For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ದಾಖಲೆ ಮುರಿದ ಜೋ ರೂಟ್‌: ಸಚಿನ್ ದಾಖಲೆ ಟಾರ್ಗೆಟ್

Joe root

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಪ್ರೈಮ್ ಬ್ಯಾಟ್ಸ್‌ಮನ್ ಜೋ ರೂಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 10,191 ರನ್‌ಗಳನ್ನ ಕಲೆಹಾಕಿದ್ದು, ಭಾರತದ ಲೆಜೆಂಡರಿ ಬ್ಯಾಟರ್, ಲಿಟ್ಲ್‌ ಮಾಸ್ಟರ್ ಸುನಿಲ್ ಗವಾಸ್ಕರ್ ದಾಖಲೆಯನ್ನ ಮುರಿದಿದ್ದಾರೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಜೋ ರೂಟ್ ಈ ಸಾಧನೆ ಮಾಡಿದ್ದು ಇಂಗ್ಲೆಂಡ್‌ನ ಮೊತ್ತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ 539ರನ್‌ಗೆ ಆಲೌಟ್‌ ಆಗಿದ್ದು, ಜೋ ರೂಟ್ 176 ರನ್‌ಗಳನ್ನ ಸಿಡಿಸುವ ಮೂಲಕ ಮಿಂಚಿನ ಆಟವಾಡಿದ್ರು.

ಸುನಿಲ್ ಗವಾಸ್ಕರ್ ದಾಖಲೆಯನ್ನ ಕಡಿಮೆ ಇನ್ನಿಂಗ್ಸ್‌ನಲ್ಲಿ ಬ್ರೇಕ್ ಮಾಡಿದ ರೂಟ್

ಸುನಿಲ್ ಗವಾಸ್ಕರ್ ದಾಖಲೆಯನ್ನ ಕಡಿಮೆ ಇನ್ನಿಂಗ್ಸ್‌ನಲ್ಲಿ ಬ್ರೇಕ್ ಮಾಡಿದ ರೂಟ್

1971-1987ರ ಅವಧಿಯಲ್ಲಿ ಸುನಿಲ್‌ ಗವಾಸ್ಕರ್ 125 ಟೆಸ್ಟ್ ಪಂದ್ಯಗಳನ್ನಾಡಿದ್ದು, 51.12ರ ಬ್ಯಾಟಿಂಗ್ ಸರಾಸರಿಯಲ್ಲಿ 10,122 ರನ್‌ಗಳಿಸಿದ್ದಾರೆ. 34 ಶತಕ, 45 ಅರ್ಧಶತಕಗಳನ್ನ ಒಳಗೊಂಡಿರುವ ಇವರ ಇನ್ನಿಂಗ್ಸ್‌ನಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಸರಾಸರಿಯನ್ನ ಉಳಿಸಿಕೊಂಡಿರುವುದು ಇವರ ಬ್ಯಾಟಿಂಗ್ ಸಾಮರ್ಥ್ಯವನ್ನ ಸಾರುತ್ತದೆ.

ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ 2012ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, 10 ವರ್ಷಗಳ ಅವಧಿಯಲ್ಲಿ ಸುನಿಲ್ ಗವಾಸ್ಕರ್ ದಾಖಲೆಯನ್ನ ಮುರಿದು ದಾಖಲೆ ಮಾಡಿದ್ದಾರೆ. 119 ಟೆಸ್ಟ್ ಪಂದ್ಯಗಳಲ್ಲಿ ಜೋ ರೂಟ್‌ 50.20 ಬ್ಯಾಟಿಂಗ್ ಸರಾಸರಿಯಲ್ಲಿ 10191 ರನ್ ಕಲೆಹಾಕಿದ್ದು, 27 ಶತಕ ಮತ್ತು 53 ಅರ್ಧಶತಕ ದಾಖಲಿಸಿದ್ದಾರೆ.

ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ 12ನೇ ಬ್ಯಾಟರ್ ಗವಾಸ್ಕರ್

ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ 12ನೇ ಬ್ಯಾಟರ್ ಗವಾಸ್ಕರ್

ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ 12ನೇ ಬ್ಯಾಟರ್ ಆಗಿ ಬಡ್ತಿ ಪಡೆದಿದ್ದು, ಇಂಗ್ಲೆಂಡ್ ಪರ ಎರಡನೇ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟರ್ ಆಗಿದ್ದಾರೆ. ಅಲೆಸ್ಟರ್ ಕುಕ್ 12,472 ರನ್ ಕಲೆಹಾಕುವ ಮೂಲಕ ಐದನೇ ಸ್ಥಾನ ಪಡೆದಿದ್ದಾರೆ.

ಇನ್ನು ಮೊದಲ ಮೂರು ಸ್ಥಾನವನ್ನು ಸಚಿನ್ ತೆಂಡೂಲ್ಕರ್ (15921), ರಿಕಿ ಪಾಂಟಿಂಗ್ (13378), ಜಾಕ್ವೆಸ್ ಕಾಲಿಸ್ (13289) ರನ್ ಕಲೆಹಾಕಿದ್ದು ಪ್ರಸ್ತುತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ 13288ರನ್‌ಗಳ ಮೂಲಕ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

2021 ರಿಂದ ಅತಿ ಹೆಚ್ಚು ರನ್‌ಗಳು

2021 ರಿಂದ ಅತಿ ಹೆಚ್ಚು ರನ್‌ಗಳು

ರೂಟ್ 2021 ರಿಂದ ಒಟ್ಟು 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 42 ಇನ್ನಿಂಗ್ಸ್‌ಗಳಲ್ಲಿ 2368 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 59.2 ಆಗಿದ್ದು 10 ಶತಕ ಮತ್ತು 4 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಎರಡು ದ್ವಿಶತಕ, ನಾಲ್ಕು ಬಾರಿ 150 ಪ್ಲಸ್ ಸ್ಕೋರ್ ದಾಖಲಿಸಿದ್ದಾರೆ

ರೂಟ್ ತಮ್ಮ ವೃತ್ತಿಜೀವನದಲ್ಲಿ 119 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 219 ಇನ್ನಿಂಗ್ಸ್‌ಗಳಲ್ಲಿ 10191 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 254 ರನ್ ಆಗಿದೆ. ಅವರ ಬ್ಯಾಟಿಂಗ್ ಸರಾಸರಿ 50.20ರಷ್ಟು ಕಾಯ್ದುಕೊಂಡಿದ್ದಾರೆ. ರೂಟ್ 27 ಶತಕ, 5 ದ್ವಿಶತಕ ಮತ್ತು 53 ಅರ್ಧ ಶತಕ ಗಳಿಸಿದ್ದಾರೆ. ಅವರ ಫಾರ್ಮ್ ಹೀಗೆಯೇ ಮುಂದುವರಿದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಲ್ಲಿನ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ದಾಖಲೆ ಮುರಿಯುವ ಸಾಧ್ಯತೆ ಇದೆ.

IPL ನ ಪ್ರತಿ ಪಂದ್ಯ 111 ಕೋಟಿಗೆ ಮಾರಾಟ | *Cricket | OneIndia Kannada
ಕುತೂಹಲ ಮೂಡಿಸಿರುವ ಇಂಗ್ಲೆಂಡ್-ನ್ಯೂಜಿಲೆಂಡ್ 2ನೇ ಟೆಸ್ಟ್‌ನ ಅಂತಿಮ ದಿನದಾಟ

ಕುತೂಹಲ ಮೂಡಿಸಿರುವ ಇಂಗ್ಲೆಂಡ್-ನ್ಯೂಜಿಲೆಂಡ್ 2ನೇ ಟೆಸ್ಟ್‌ನ ಅಂತಿಮ ದಿನದಾಟ

ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವು ಕುತೂಹಲಕ್ಕೆ ಕಾರಣವಾಗಿದ್ದು, ಅಂತಿಮ ದಿನದಾಟದಲ್ಲಿ ಫಲಿತಾಂಶ ಹೊರಬರುವ ಸಾಧ್ಯತೆ ಹೆಚ್ಚಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 14ರನ್‌ಗಳ ಅಲ್ಪ ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 224ರನ್ ಕಲೆಹಾಕಿದೆ. ಈ ಮೂಲಕ 238ರನ್‌ಗಳ ಲೀಡ್ ಪಡೆದಿರುವ ಕಿವೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದ ಡೆರಿಲ್ ಮಿಚೆಲ್ ಅಜೇಯ 32, ಮ್ಯಾಟ್ ಹೆನ್ರಿ 8 ರನ್ ಕಲೆಹಾಕಿ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

Story first published: Tuesday, June 14, 2022, 15:38 [IST]
Other articles published on Jun 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+