅಜಂ 78 ರನ್‌ಗಳ ಕೊಡುಗೆ ನೀಡಿದರೆ ಅಘಾ ಸಲ್ಮಾನ್ ಕೂಡ ಅರ್ಧ ಶತಕ ಸಿಡಿಸಿದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಹ್ಯಾರಿ ಬ್ರೂಕ್ ಅವರ ಭರ್ಜರಿ ಶತಕದ ನೆರವಿನಿಂದಾಗಿ 354 ರನ್‌ಗಳನ್ನು ಗಳಿಸಿತು. ಹೀಗಾಗೊ ಮೊದಲ ಇನ್ನಿಂಗ್ಸ್‌ನಲ್ಲಿ 50 ರನ್‌ಗಳ ಮುನ್ನಡೆ ಪಡೆಯುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು.

ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ ಪಾಕ್
ಇನ್ನು ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ಆರಂಭದಿಂದಲೇ ಸ್ಪಿನ್ ದಾಳಿ ನಡೆಸುವ ಮೂಲಕ ಇಂಗ್ಲೆಂಡ್ ತಂಡ ಭರ್ಜರಿ ರಣತಂತ್ರ ಹೆಣೆಯಿತು. ಇಂಗ್ಲೆಂಡ್ ತಂಡದ ಸ್ಪಿನ್ನರ್‌ಗಳ ದಾಳಿಯನ್ನು ಎದುರಿಸಿದಲು ಪಾಕ್ ಪಡೆ ಸಂಪೂರ್ಣವಾಗಿ ವಿಫಲವಾಯಿತು. ಅದರಲ್ಲೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ಯುವ ಆಟಗಾರ ರೆಹಾನ್ ಅಹ್ಮದ್ ಬೌಲಿಂಗ್ ದಾಳಿಗೆ ಪಾಕ್ ಪಡೆ ಆಘಾತ ಅನುಭವಿಸಿತು. ಐದು ವಿಕೆಟ್ ಪಡೆದ ರೆಹಾನ್ ಚೊಚ್ಚಲ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಾಕ್ ಲೀಚ್ ಕೂಡ 3 ವಿಕೆಟ್ ಪಡೆದು ಮಿಂಚಿದರು. ಜೋ ರೂಟ್ ಹಾಗೂ ಮಾರ್ಕ್ ವುಡ್ ತಲಾ ಒಂದು ವಿಕೆಡ್ ಪಡೆಯುವ ಮೂಲಕ ಪಾಕಿಸ್ತಾನ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 216 ರನ್‌ಗಳಿಸಿತು. ಇದರ ಪರಿಣಾಮವಾಗಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಎರಡನೇ ಇನ್ನೀಂಗ್ಸ್‌ನಲ್ಲಿ ಕೇವಲ 167 ರನ್‌ಗಳ ಸುಲಭ ಸವಾಲು ದೊರೆಯಿತು.

ಸ್ಪೋಟಕ ಬ್ಯಾಟಿಂಗ್ 8 ವಿಕೆಟ್‌ಗಳ ಅಂತರದ ಸುಲಭ ಗೆಲುವು
ಇದನ್ನು ಬೆನ್ನಟ್ಟಿದ ಬೆನ್ ಸ್ಟೋಕ್ಸ್ ಪಡೆ ಮೂರನೇ ದಿನದಂತಯ್ಯದಲ್ಲಿಯೇ 17 ಓವರ್‌ಗಳಲ್ಲಿ 112 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು ಗೆಲುವಿನ ಸನಿಹಕ್ಕೆ ತಲುಪಿತ್ತು. ಹಾಗಾಗಿ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡಕ್ಕೆ ಕೇವಲ 55 ರನ್‌ಗಳ ಅಗತ್ಯವಿತ್ತು. ಇಂದು ಇಂಗ್ಲೆಂಡ್ ದಾಂಡಿಗರಾದ ಬೆನ್ ಡಕೆಟ್ ಹಾಗೂ ಬೆನ್ ಸ್ಟೋಕ್ಸ್ ಭರ್ಕರಿಯಾಗಿ ಬೆನ್ನಟ್ಟಿ ಗೆಲುವು ಸಾರಿದರು. ಬೆನ್ ಡಕೆಟ್ 78 ಎಸೆತಗಳಲ್ಲಿ 82 ರನ್‌ಗಳನ್ನು ಗಳಿಸಿ ಮಿಂಚಿದರು. ಈ ಮೂಲಕ ಇಂಗ್ಲೆಂಡ್ ತಂಡ ಈ ಸರಣಿಯ ಮೂರನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ 74 ರನ್‌ಗಳ ಅಂತರದಿಂದ ಇಂಗ್ಲೆಂಡ್‌ಗೆ ಸೋತಿದ್ದ ಪಾಕಿಸ್ತಾನ ಎರಡನೇ ಪಂದ್ಯದಲ್ಲಿ 26 ರನ್‌ಗಳ ಅಂತರದ ಸೋಲು ಅನುಭವಿಸಿತ್ತು.

ಇತ್ತಂಡಗಳ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಸೌದ್ ಶಕೀಲ್, ಫಹೀಮ್ ಅಶ್ರಫ್, ನೌಮನ್ ಅಲಿ, ಮೊಹಮ್ಮದ್ ವಾಸಿಮ್ ಜೂನಿಯರ್, ಅಬ್ರಾರ್ ಅಹ್ಮದ್
ಬೆಂಚ್: ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ಅಲಿ, ಜಾಹಿದ್ ಮಹಮೂದ್, ಸರ್ಫರಾಜ್ ಅಹ್ಮದ್
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ವಿಲ್ ಜ್ಯಾಕ್ಸ್, ಜೇಮ್ಸ್ ಆಂಡರ್ಸನ್, ಜೇಮೀ ಓವರ್ಟನ್, ಕೀಟನ್ ಜೆನ್ನಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications