ಹಲ್ಲು ಮುರಿದುಕೊಂಡ ಇಂಗ್ಲೆಂಡ್ ವೇಗಿ ಆಂಡರ್ಸನ್ ದ್ವಿತೀಯ ಟೆಸ್ಟ್‌ಗೆ ಲಭ್ಯ

ಲಾರ್ಡ್ಸ್, ಆಗಸ್ಟ್ 07: ಗಾಲ್ಫ್ ಆಡಲು ಹೋಗಿ ಹಲ್ಲು ಮುರಿದುಕೊಂಡಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ದ್ವಿತೀಯ ಟೆಸ್ಟ್ ಆಡಲು ಲಭ್ಯ ಎಂದು ಇಂಗ್ಲೆಂಡ್ ತಂಡ ಹೇಳಿದೆ.
ಕೆಲವು ದಿನಗಳ ಹಿಂದೆ ಗಾಲ್ಫ್ ಆಡಲು ತೆರಳಿದ್ದ ವೇಳೆ ಬೌಲರ್ ಆಂಡರ್ಸನ್ ಹೊಡೆದ ಚೆಂಡು ಎದುರಿಗಿದ್ದ ಮರಕ್ಕೆ ತಾಗಿ ಮರಳಿ ಬಂದು ಆಂಡರ್ಸನ್ ಮೂತಿಗೆ ಬಿದ್ದು ಹಲ್ಲು ಮುರಿದಿತ್ತು.
ಹಲ್ಲು ಮುರಿದುಕೊಂಡಿರುವ ಆಂಡರ್ಸನ್ ಎರಡನೇ ಟೆಸ್ಟ್‌ನಲ್ಲಿ ಆಡುತ್ತಾರೊ ಇಲ್ಲವೊ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಅವರು ಎರಡನೇ ಟೆಸ್ಟ್‌ನಲ್ಲಿ ಆಡುವುದು ಖಾತ್ರಿಯಾಗಿದೆ.
ಆಂಡರ್ಸನ್ ಹಲ್ಲು ಮುರಿದುಕೊಂಡ ವಿಡಿಯೋವನ್ನು ಇಂಗ್ಲೆಂಡ್‌ನ ಮತ್ತೊಬ್ಬ ವೇಗಿ ಸ್ಟುವರ್ಟ್ ಬ್ರಾಡ್ ಟ್ವಿಟ್ಟರ್‌ನಲ್ಲಿ ಹಾಕಿ ಸ್ನೇಹಿತನ ಕಾಲೆಳೆದಿದ್ದರು.
ಭಾರತದ ವಿರುದ್ಧ ಆಗಸ್ಟ್ 9 ರಂದು ಎರಡಬೇ ಟೆಸ್ಟ್ ಆರಂಭವಾಗಲಿದ್ದು, ಲಾರ್ಡ್ಸ್‌ನಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಗೆದ್ದಿರುವ ಇಂಗ್ಲೆಂಡ್ ಭಾರಿ ವಿಶ್ವಾಸದಲ್ಲಿದ್ದರೆ, ಎರಡನೇ ಪಂದ್ಯವನ್ನು ಗೆಲ್ಲುವ ಛಲದಲ್ಲಿ ಭಾರತವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications