Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್

England announced squad for the first Test against West Indies

ಲಂಡನ್, ಜುಲೈ 4: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ), 13 ಜನರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 8ರಿಂದ ಆರಂಭಗೊಳ್ಳಲಿದೆ.

ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಟೆಸ್ಟ್ ತಂಡದ ಎಂದಿನ ನಾಯಕ ಜೋ ರೂಟ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ರೂಟ್ ಮೊದಲ ಟೆಸ್ಟ್ ನಲ್ಲಿ ಆಡುತ್ತಿಲ್ಲ. ರೂಟ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಹಿಸಿಕೊಳ್ಳಲಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಕೂಡ ಶುಕ್ರವಾರ 15 ಜನರ ವಿಂಡೀಸ್ ತಂಡವನ್ನು ಪ್ರಕಟಿಸಿತ್ತು. ಈ ತಂಡದಲ್ಲಿ ಶಾನನ್ ಗೇಬ್ರಿಯಲ್ ಕೂಡ ಹೆಸರಿಸಲ್ಪಟ್ಟಿದ್ದರು. ವಿಂಡೀಸ್ ಟೆಸ್ಟ್ ತಂಡದಲ್ಲಿ ಸದ್ಯ ನಾಯಕ ಜೇಸನ್ ಹೋಲ್ಡರ್, ಕೆಮರ್ ರೋಚ್, ಚೆಮರ್ ಹೋಲ್ಡರ್, ಅಲ್ಝಾರಿ ಜೋಸೆಫ್ ಮತ್ತು ರೇಮನ್ ರೀಫರ್ ಹೀಗೆ ಒಟ್ಟಿಗೆ 5 ವೇಗಿಗಳು ಹೆಸರಿಸಲ್ಪಟ್ಟಿದ್ದಾರೆ.

ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜೋಫ್ರಾ ಆರ್ಚರ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಝಕ್ ಕ್ರಾಲೆ, ಜೋ ಡೆನ್ಲಿ, ಆಲ್ಲಿ ಪೋಪ್, ಡೊಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ಜೇಸನ್ ಹೋಲ್ಡರ್ (ನಾಯಕ), ಜೆರ್ಮೈನ್ ಬ್ಲ್ಯಾಕ್‌ವುಡ್, ಎನ್‌ಕ್ರುಮಾ ಬೊನ್ನರ್, ಕ್ರೈಗ್ ಬ್ರಾಥ್‌ವೈಟ್, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಹಕೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಚೆಮರ್ ಹೋಲ್ಡರ್, ಶೈ ಹೋಪ್, ಅಲ್ಝಾರಿ ಜೋಸೆಫ್, ರೇಮನ್ ರೀಫರ್ ಮತ್ತು ಕೆಮರ್ ರೋಚ್.

Story first published: Saturday, July 4, 2020, 17:08 [IST]
Other articles published on Jul 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+