ಪಾಕಿಸ್ತಾನದ ರುಚಿ ಕೆಡಿಸಿದ ಫಿಲಿಪ್ ಸಾಲ್ಟ್: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್!

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ 6ನೇ ಪಂದ್ಯದಲ್ಲಿ ಇಂಗ್ಲೆಂಡ್ ದಾಂಡಿಗರ ಅಬ್ಬರದ ಪ್ರದರ್ಶನಕ್ಕೆ ಪಾಕಿಸ್ತಾನ ಅಕ್ಷರಶಃ ಸ್ಥಬ್ಧವಾಗಿದೆ. ಅದರಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನಕ್ಕೆ ಪಾಕಿಸ್ತಾನದ ಬೌಲರ್‌ಗಳು ಸಂಪೂರ್ಣವಾಗಿ ನಿರುತ್ತರವಾಗಿದ್ದಾರೆ. ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 8 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದೆ.
ಳಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಇಲ್ಲವಾದರೆ ಪಾಕಿಸ್ತಾನ ಈ ಸರಣಿಯನ್ನು ತನ್ನ ವಶಕ್ಕೆ ಪಡೆಯುವುದು ಖಚಿತವಾಗಿತ್ತು. ಆದರೆ ಅದಕ್ಕೆ ಇಂಗ್ಲೆಂಡ್ ತಂಡ ಯಾವುದೇ ಹಂತದಲ್ಲೂ ಅವಕಾಶವನ್ನೇ ನೀಡಿಲ್ಲ. ಮೊದಲಿಗೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಇಂಗ್ಲೆಂಡ್ ಬಳಿಕ ಬಳಿಕ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು ಸಮಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.

ಬಾಬರ್ ಅಜಂ ಭರ್ಜರಿ ಬ್ಯಾಟಿಂಗ್
ಮೊದಲಿಗೆ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತಂಡ ಇಂಗ್ಲೆಂಡ್‌ಗೆ ಸವಾಲಿನ ಗುರಿ ನಿಗದಿಪಡಿಸಿತ್ತು. ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ತಂಡ 170 ರನ್‌ಗಳ ಸವಾಲಿನ ಗುರಿಯನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಗಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಅಜಂ 87 ರನ್‌ಗಳನ್ನು ಗಳಿಸಿದ್ದರು.

ಪಾಕ್ ಬೌಲಿಂಗ್ ಪುಡಿಗಟ್ಟಿದ ಸಾಲ್ಟ್
ಪಾಕಿಸ್ತಾನ ನೀಡಿದ ಈ ಮೊತ್ತವನ್ನು ಬೆನ್ನಟ್ಟಲು ಆರಂಬಿಸಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಆರಂಭಿಸಿದ್ದರು. ಸ್ಪೋಟ ಆರಂಭ ಹೇಗಿತ್ತೆಂದರೆಕೇವಲ ಮೂರು ಓವರ್‌ಗಳಲ್ಲಿಯೇ ಇಂಗ್ಲೆಂಡ್ ತಂಡ 50 ರನ್‌ಗಳ ಗಡಿ ದಾಟಿಯಾಗಿತ್ತು. ಅಲೆಕ್ಸ್ ಹೀಲ್ಸ್ ಹಾಗೂ ಫಿಲಿಪ್ ಸಾಲ್ಟ್ ಮೊದಲ ವಿಕೆಟ್‌ಗೆ ಕೇವಲ 3.5 ಓವರ್‌ಗಳಲ್ಲಿ 55 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟರು. ನಂತರ ಬ್ಯಾಟಿಂಗ್ ಮುಂದುವರಿಸಿದ ಸಾಲ್ಟ್ ಅಬ್ಬರ ಕಡಿಮೆಯಾಗಲೇ ಇಲ್ಲ. ಪಾಕಿಸ್ತಾನ ಬೌಲರ್‌ಗಳಿಗೆ ಸ್ವಲ್ಪವೂ ಅವಕಾಶ ನೀಡದೆ ದಂಡಿಸಿದ ಸಾಲ್ಟ್ ಕೇವಲ 41 ಎಸೆತಗಳಲ್ಲಿ 88 ರನ್‌ಗಳನ್ನು ಗಳಿಸಿದರು. 3 ಸಿಕ್ಸರ್ ಹಾಗೂ 13 ಬೌಂಡರಿಗಳು ಈ ಅದ್ಭುತ ಇನ್ನಿಂಗ್ಸ್‌ನಲ್ಲಿತ್ತು. ಡೇಚಿಡ್ ಮಲನ್ ಹಾಗೂ ಬೆನ್ ದಕೆಟ್ ಕೂಡ ತಲಾ 26 ರನ್‌ಗಳ ಕೊಡುಗೆ ನೀಡಿದ್ದಾರೆ.

ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್
ಅಗ್ರ ಕ್ರಮಾಂಕದ ಆಟಗಾರರ ಅಬ್ಬರದ ಬ್ಯಾಟಿಂಗ್‌ನ ಕಾರಣದಿಂದಾಗಿ ಇಂಗ್ಲೆಂಡ್ ತಂಡ ಪಾಕ್ ನೀಡಿದ್ದ 170 ರನ್‌ಗಳ ಗುರಿಯನ್ನು ಕೇವಲ 14.3 ಓವರ್‌ಗಳಲ್ಲಿಯೇ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಕೇವಲ 2 ವಿಕಳೆದುಕೊಂಡು ಈ ಗೆಲುವು ಸಾಧಿಸಿರುವ ಇಂಗ್ಲೆಂಡ್ ತಂಡ 7 ಪಂದ್ಯಗಳ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವುಯಾಗಿದೆ. ಭಾನುವಾರ ಇದೇ ಮೈದಾನದಲ್ಲಿ ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು ಇಲ್ಲಿ ಗೆದ್ದ ತಂಡ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಇತ್ತಂಡಗಳ ಆಡುವ ಬಳಗ
ಪಾಕಿಸ್ತಾನ ಆಡುವ ಬಳಗ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಮೊಹಮ್ಮದ್ ವಾಸಿಂ ಜೂನಿಯರ್, ಶಹನವಾಜ್ ದಹಾನಿ
ಬೆಂಚ್: ಮೊಹಮ್ಮದ್ ರಿಜ್ವಾನ್, ಹಾರಿಸ್ ರೌಫ್, ಉಸ್ಮಾನ್ ಖಾದಿರ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಅಬ್ರಾರ್ ಅಹ್ಮದ್
ಇಂಗ್ಲೆಂಡ್ ಆಡುವ ಬಳಗ: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ (ಸಿ), ಸ್ಯಾಮ್ ಕುರಾನ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ರೀಸ್ ಟೋಪ್ಲಿ, ರಿಚರ್ಡ್ ಗ್ಲೀಸನ್
ಬೆಂಚ್: ಕ್ರಿಸ್ ವೋಕ್ಸ್, ಮಾರ್ಕ್ ವುಡ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆಲಿ ಸ್ಟೋನ್, ಟಾಮ್ ಹೆಲ್ಮ್, ಲ್ಯೂಕ್ ವುಡ್, ಜೋರ್ಡಾನ್ ಕಾಕ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications