ಫುಟ್ಬಾಲ್ ಕೌಶಲ ಬಳಸಿ ಲಂಕಾ ಬ್ಯಾಟ್ಸ್‌ಮನ್ ಔಟ್ ಮಾಡಿದ ಸ್ಯಾಮ್ ಕರನ್: ವಿಡಿಯೋ

ಕಾರ್ಡಿಫ್: ಇಂಗ್ಲೆಂಡ್‌ನ ಯುವ ಆಲ್ ರೌಂಡರ್ ಸ್ಯಾಮ್ ಕರನ್ ಅದ್ಭುತ ಫುಟ್ಬಾಲ್ ಕೌಶಲಕ್ಕಾಗಿ ಸದ್ದು ಮಾಡುತ್ತಿದ್ದಾರೆ. ಕರನ್ ಫುಟ್ಬಾಲ್ ತಂಡದಲ್ಲಿ ಆಡಬೇಕಿತ್ತು ಎಂದು ಕ್ರೀಡಾಭಿಮಾನಿಗಳು ಹೇಳುತ್ತಿದ್ದಾರೆ. ಕರನ್ ಫುಟ್ಬಾಲ್ ಕೌಶಲ ಬಳಸಿ ಶ್ರೀಲಂಕಾ ಬ್ಯಾಟ್ಸ್‌ಮನ್ ದನುಷ್ಕ ಗುಣತಿಲಕ ಔಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಆತೀಥೇಯರ ವಿರುದ್ಧ ಮೂರು ಪಂದ್ಯಗಳ ಟಿ20ಐ ಸರಣಿ ಆಡುತ್ತಿದೆ. ಇದರಲ್ಲಿ ಕಾರ್ಡಿಫ್‌ನ ಸೋಫಿಯಾ ಗಾರ್ಡನ್‌ನಲ್ಲಿ ಜೂನ್ 24ರಂದು ನಡೆದ ದ್ವಿತೀಯ ಪಂದ್ಯದ ವೇಳೆ ಸ್ಯಾಮ್ ಕರನ್ ಅವರ ಅದ್ಭುತ ಫುಟ್ಬಾಲ್ ಚಳಕ ಕಾಣಸಿಕ್ಕಿತು.
ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಬಂದಿದ್ದ ಅವಿಷ್ಕ ಫೆರ್ನಾಂಡೊ, ಸ್ಯಾಮ್ ಕರನ್ ಅವರ 1.3ನೇ ಓವರ್‌ನಲ್ಲಿ ಚೆಂಡಿಗೆ ಬ್ಯಾಟ್ ತಾಗಿಸಿ ಸಿಂಗಲ್ ರನ್‌ಗಾಗಿ ಓಡಿದರು. ಆದರೆ ರನ್‌ಔಟ್‌ಗೆ ಮುಂದಾದ ಕರನ್ ಕೂಡಲೇ ಚೆಂಡಿಗೆ ಒದ್ದು ಸ್ಟಂಪ್ಸ್ ಉರುಳಿಸಿದರು. ಹೀಗಾಗಿ ರನ್‌ಔಟ್ ಆದ ದನುಷ್ಕ ಗುಣತಿಲಕ ಕೇವಲ 3 ರನ್‌ಗೆ ನಿರ್ಗಮಿಸಬೇಕಾಯ್ತು.
ಕರನ್ ಅವರ ಕಾಳ್ಚಳಕ ನೋಡಿ ಅನೇಕ ಫುಟ್ಬಾಲ್ ಅಭಿಮಾನಿಗಳು ಕರನ್‌ಗೆ ಯೂರೋ 2020 ಕಪ್‌ನಲ್ಲಿ ಇಂಗ್ಲೆಂಡ್ ಫುಟ್ಬಾಲ್ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇತ್ತ ಸ್ಯಾಮ್ ಕೂಡ ಇಂಗ್ಲೆಂಡ್ ತಂಡದಲ್ಲೇನಾದರೂ ಜಾಗ ಇದೆಯೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications