ಇಂಗ್ಲೆಂಡ್ ತಂಡದಲ್ಲಿ ಭಾರೀ ಬದಲಾವಣೆ: ವಿಂಡೀಸ್ ಪ್ರವಾಸದಿಂದ ಹೊರಬಿದ್ದ ಸ್ಟಾರ್ ಆಟಗಾರರು

ಆಸ್ಟ್ರೇಲಿಯಾ ವಿರುದ್ಧ ನಡೆದ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಅನುಭವಿಸಿದ ಹೀನಾಯ ಸೋಲು ತಂಡವನ್ನು ಕಂಗೆಡಿಸಿದೆ. ಈ ಭಾರೀ ಸೋಲಿನ ಪರಿಣಾಮ ಇಂಗ್ಲೆಂಡ್ ತಂಡದ ಮುಂದಿನ ಪ್ರವಾಸದ ಮೇಲೆ ಬಿದ್ದಿರುವುದು ಸ್ಪಷ್ಟವಾಗಿದೆ. ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ತಂಡದಲ್ಲಿ ಅನುಭವಿ ಬೌಲರ್‌ಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಹೊರಬಿದ್ದಿದ್ದಾರೆ. ಇಷ್ಟ ಮಾತ್ರವಲ್ಲ ತಂಡದ ಪ್ರಮುಖ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕೂಡ ಈ ತಂಡದಿಂದ ಹೊರಬಿದ್ದಿದ್ದು ಅಲೆಕ್ಸ್ ಲೀಸ್ ಹಾಗೂ ಮ್ಯಾಥ್ಯೂ ಫಿಷರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಾರ್ಚ್ 8ರಿಂದ ಆಂಟಿಗುವಾದಲ್ಲಿ ಈ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಇದಕ್ಕಾಗಿ ಇಂಗ್ಲೆಂಡ್ 16 ಸದಸ್ಯರ ಬಳಗವನ್ನು ಇಂದು ಪ್ರಕಟಿಸಿದೆ. ಇಂಗ್ಲೆಂಡ್ ಕಳೆದ ಆಶಸ್ ಪ್ರವಾಸಕ್ಕೆ ತೆರಳಿದ್ದ ತಂಡದೊಂದಿಗೆ ಹೋಲಿಸಿದರೆ ಸಾಕಷ್ಟು ಬದಲಾವಣೆ ಮಾಡಿಕೊಂಡಿದೆ. ಆದರೆ ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಆಂಡರ್ಸನ್ ಹಾಗೂ ಬ್ರಾಡ್ ಜೋಡಿ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 1177 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಸನುಭವಿಸುತ್ತಿರುವ ಅದ್ಭುತ ಯಶಸ್ಸಿನಲ್ಲಿ ಈ ವೇಗಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಹಂಗಾಮಿ ಕಾರ್ಯನಿರ್ವಾಹಕ ನಿರ್ದೇಶಕ ಆಂಡ್ರೋ ಸ್ಟ್ರಾಸ್ ಹೇಳಿಕೆ ಬಿಡುಗಡೆಗೊಳಿಸಿದ್ದು ಈ ಇಬ್ಬರು ಸ್ಟಾರ್ ವೇಗಿಗಳ ವೃತ್ತಿ ಜೀವನ ಇಲ್ಲಿಗೆ ಅಂತ್ಯವಾಯಿತು ಎಂದು ಅರ್ಥವಲ್ಲ. ಮುಂಬರುವ ಪಂದ್ಯಗಳಿಗೆ ಸಮರ್ಥ ವೇಗಿಗಳನ್ನು ಕಂಡುಕೊಳ್ಳುವುದು ಕೂಡ ಅಗತ್ಯವಾಗಿದೆ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ನಂತರ ಇಂಗ್ಲೆಂಡ್ ಮಂಡಳಿಯಲ್ಲಿಯೂ ಸಾಕಷ್ಟು ಬದಲಾವನೆಗಳು ನಡೆದಿದೆ. ಹಲವರು ತಮ್ಮ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಆಶ್ಲೇ ಗಿಲ್ಸ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದರೆ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೂಡ ಕೋಚ್ ಹೊದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ ಸಹಾಯಕ ಕೋಚ್ ಗ್ರಹಾಂ ಟೋರ್ಫೆ ಕೂಡ ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಇದರ ಮುಂದುವರಿದ ಭಾಗ ಎನ್ನುವಂತೆ ಈಗ ತಂಡದಲ್ಲಿಯೂ ಅನೇಕ ಅನುಭವಿ ಆಟಗಾರರಿಗೆ ಕೊಕ್ ಕೊಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಅನುಭವಿಸಿದ 4-0 ಅಂತರದ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ಕೈಗೊಳ್ಳಲಿರುವ ಮತ್ತೊಂದು ಪ್ರಮುಖ ಟೆಸ್ಟ್ ಸರಣಿಯಲ್ಲಿ ಆಶಸ್ ಸರಣಿಯಲ್ಲಿ ಭಾಗಿಯಾಗಿದ್ದ ಅನೇಕ ಆಟಗಾರರು ಹೊರಬಿದ್ದಿದ್ದಾರೆ. ಜೋಸ್ ಬಟ್ಲರ್ ಜೊತೆಗೆ ಡೇವಿಡ್ ಮಲನ್, ಸ್ಯಾಮ್ ಬಿಲ್ಲಿಂಗ್ಸ್, ರೋರಿ ಬರ್ನ್ಸ್, ಹಸೀಬ್ ಹಮೀದ್ ಮತ್ತು ಡಾಮ್ ಬೆಸ್ ಆಶಸ್ ಸರಣಿ ಸೋಲಿನ ನಂತರ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ಇತರ ಬ್ಯಾಟರ್‌ಗಳಾಗಿದ್ದಾರೆ.
ಇಂಗ್ಲೆಂಡ್ ಸ್ಕ್ವಾಡ್ ಹೀಗಿದೆ: ಜೋ ರೂಟ್ (ನಾಯಕ), ಜಾನಿ ಬೈರ್‌ಸ್ಟೋವ್, ಝಾಕ್ ಕ್ರಾಲಿ, ಮ್ಯಾಥ್ಯೂ ಫಿಶರ್, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಅಲೆಕ್ಸ್ ಲೀಸ್, ಸಾಕಿಬ್ ಮಹಮೂದ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications