For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ಪಾಕಿಸ್ತಾನ, ಮೊದಲ ಟೆಸ್ಟ್: 2ನೇ ದಿನದಾಟ, Live ಸ್ಕೋರ್

Engiand vs Pakistan 1st test, day 2 Live score and details, Rawalpindi

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಮೊದಲ ದಿನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆಯ ರನ್ ಪೇರಿಸಿರುವ ಇಂಗ್ಲೆಂಡ್ ತಂಡ ಎರಡನೇ ದಿನವೂ ಈ ಪ್ರದರ್ಶನವನ್ನು ಮುಂದುವರಿಸುವ ಉತ್ಸಾಹದೊಂದಿಗೆ ಕಣಕ್ಕಿಳಿದಿದೆ. ಆದರೆ ಎರಡನೇ ದಿನದಾಟದ ಆರಂಭಿಕ ಹಂತದಲ್ಲಿಯೇ ಪಾಕಿಸ್ತಾನ ಇಂಗ್ಲೆಂಡ್‌ಗೆ ಎರಡು ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.

ಮೊದಲ ದಿನದಾಟದಲ್ಲಿ ಟೆಸ್ಟ್ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಲು ಸಾಧ್ಯವಾಗದ ರೀತಿಯ ಪ್ರದರ್ಶನ ನೀಡಿತು. ಆರಂಭದಿಂದಲೇ ಸ್ಪೋಟಕ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ ಅಂತಿಮ ಹಂತದವರೆಗೂ ಒಂದೇ ರೀತಿಯಾಗಿ ರನ್‌ಗಳಿಸುತ್ತಾ ಸಾಗಿದ್ದು ಮೊದಲ ದಿನದಾಟದಲ್ಲಿ ದಾಖಲೆಯ ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಇದು ನಿಜಕ್ಕೂ ಟೆಸ್ಟ್ ಕ್ರಿಕೆಟಾ ಎಂದು ಅನುಮಾನ ಮೂಡುವಂತೆ ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ ಪಡೆ ಮೊದಲ ದಿನದಲ್ಲಿಯೇ ಬರೊಬ್ಬರಿ 506 ರನ್‌ಗಳಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತು. ಕುತೂಕಲಕಾರಿ ಸಂಗತಿಯೆಂದರೆ ಮೊದಲ ದಿನದಾಟ 15 ಓವರ್‌ಗಳಿಗೆ ಮುನ್ನವೇ ಮಂದ ಬೆಳಕಿನ ಕಾರಣ ಅಂತ್ಯವಾಗಿತ್ತು.

Live ಸ್ಕೋರ್ ಹೀಗಿದೆ

1
54786

ಇಂಗ್ಲೆಂಡ್ ತಂಡದ ಪರವಾಗಿ ಮೊದಲ ದಿನ ನಾಲ್ವರು ಆಟಗಾರರು ಶತಕ ಸಿಡಿಸಿ ಮಿಂಚಿದರು. ಆರಂಭಿಕರಾದ ಜಾಕ್ ಕ್ರಾವ್ಲೆ ಹಾಗೂ ಬೆನ್ ಡಕ್ಕೆಟ್ ಜೋಡಿ ಮೊದಲ ವಿಕೆಟ್‌ಗೆ 233 ರನ್‌ಗಳನ್ನು ಒಟ್ಟುಗೂಡಿಸಿದ ಬಳಿಕ ಈ ಇಬ್ಬರು ಶತಕ ಸಿಡಿಸಿ ವಿಕೆಟ್ ಕಳೆದುಕೊಂಡರು. ಕ್ರಾವ್ಲೆ 122 ರನ್‌ಗಳಿಸಿದರೆ ಡಕ್ಕೆಟ್ 107 ರನ್‌ಗಳಿಸಿದರು. ಬಳಿಕ ಬಂದ ಒಲ್ಲೀ ಪೋಪ್ ಕೂಡ 108 ರನ್‌ಗಳನ್ನು ಗಳಿಸಿದರು. ನಾಲ್ಕನೇ ಆಟಗಾರನಾಗಿ ಶತಕ ಸಿಡಿಸಿದ ಬ್ರೂಕ್ ಕೇವಲ 80 ಎಸೆತಗಳಲ್ಲಿ ಶತಕದ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಕೇವಲ 4 ವಿಕೆಟ್ ಕಳೆದುಕೊಂಡಿದ್ದು 506 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್ ದಾಂಡಿಗ ಬ್ರೂಕ್ ಪಾಕಿಸ್ತಾನದ ಸ್ಪಿನ್ನರ್ ಸೌದ್ ಶಕೀಲ್ ಅವರ ಓವರ್‌ನಲ್ಲಿ ಎಲ್ಲಾ ಆರು ಎಸೆತಗಳನ್ನು ಕೂಡ ಬೌಂಡರಿಗಟ್ಟಿ ಸಾಧನೆ ಮಾಡಿದ್ದಾರೆ.

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಮೊಹಮ್ಮದ್ ಅಲಿ, ಹಾರಿಸ್ ರೌಫ್, ಜಾಹಿದ್ ಮಹಮೂದ್
ಬೆಂಚ್: ಶಾನ್ ಮಸೂದ್, ಮೊಹಮ್ಮದ್ ನವಾಜ್, ಸರ್ಫರಾಜ್ ಅಹ್ಮದ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಕೀಟನ್ ಜೆನ್ನಿಂಗ್ಸ್, ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಜೇಮೀ ಓವರ್ಟನ್, ಮಾರ್ಕ್ ವುಡ್

Story first published: Friday, December 2, 2022, 11:09 [IST]
Other articles published on Dec 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+