PAK vs ENG: ಪಂದ್ಯದ ವೇಳೆ ಗಾಯಗೊಂಡು ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಪಾಕಿಸ್ತಾನ ಟೆಸ್ಟ್ ವೇಳೆ ಗಾಯಕ್ಕೆ ತುತ್ತಾಗಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಪಂದ್ಯದ ಎರಡನೇ ದಿನವಾದ ಶುಕ್ರವಾರ ಫೀಲ್ಡಿಂಗ್ ಮಾಡುವಾಗ ಅವರು ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು.
ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಅವರು ಗಾಯಕ್ಕೆ ತುತ್ತಾಗಿ ನಿರಾಸೆ ಅನುಭವಿಸಿದರು. ಆದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಲಿವಿಂಗ್‌ಸ್ಟೋನ್ ಅಜೇಯ 7 ರನ್ ಗಳಿಸಿದರು. ಆದರೆ, ರನ್ ಓಡುವಾಗ ಅವರು ಸಾಕಷ್ಟು ಕಷ್ಟ ಪಡುತ್ತಿದ್ದರು. ಲಿವಿಂಗ್‌ಸ್ಟೋನ್ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 9 ರನ್ ಗಳಿಸಿದ್ದರು.
"ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಬಲ ಮೊಣಕಾಲು ಗಾಯಕ್ಕೆ ತುತ್ತಾಗಿದ್ದು, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಾಹಿತಿ ನೀಡಿದೆ.
"ಲಿವಿಂಗ್‌ಸ್ಟೋನ್ ಮಂಗಳವಾರ ಇಂಗ್ಲೆಂಡ್‌ಗೆ ವಾಪಸ್ ತೆರಳಲಿದ್ದು, ಇಂಗ್ಲೆಂಡ್ ಮತ್ತು ಲಂಕಾಷೈರ್ ವೈದ್ಯಕೀಯ ತಂಡಗಳು ಅವರನ್ನು ತಪಾಸಣೆ ಮಾಡಲ್ಲಿದ್ದು, ನಂತರ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ"

ಬದಲೀ ಆಟಗಾರನನ್ನು ಹೆಸರಿಸಿಲ್ಲ
ಲಿಯಾಮ್ ಲಿವಿಂಗ್‌ಸ್ಟೋನ್ ಗಾಯಗೊಂಡು ಹೊರ ಬಿದ್ದ ಬಳಿಕ ಬದಲೀ ಆಟಗಾರರನ್ನು ಆಯ್ಕೆ ಮಾಡುವ ಬಗ್ಗೆ ಇಂಗ್ಲೆಂಡ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮೊದಲ ಟೆಸ್ಟ್ ಪಂದ್ಯದ ಮುಕ್ತಾಯದ ಬಳಿಕ ಬದಲೀ ಆಟಗಾರನನ್ನು ಹೆಸರಿಸುವ ಸಾಧ್ಯತೆ ಇದೆ.
ರಾವಲ್ಪಿಂಡಿಯ ಪಿಚ್‌ನಲ್ಲಿ ಇಂಗ್ಲೆಂಡ್‌ನ ನಾಲ್ವರು ಬ್ಯಾಟರ್‌ಗಳು ಶತಕ ಸಿಡಿಸದರೆ, ಪಾಕಿಸ್ತಾನದ ಮೂವರು ಬ್ಯಾಟರ್‌ಗಳು ಶತಕ ಗಳಿಸಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 657 ರನ್ ಗಳಿಸಿ ಆಲೌಟ್ ಆಗಿತ್ತು. ಪಾಕಿಸ್ತಾನ ಕೂಡ ಉತ್ತಮವಾಗಿ ಬ್ಯಾಟ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 579 ರನ್ ಗಳಿಸಿತು.
ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಪಾಕಿಸ್ತಾನ ಗೆಲುವಿಗೆ 343 ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿರುವ ಪಾಕಿಸ್ತಾನ ಉತ್ತಮವಾಗಿ ಆಡುತ್ತಿದೆ. ಕೊನೆಯ ದಿನದಾಟದ ಊಟದ ಸಮಯಕ್ಕೆ 3 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.
ಎರಡನೇ ಟೆಸ್ಟ್ ಡಿಸೆಂಬರ್ 9 ರಂದು ಮುಲ್ತಾನ್‌ನಲ್ಲಿ ಆರಂಭವಾಗಲಿದ್ದು, ಮೂರನೇ ಮತ್ತು ಅಂತಿಮ ಟೆಸ್ಟ್ ಡಿಸೆಂಬರ್ 17 ರಿಂದ ಕರಾಚಿಯಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications