For Quick Alerts
ALLOW NOTIFICATIONS  
For Daily Alerts
 

Shai Hope: ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ, ವಿವ್ ರಿಚರ್ಡ್ಸ್ ಜಂಟಿ ದಾಖಲೆ ಸರಿಗಟ್ಟಿದ ಶಾಯ್ ಹೋಪ್!

ಭಾನುವಾರ, ಡಿಸೆಂಬರ್ 3ರಂದು ನಾರ್ತ್ ಸೌಂಡ್ ಆಂಟಿಗುವಾದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್ ತಂಡ ಮಾಜಿ ಚಾಂಪಿಯನ್ನರಿಗೆ ಆಘಾತ ನೀಡಿದರು.

ವೆಸ್ಟ್ ಇಂಡೀಸ್ ತಂಡದ ಶಾಯ್ ಹೋಪ್ ಅವರು ಇಂಗ್ಲೆಂಡ್ ವಿರುದ್ಧ ಕೇವಲ 83 ಎಸೆತಗಳಲ್ಲಿ ಅಜೇಯ 109 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಜಂಟಿ ಮೂರನೇ ಅತಿವೇಗದ 5000 ರನ್‌ ಗಳಿಸುವ ಮೂಲಕ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಕೆರಿಬಿಯನ್ ಲೆಜೆಂಡ್ ವಿವ್ ರಿಚರ್ಡ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ತನ್ನ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 326 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದರು. 30ರ ಹರೆಯದ ಶಾಯ್ ಹೋಪ್ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳು ಒಳಗೊಂಡಿದ್ದವು.

ENG vs WI: Shai Hope Equals Virat Kohli and Viv Richards Joint Record in ODI Cricket

ಇದರ ಜೊತೆಗೆ ವಿರಾಟ್ ಕೊಹ್ಲಿ ಮತ್ತು ವಿವ್ ರಿಚರ್ಡ್ಸ್ ತಲಾ 114 ಇನ್ನಿಂಗ್ಸ್‌ಗಳಲ್ಲಿ ತಮ್ಮ 5000 ಏಕದಿನ ರನ್‌ಗಳ ದಾಖಲೆಯನ್ನು ಶಾಯ್ ಹೋಪ್ ಸರಿಗಟ್ಟಿದರು. ಈ ಪಟ್ಟಿಯಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಂ ಅಗ್ರಸ್ಥಾನದಲ್ಲಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಹಾಶಿಮ್ ಆಮ್ಲಾ ಎರಡನೇ ಸ್ಥಾನದಲ್ಲಿದ್ದಾರೆ.

ಬಾಬರ್ ಅಜಂ 97 ಇನ್ನಿಂಗ್ಸ್‌ಗಳಲ್ಲಿ 5000 ಏಕದಿನ ರನ್‌ಗಳ ಹೆಗ್ಗುರುತನ್ನು ತಲುಪಿದ್ದರೆ, ಹಾಶಿಮ್ ಆಮ್ಲಾ 5000 ಏಕದಿನ ರನ್‌ ಪೂರ್ಣಗೊಳಿಸಲು 101 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು.

ವೇಗವಾಗಿ 5000 ಅಂತಾರಾಷ್ಟ್ರೀಯ ಏಕದಿನ ರನ್ ಗಳಿಸಿದ ಆಟಗಾರರು

ಬಾಬರ್ ಅಜಂ - ಪಾಕಿಸ್ತಾನ - 97 ಇನ್ನಿಂಗ್ಸ್
ಹಾಶಿಮ್ ಆಮ್ಲಾ - ದಕ್ಷಿಣ ಆಫ್ರಿಕಾ - 101 ಇನ್ನಿಂಗ್ಸ್
ವಿರಾಟ್ ಕೊಹ್ಲಿ - ಭಾರತ - 114 ಇನ್ನಿಂಗ್ಸ್
ವಿವ್ ರಿಚರ್ಡ್ಸ್ - ವೆಸ್ಟ್ ಇಂಡೀಸ್ - 114 ಇನ್ನಿಂಗ್ಸ್
ಶಾಯ್ ಹೋಪ್ - ವೆಸ್ಟ್ ಇಂಡೀಸ್ - 114 ಇನ್ನಿಂಗ್ಸ್

ENG vs WI: Shai Hope Equals Virat Kohli and Viv Richards Joint Record in ODI Cricket

ಶಾಯ್ ಹೋಪ್ ಇದೀಗ 119 ಏಕದಿನ ಪಂದ್ಯಗಳಲ್ಲಿ 51.52ರ ಸರಾಸರಿಯಲ್ಲಿ ಒಟ್ಟು 5049 ರನ್ ಗಳಿಸಿದ್ದಾರೆ. ಅವರು 50-ಓವರ್‌ಗಳ ಮಾದರಿಯಲ್ಲಿ 16 ಶತಕ ಮತ್ತು 24 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ ವೆಸ್ಟ್ ಇಂಡೀಸ್‌ನ ಬಲಗೈ ಆಟಗಾರ ಶಾಯ್ ಹೋಪ್ 15 ಪಂದ್ಯಗಳಲ್ಲಿ 74.10ರ ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ. ಅವರು 2019ರಲ್ಲಿ 61.13, 2020ರಲ್ಲಿ 47, 2021ರಲ್ಲಿ 62 ಮತ್ತು 2022ರಲ್ಲಿ 35.45ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.

ಒಟ್ಟಾರೆಯಾಗಿ, ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಶಾಯ್ ಹೋಪ್

11ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಮಾಜಿ ಸ್ಫೋಟಕ ಆಟಗಾರ ಕ್ರಿಸ್ ಗೇಲ್ 10,425 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಬ್ರಿಯಾನ್ ಲಾರಾ (10348), ಶಿವನಾರಾಯಣ ಚಂದ್ರಪಾಲ್ (8778) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಆ ಬಳಿಕ ಡೆಸ್ಮಂಡ್ ಹೇನ್ಸ್ (8648), ವಿವ್ ರಿಚರ್ಡ್ಸ್ (6721), ರಿಚಿ ರಿಚರ್ಡ್ಸನ್ (6248), ರಾಮ್‌ನರೇಶ್ ಸರವಣ್ (5804), ಕಾರ್ಲ್ ಹೂಪರ್ (5761), ಮರ್ಲಾನ್ ಸ್ಯಾಮ್ಯುಯೆಲ್ಸ್ (5606) ಮತ್ತು ಗಾರ್ಡನ್ ಗ್ರೀನಿಡ್ಜ್ (5134) ಇದ್ದಾರೆ.

Story first published: Monday, December 4, 2023, 21:20 [IST]
Other articles published on Dec 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+