ಗಾಲ್ಫ್ ಆಡಲು ಹೋಗಿ ಹಲ್ಲು ಮುರಿದುಕೊಂಡ ಆಂಡರ್ಸನ್!

ಲಂಡನ್, ಆಗಸ್ಟ್ 06: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ದಾಖಲಿಸಿದ ಬಳಿಕ ಆಂಡರ್ಸನ್ ಅವರು ಹಲ್ಲು ಮುರಿದುಕೊಂಡ ಪ್ರಸಂಗ ನಡೆದಿದೆ. ಆದರೆ, ದೊಡ್ಡ ಮಟ್ಟದ ಗಾಯವೇನು ಆಗಿಲ್ಲ, ಜೇಮ್ಸ್ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ಆಟಗಾರರು ವಿರಾಮ ಸಿಕ್ಕ ಖುಷಿಯಲ್ಲಿ ಗಾಲ್ಫ್ ಆಡಲು ತೆರಳಿದ್ದಾಗ, ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ಅವರು ಗಾಲ್ಫ್ ಆಡುವಾಗ ಗಾಯ ಮಾಡಿಕೊಂಡಿದ್ದಾರೆ. ಜೇಮ್ಸ್ ಬಾರಿಸಿದ ಚೆಂಡು ಅವರ ಮುಖಕ್ಕೆ ಜೋರಾಗಿ ಬಡಿದು, ಹಲ್ಲು ಮುರಿದಿದೆ.
ಜೇಮ್ಸ್ ಅವರು ಗಾಲ್ಫ್ ಮಾಡುವುದನ್ನು ವಿಡಿಯೋ ಮಾಡುತ್ತಿದ್ದ ಸ್ಟುವರ್ಟ್ ಬ್ರಾಡ್,ಅವರು ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋ ಹಾಕಿದ್ದಾರೆ ಸದ್ಯ ಆ್ಯಂಡರ್ಸನ್ಗೆ ಯಾವುದೇ ಗಂಭೀರ ಗಾಯವಾಗಿಲ್ಲ ಹಲ್ಲು ಅಷ್ಟೇ ಮುರಿದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಾರ್ಮಿ ಆರ್ಮಿ ಅವರು ಕೂಡಾ ವಿಡಿಯೋ ಎಡಿಟ್ ಮಾಡಿ, ಆಂಡರ್ಸನ್ ಬಾರಿಸಿದ ಚೆಂಡು ಗುರಿ ಮುಟ್ಟಿದೆ ಎಂದು ತೋರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications