ಇಂಗ್ಲೆಂಡ್ vs ಪಾಕಿಸ್ತಾನ ಟೆಸ್ಟ್ ಸರಣಿ: 2ನೇ ಪಂದ್ಯ ಮಳೆಗೆ ಆಹುತಿ

ಸೌಥಾಂಪ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅತ್ಯಂತ ನೀರಸವಾಗಿ ಡ್ರಾ ಕಂಡಿದೆ. ಪಂದ್ಯಕ್ಕೆ ಐದು ದಿನಗಳ ಕಾಲವೂ ಮಳೆರಾಯ ಅಡ್ಡಿಯುಂಟು ಮಾಡಿದ ಕಾರಣ ಫಲಿತಾಂಶವಿಲ್ಲದೆ ಪಂದ್ಯ ಅಂತ್ಯ ಕಂಡಿದೆ.
ಮೊದಲ ಮೂರು ದಿನಗಳ ಕಾಲ ಅಲ್ಪ ಸ್ವಲ್ಪ ಆಡಲು ಬಿಟ್ಟಿದ್ದ ಮಳೆ ನಾಲ್ಕನೇ ದಿನದಾಟವನ್ನು ಸಂಪೂರ್ಣವಾಗಿ ತಿಂದು ಹಾಕಿತ್ತು. ಐದನೇ ದಿನವೂ ಕೂಡ ಭಾರೀ ಅಡ್ಡಿಯುಂಟು ಮಾಡಿತ್ತು. ಎಷ್ಟರಮಟ್ಟಿಗೆಂದರೆ ಇಂಗ್ಲೆಂಡ್ ತನ್ನ ಮೊದಲ ಸರದಿಯ ಬ್ಯಾಟಿಂಗನ್ನೇ ಪೂರ್ಣಗೊಳಿಸಿರಲಿಲ್ಲ. ಐದು ದಿನಗಳ ಆಟದಲ್ಲಿ 134.3 ಓವರ್‌ಗಳ ಆಟವಷ್ಟೇ ನಡೆದಿತ್ತು.
ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 236 ರನ್ ಗಳಿಸಿ ಆಲ್‌ಔಟ್ ಆಯ್ತು. ಬಳಿಕ ಇಂಗ್ಲೆಂಡ್ ಕಣಕ್ಕಿಳಿದು 110 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಮಳೆಯ ಅಬ್ಬರದ ಮಧ್ಯೆಯೂ ಎರಡೂ ತಂಡಗಳ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದ್ದರು.
ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಕಾಕ್ ಕ್ರಾಲೆ, ಜೋ ರೂಟ್ (ನಾಯಕ), ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ನಾಯಕ), ಬಾಬರ್ ಅಜಮ್, ಅಸಾದ್ ಶಫೀಕ್, ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications