Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs SA 3rd Test: ರಾಣಿ ಎಲಿಜಬೆತ್ ವಿಧಿವಶ, 3ನೇ ಟೆಸ್ಟ್‌ನ 2ನೇ ದಿನದಾಟ ಅಮಾನತು

England vs South africa test

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿದ್ದ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್‌ನ ಎರಡನೇ ದಿನದಾಟವನ್ನು ಅಮಾನತುಗೊಳಿಸಲಾಗಿದೆ. ಗುರುವಾರ ಸಂಜೆ ರಾಣಿ ಎಲಿಜಬೆತ್ ನಿಧನದಿಂದಾಗಿ ಇಡೀ ಇಂಗ್ಲೆಂಡ್ ಶೋಕಕ್ಕೆ ಜಾರಿದ್ದು, ಶುಕ್ರವಾರ ನಡೆಯಬೇಕಿದ್ದ 3 ನೇ ಟೆಸ್ಟ್‌ನ 2 ನೇ ದಿನದಾಟ ಮುಂದೂಡಲ್ಪಟ್ಟಿದೆ.

ಓವಲ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆದ್ರೆ ಮಳೆರಾಯನ ಕಾಟದಿಂದಾಗಿ ಸಂಪೂರ್ಣ ದಿನ ಕೊಚ್ಚಿಹೋಗಿದ್ದಲ್ಲದೆ ಮೊದಲ ದಿನದಾಟ ರದ್ದುಗೊಂಡಿತು.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ಕುರಿತಾಗಿ ಪ್ರಕಟಣೆ ಹೊರಡಿಸಿದ್ದು, ''ಮೆಜೆಸ್ಟಿ ಕ್ವೀನ್ ಎಲಿಜಬೆತ್ II ರ ಮರಣದ ನಂತರ, ಓವಲ್‌ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪುರುಷರ ನಡುವೆ ಶುಕ್ರವಾರದ ಪಂದ್ಯ ಹಾಗೂ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಯಲ್ಲಿ ಎಲ್ಲಾ ನಿಗದಿತ ಪಂದ್ಯಗಳು ನಡೆಯುವುದಿಲ್ಲ. ಶುಕ್ರವಾರದ ನಂತರದ ಪಂದ್ಯಗಳಿಗಾಗಿ, ಸರಿಯಾದ ಸಮಯದಲ್ಲಿ ಅಪ್‌ಡೇಟ್ ನೀಡಲಾಗುತ್ತದೆ. ಈ ಹಿನ್ನೆಲೆಗಾಗಿ, ನಾವು ಇತರ ಕ್ರೀಡೆಗಳು ಮತ್ತು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ, ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ'' ಎಂದು ತಿಳಿಸಿದೆ.

ಮೊದಲ ದಿನದಾಟದಲ್ಲಿ ಒಂದೇ ಒಂದು ಎಸೆತವು ಕಾಣದೆ, ಮಳೆಯಿಂದಾಗಿ ಸಂಪೂರ್ಣ ದಿನದಾಟ ಹಾಳಾಯಿತು. ಈಗಾಗಲೇ ಟೆಸ್ಟ್ ಸರಣಿಯು 1-1ರಿಂದ ಸಮಬಲಗೊಂಡಿದ್ದು ಮೂರನೇ ಟೆಸ್ಟ್‌ ನಿರ್ಣಾಯಕವಾಗಿದ್ದು, ಉಳಿದ ನಾಲ್ಕು ದಿನಗಳಲ್ಲಿ ಸರಣಿಯ ಫಲಿತಾಂಶ ನಿರ್ಧಾರವಾಗಲಿದೆ. ಮೊದಲ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೋಘ ಜಯ ಸಾಧಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11
ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಬೆಂಚ್: ಬೆನ್ ಡಕೆಟ್, ಕ್ರೇಗ್ ಓವರ್ಟನ್, ಮ್ಯಾಟಿ ಪಾಟ್ಸ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ರಿಯಾನ್ ರಿಕೆಲ್ಟನ್, ಖಯಾ ಜೊಂಡೋ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ

ಬೆಂಚ್: ಐಡೆನ್ ಮಾರ್ಕ್ರಾಮ್, ಸೈಮನ್ ಹಾರ್ಮರ್, ಲುಂಗಿ ಎನ್ಗಿಡಿ, ಲುಥೋ ಸಿಪಾಮ್ಲಾ, ಗ್ಲೆಂಟನ್ ಸ್ಟೌರ್ಮನ್

Story first published: Friday, September 9, 2022, 14:42 [IST]
Other articles published on Sep 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+