ಇಂಗ್ಲೆಂಡ್ vs ಪಾಕಿಸ್ತಾನ ಟೆಸ್ಟ್ ಸರಣಿ, 2ನೇ ಪಂದ್ಯ: 3ನೇ ದಿನದಾಟ, Live ಸ್ಕೋರ್

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡು ದಿನಗಳ ಆಟ ಅಂತ್ಯವಾಗಿದ್ದು ಮೂರನೇ ದಿನದಾಟ ಆರಂಭವಾಗಿದೆ. ಮೊದಲ ದಿನ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆಯ ರನ್ ಪೇರಿಸಿರುವ ಇಂಗ್ಲೆಂಡ್ ತಂಡ ಎರಡನೇ ದಿನವೂ ಈ ಪ್ರದರ್ಶನವನ್ನು ಮುಂದುವರಿಸಿದ್ದು ಬೃಹತ್ ಮೊತ್ತ ದಾಖಲಿಸಿ ಆಲೌಟ್ ಆಯಿತು. ಬಳಿಕ ಪಾಕಿಸ್ತಾನ ಕೂಡ ಬ್ಯಾಟಿಂಗ್ ಆರಂಬಿಸಿದ್ದು ಅದ್ಭುತ ಆರಂಭವನ್ನು ಪಡೆದು ಪ್ರವಾಸಿಗರಿಗೆ ತಿರುಗೇಟು ನೀಡಲು ಸಜ್ಜಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಬರೊಬ್ಬರಿ 657 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ತಂಡದ ಪರವಾಗಿ ಜಾಕ್ ಕ್ರಾವ್ಲೆ, ಡಕ್ಕೆಟ್, ಒಲ್ಲೀ ಪೋಪ್ ಹಾಗೂ ಹ್ಯಾರಿ ಬ್ರೂಬ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದು ಇಂಗ್ಲೆಂಡ್ ಬೃಹತ್ ಮೊತ್ತಕ್ಕೆ ಕಾರಣವಾದರು. ಇಂಗ್ಲೆಂಡ್ ತಂಡದ ಸ್ಪೋಟಕ ಪ್ರದರ್ಶನ ಈ ಇನ್ನಿಂಗ್ಸ್‌ನ ಪ್ರಮುಖ ಹೈಲೈಟ್ಸ್ ಆಗಿತ್ತು.

Live ಸ್ಕೋರ್‌ಕಾರ್ಡ್ ಹೀಗಿದೆ

1
54786

ಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷ

ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿರುವ ಪಾಕಿಸ್ತಾನ ತಂಡ ಕೂಡ ಮೊದಲ ದಿನದಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಯಾವುದೇ ವಿಕೆಟ್ ಕಳೆದುಕೊಳ್ಳದೆ ಪಾಕಿಸ್ತಾನ 181 ರನ್‌ಗಳಿಸಿದ್ದು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿತು. ಅಬ್ದುಲ್ಲಾ ಶಫೀಕ್ 89 ರನ್‌ಗಳಿಸಿದರೆ ಇಮಾಮ್ ಉಲ್ ಹಕ್ 90 ರನ್‌ಗಳಿಸಿ ಎರಡನೇ ದಿನದಾಟದಲ್ಲಿ ಅಜೇಯವಾಗುಳಿದಿದ್ದರು. ಮೂರನೇ ದಿನದಾಟದಲ್ಲಿ ಈ ಇಬ್ಬರು ಆಟಗಾರರು ಕೂಡ ಈಗ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದು ಇಂಗ್ಲೆಂಡ್ ತಂಡಕ್ಕೆ ಭಾರೀ ಸವಾಲಾಗುಳಿದಿದ್ದಾರೆ.

FIFA World Cup: ಪೋರ್ಚುಗಲ್ ವಿರುದ್ಧ 2-1 ಅಂತರದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ ದಕ್ಷಿಣ ಕೊರಿಯಾFIFA World Cup: ಪೋರ್ಚುಗಲ್ ವಿರುದ್ಧ 2-1 ಅಂತರದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ ದಕ್ಷಿಣ ಕೊರಿಯಾ

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನಸೀಮ್ ಶಾ, ಮೊಹಮ್ಮದ್ ಅಲಿ, ಹಾರಿಸ್ ರೌಫ್, ಜಾಹಿದ್ ಮಹಮೂದ್
ಬೆಂಚ್: ಶಾನ್ ಮಸೂದ್, ಮೊಹಮ್ಮದ್ ನವಾಜ್, ಸರ್ಫರಾಜ್ ಅಹ್ಮದ್, ಮೊಹಮ್ಮದ್ ವಾಸಿಂ ಜೂನಿಯರ್, ನೌಮನ್ ಅಲಿ, ಫಹೀಮ್ ಅಶ್ರಫ್, ಅಬ್ರಾರ್ ಅಹ್ಮದ್

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್ (ವಿಕೆಟ್ ಕೀಪರ್), ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟೋನ್, ವಿಲ್ ಜ್ಯಾಕ್ಸ್, ಜ್ಯಾಕ್ ಲೀಚ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಕೀಟನ್ ಜೆನ್ನಿಂಗ್ಸ್, ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಜೇಮೀ ಓವರ್ಟನ್, ಮಾರ್ಕ್ ವುಡ್

For Quick Alerts
ALLOW NOTIFICATIONS
For Daily Alerts
Story first published: Saturday, December 3, 2022, 10:58 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X