WI vs ENG: ಟಿ20 ಸರಣಿ ಗೆಲ್ಲುವ ಇಂಗ್ಲೆಂಡ್ ಆಸೆ ನುಚ್ಚುನೂರು
ಏಕದಿನ ಸರಣಿಯನ್ನು ವಶಪಡಿಸಿಕೊಂಡಿದ್ದ ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲೂ ತನ್ನ ಹಿಡಿತ ಸಾಧಿಸಿದೆ. ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್ ಮೂರನೇ ಹಾಗೂ ನಾಲ್ಕನೇ ಟಿ20 ಪಂದ್ಯ ಗೆದ್ದು, ಸರಣಿ ಗೆಲುವಿನ ಆಸೆ ಮೂಡಿಸಿತ್ತು. ಆದರೆ ಆಸೆ ಕೈ ಕೊಟ್ಟಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭಿಕ ಫಿಲ್ ಸಾಲ್ಟ್ ಮೂರನೇ ಪಂದ್ಯದಲ್ಲಿ 38 ರನ್ ಗಳಿಗೆ ಆಟ ಮುಗಿಸಿದರು. ನಾಯಕ ಜೋಸ್ ಬಟ್ಲರ್ ಹಾಗೂ ವಿಲ್ ಜಾಕ್ಸ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ.

ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ 28, ಮೋಯಿನ್ ಅಲಿ 23, ಸ್ಯಾಮ್ ಕರನ್ 12 ರನ್ ಬಾರಿಸಿದ್ದು ಬಿಟ್ಟರೆ, ಬೇರೆ ಯಾವ ಬ್ಯಾಟ್ಸ್‌ಮನ್ ಡಬಲ್ ಡಿಜಿಟ್ ಮುಟ್ಟಲಿಲ್ಲ. 5ನೇ ವಿಕೆಟ್‌ಗೆ ಮೋಯಿನ್ ಅಲಿ ಹಾಗೂ ಲಿವಿಂಗ್ ಸ್ಟನ್ ಜೊತೆಗೂಡಿ 38 ಎಸೆತಗಳಲ್ಲಿ 40 ರನ್ ಪೇರಿಸಿದರು.
ಇಂಗ್ಲೆಂಡ್ 19.3 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು. ಆತಿಥೇಯ ವಿಂಡೀಸ್ ಪರ ಗುಡಾಕೇಶ್ ಮೋತಿ 3, ಆಂಡ್ರಿ ರಸೆಲ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಬ್ರಾಂಡನ್ ಕಿಂಗ್ ಬೇಗ ವಿಕೆಟ್ ಒಪ್ಪಿಸಿದರು. ನಿಕೋಲಸ್ ಪೂರನ್ ಸಹ ಜವಾಬ್ದಾರಿ ಮರೆತರು. ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ 27 ರನ್ ಬಾರಿಸಿ ಔಟ್ ಆದರು.

54 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶೆರ್ಫೇನ್ ರುದರ್ಫೋರ್ಡ್ ಹಾಗೂ ಶಾಯ್ ಹೋಪ್ ಆಧಾರವಾದರು. ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿತು. 4ನೇ ವಿಕೆಟ್‌ಗೆ ಈ ಜೋಡಿ 38 ಎಸೆತಗಳಲ್ಲಿ 41 ರನ್ ಪೇರಿಸಿತು. ಶೆರ್ಫೇನ್ ರುದರ್ಫೋರ್ಡ್ 30 ರನ್ ಬಾರಿಸಿ ಔಟ್ ಆದರು.
ಶಾಯ್ ಹೋಪ್ ಕೊನೆಯ ವರೆಗೆ ನಿಂತು ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಇವರ ಅಜೇಯ 43 ರನ್ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications