ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಬಳಿಕ ಇಂಗ್ಲೆಂಡ್ ಕೋಚ್ ಸಿಲ್ವರ್‌ವುಡ್‌ಗೆ ವಿಶ್ರಾಂತಿ

ಲಂಡನ್: ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಬಳಿಕ ಇಂಗ್ಲೆಂಡ್ ಮುಖ್ಯ ಕೋಚ್ ಕ್ರಿಸ್ ಸಿಲ್ವರ್‌ವುಡ್ ಕೊಂಚಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಈ ಟೆಸ್ಟ್ ಬಳಿಕ ಸ್ವಲ್ಪದಿನಗಳವರೆಗೆ ತಂಡದ ಜವಾಬ್ದಾರಿಯನ್ನು ನಿಯಂತ್ರಣ ಮಂಡಳಿಗೆ ಬಿಟ್ಟುಕೊಡಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಬಳಿಕದ ಸರಣಿಗಳೆಂದರೆ, ತವರಿನಲ್ಲಿ ನಡೆಯಲಿರುವ ಪಾಕಿಸ್ತಾನ್ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಳು. ಕಿವೀಸ್ ವಿರುದ್ಧದ ಟೆಸ್ಟ್ ಸರಣಿ ಜೂನ್ ಆರಂಭದಲ್ಲಿ ಶುರುವಾದರೆ, ಪಾಕ್-ಶ್ರೀಲಂಕಾ ವಿರುದ್ಧದ ಸರಣಿಗಳು ಜೂನ್ ಕೊನೆಗೆ ಆರಂಭಗೊಳ್ಳಲಿದೆ.
ಸಿಲ್ವರ್‌ವುಡ್ ಅನುಪಸ್ಥಿತಿಯಲ್ಲಿ ಅವರ ಸಹ ಕೋಚ್‌ಗಳಾದ ಪಾಲ್ ಕಾಲಿಂಗ್‌ವುಡ್ ಮತ್ತು ಗ್ರಹಾಂ ಥಾರ್ಪ್ ಅವರು ಏಕದಿನ ಸರಣಿಗಳಲ್ಲಿ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಜೂನ್ ಕೊನೇ ಕ್ಷಣ ಮತ್ತು ಜುಲೈ ಮಧ್ಯದವರೆಗೆ ಇಂಗ್ಲೆಂಡ್ ತಂಡವನ್ನು ಪಾಲ್ ಮತ್ತು ಥಾರ್ಪ್ ನಿರ್ವಹಿಸಿಲಿದ್ದಾರೆ.
'ನಾನು ಏಕದಿನ ಸರಣಿಗೆ ನಿಯಂತ್ರಣವನ್ನು ನೀಡುತ್ತೇನೆ. ನಾನು 100% ಕ್ಕಿಂತ ಕಡಿಮೆ ಕಾರ್ಯಾಚರಣೆ ನಡೆಸುತ್ತಿದ್ದರೆ ಅದು ಆಟಗಾರ ನಿಟ್ಟಿನಲ್ಲಿ ನ್ಯಾಯವಲ್ಲ ಮತ್ತು ನನ್ನ ದೃಷ್ಟಿಯಲ್ಲೂ ನ್ಯಾಯವಲ್ಲ,' ಎಂದು ಸಿಲ್ವರ್‌ವುಡ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications