For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಟಿಮ್ ಬ್ರೆಸ್ನಾನ್ ಕ್ರಿಕೆಟ್‌ಗೆ ವಿದಾಯ

Tim bresnan

ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್ ಟಿಮ್ ಬ್ರೆಸ್ನಾನ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ ಎಂದು ಅವರ ಕೌಂಟಿ ಕ್ಲಬ್ ವಾರ್ವಿಕ್‌ಶೈರ್ ಕ್ರಿಕೆಟ್ ಸೋಮವಾರ ಖಚಿತಪಡಿಸಿದೆ.

36 ವರ್ಷ ವಯಸ್ಸಿನ ಬ್ರೆಸ್ನಾನ್ ಕಳೆದ ವರ್ಷ ಏಪ್ರಿಲ್‌ನಲ್ಲಿ ತಮ್ಮ ವಾರ್ವಿಕ್‌ಷೈರ್ ಕ್ಯಾಪ್ ಅನ್ನು ಪಡೆದಿದ್ದರು. ಬ್ಯಾಟ್ ಮತ್ತು ಬಾಲ್‌ನೊಂದಿಗೆ ಪ್ರಮುಖ ಕೊಡುಗೆಗಳ ಮೂಲಕ ತಂಡದ ಪ್ರಮುಖ ಭಾಗವಾಗಿರುವ ಬ್ರೆಸ್ನಾನ್ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

"ಇದು ನನ್ನ ತುಂಬಾ ಕಠಿಣ ನಿರ್ಧಾರ. ಆದರೆ ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ 21 ನೇ ವೃತ್ತಿಪರ ವರ್ಷಕ್ಕೆ ತಯಾರಾಗಲು ನಾನು ಆಫ್-ಸೀಸನ್​ ಉದ್ದಕ್ಕೂ ಶ್ರಮಿಸುತ್ತಿದ್ದೆ. ಆದರೆ ನನ್ನ ಸಹ ಆಟಗಾರರಿಗಾಗಿ ನಾನು ನಿಗದಿಪಡಿಸಿದ ಮಾನದಂಡವನ್ನು ನಾನು ತಲುಪಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆಟದ ಬಗ್ಗೆ ನನ್ನಲ್ಲಿದ್ದ ಹಸಿವು ಮತ್ತು ಉತ್ಸಾಹವು ಎಂದಿಗೂ ಕುಗ್ಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. 2022ರ ಸೀಸನ್‌ನಲ್ಲಿ ನಾನು ಆಡಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ದೇಹವು ಅದಕ್ಕೆ ಸಿದ್ಧವಾಗಿಲ್ಲ. ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಬಹಳ ಹೆಮ್ಮೆಯಿಂದ ನೋಡುತ್ತೇನೆ ಮತ್ತು ವಾರ್ವಿಕ್‌ಷೈರ್ ಮತ್ತು ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ." ಎಂದು ಟಿಮ್ ಬ್ರೆಸ್ನನ್ ವಿದಾಯ ಪತ್ರದಲ್ಲಿ ತಿಳಿಸಿದ್ದಾರೆ.

ಬ್ರೆಸ್ನಾನ್, ಪ್ರಥಮ ದರ್ಜೆಯ ವೃತ್ತಿಜೀವನದಾದ್ಯಂತ, ಬ್ರೆಸ್ನನ್ 7,138 ರನ್ ಗಳಿಸಿದ್ದು ಇದರಲ್ಲಿ ಏಳು ಶತಕಗಳು ಒಳಗೊಂಡಿವೆ. ಇನ್ನು ಬೌಲಿಂಗ್‌ನಲ್ಲೂ ಅಬ್ಬರಿಸಿರುವ ಈ ಆಲ್‌ರೌಂಡರ್ ಒಟ್ಟಾರೆ 575 ವಿಕೆಟ್ ಉರುಳಿಸಿದ್ದಾರೆ.

2006ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬ್ರೆಸ್ನಾನ್ 2009ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದ್ರು. 23 ಟೆಸ್ಟ್ ಪಂದ್ಯಗಳಲ್ಲಿ 575 ರನ್ ಮತ್ತು 72 ವಿಕೆಟ್ ಪಡೆದಿದ್ದಾರೆ.

Team Indiaಗೆ ಬೆಂಗಳೂರಿನಲ್ಲಿ ವಿಶೇಷ ಪಂದ್ಯ ನಡೆಸಲು BCCI ತೀರ್ಮಾನ | Oneindia Kannada

ಇನ್ನು 85 ಏಕದಿನ ಪಂದ್ಯಗಳಲ್ಲಿ 871 ರನ್, 109 ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಆಡಿರುವ 34 ಟಿ20 ಪಂದ್ಯಗಳಲ್ಲಿ 24 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಈತ ಕೊನೆಯ ಬಾರಿಗೆ ಇಂಗ್ಲೆಂಡ್ ಪರ 2015ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವಾಡಿದ್ರು.

Story first published: Monday, January 31, 2022, 22:18 [IST]
Other articles published on Jan 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+