Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!

England likely to register thier highest test run chase by chasing Indias target of 378 in 5th test

ಭಾರತ ಮತ್ತು ಇಂಗ್ಲೆಂಡ್ ನಡುವೆ ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಐದನೇ ಟೆಸ್ಟ್ ಪಂದ್ಯ ನಾಲ್ಕನೇ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾದಿಂದ ಬಹುತೇಕ ಕೈತಪ್ಪಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಅಬ್ಬರಿಸಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ ಸದ್ಯ ಸೋಲಿನ ಸುಳಿಗೆ ಸಿಲುಕಿದೆ.

ಹೌದು, ನಾಲ್ಕನೇ ದಿನದಾಟದ ಅಂತ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 119 ರನ್‌ಗಳ ಅಗತ್ಯವಿದ್ದು, ಇಂಗ್ಲೆಂಡ್ ಕೈನಲ್ಲಿ 7 ವಿಕೆಟ್‍ಗಳಿವೆ. ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 416 ರನ್ ಕಲೆ ಹಾಕಿತ್ತು ಹಾಗೂ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಆಲ್ ಔಟ್ ಆಗಿ 132 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಹೀಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್ಔಟ್ ಆಗಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 378 ರನ್‌ಗಳ ಬೃಹತ್ ಗುರಿಯನ್ನು ನೀಡಿತು.

ಹೀಗೆ ಟೀಮ್ ಇಂಡಿಯಾ ಇಷ್ಟು ಮೊತ್ತವನ್ನು ಗುರಿಯನ್ನಾಗಿ ನೀಡಿದಾಗ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಹೆಚ್ಚಾಗಿ ವ್ಯಕ್ತವಾಗಿತ್ತು. ಆದರೆ ಇಂಗ್ಲೆಂಡ್ ಈ ಅಭಿಪ್ರಾಯವನ್ನು ಹುಸಿಗೊಳಿಸುವ ಹಂತಕ್ಕೆ ಬಂದು ತಲುಪಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿ ಐದನೇ ದಿನದಂದು ಗೆಲ್ಲಲು 119 ರನ್ ಕಲೆ ಹಾಕಬೇಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಅಲೆಕ್ಸ್ ಲೀಸ್ ಮತ್ತು ಜ್ಯಾಕ್ ಕ್ರಾವ್ಲೆ ಜೋಡಿ ಶತಕದ ಜತೆಯಾಟವಾಡಿ ಉತ್ತಮ ಆರಂಭ ಕಟ್ಟಿಕೊಟ್ಟರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲೀ ಪೋಪ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಇನ್ನು ನಾಲ್ಕನೇ ವಿಕೆಟ್‍ಗೆ ಒಂದಾಗಿರುವ ಜೋ ರೂಟ್ ಮತ್ತು ಜಾನಿ ಬೈರ್ ಸ್ಟೋ 150 ರನ್‌ಗಳ ಜತೆಯಾಟವಾಡಿ ಅಜೇಯರಾಗಿ ಕಣದಲ್ಲಿದ್ದಾರೆ. ಜೋ ರೂಟ್ 76 ರನ್ ಕಲೆಹಾಕಿದ್ದರೆ, ಜಾನಿ ಬೈರ್ ಸ್ಟೋವ್ 72 ರನ್ ಕಲೆಹಾಕಿ ಐದನೇ ದಿನದಾಟದಂದು ತಂಡವನ್ನು ಗೆಲುವಿನ ದಡ ಸೇರಿಸುವತ್ತ ಚಿತ್ತ ನೆಟ್ಟಿದ್ದಾರೆ. ಹೀಗೆ ಪಂದ್ಯದ ಆರಂಭದಲ್ಲಿ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ಇದೀಗ ಸೋಲುವ ಹಂತಕ್ಕೆ ಬಂದು ತಲುಪಿದ್ದು, ಇಂಗ್ಲೆಂಡ್ ಪಾಲಿಗೆ ಇದು ಐತಿಹಾಸಿಕ ಗೆಲುವಾದರೆ, ಭಾರತದ ಪಾಲಿಗೆ ಇದು ಅತ್ಯಂತ ಹೀನಾಯ ಸೋಲಾಗಲಿದೆ.

ಇಷ್ಟು ಹೀನಾಯ ಸೋಲನ್ನು ಇಂಗ್ಲೆಂಡ್ ವಿರುದ್ಧ ಯಾರೂ ಕಂಡಿಲ್ಲ

ಇಷ್ಟು ಹೀನಾಯ ಸೋಲನ್ನು ಇಂಗ್ಲೆಂಡ್ ವಿರುದ್ಧ ಯಾರೂ ಕಂಡಿಲ್ಲ

ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 378 ರನ್‌ಗಳ ಗುರಿಯನ್ನು ನೀಡಿರುವ ಟೀಮ್ ಇಂಡಿಯಾ ಈ ಪಂದ್ಯವನ್ನು ಸೋತರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ಮೊತ್ತವನ್ನು ಗುರಿಯನ್ನಾಗಿ ನೀಡಿ ಸೋಲನ್ನು ಕಂಡ ತಂಡ ಎಂಬ ಕೆಟ್ಟ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.

ಇಂಗ್ಲೆಂಡ್ ಈ ಹಿಂದೆ ಟೆಸ್ಟ್ ಕ್ರಿಕೆಟ್‍ನಲ್ಲಿ ಚೇಸ್ ಮಾಡಿದ ಅತಿದೊಡ್ಡ ಮೊತ್ತವಿದು

ಇಂಗ್ಲೆಂಡ್ ಈ ಹಿಂದೆ ಟೆಸ್ಟ್ ಕ್ರಿಕೆಟ್‍ನಲ್ಲಿ ಚೇಸ್ ಮಾಡಿದ ಅತಿದೊಡ್ಡ ಮೊತ್ತವಿದು

ಇನ್ನು ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಚೇಸ್ ಮಾಡಿರುವ ಬೃಹತ್ ಮೊತ್ತವೆಂದರೆ 359. ಹೌದು, 2019ರಲ್ಲಿ ಲೀಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 359 ರನ್‌ಗಳನ್ನು ಚೇಸ್ ಮಾಡಿದ್ದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಾನು ಅತಿ ದೊಡ್ಡ ಮೊತ್ತ ಚೇಸ್ ಮಾಡಿದ ದಾಖಲೆ ಬರೆದಿತ್ತು. ಇದೀಗ ಟೀಂ ಇಂಡಿಯಾ ನೀಡಿರುವ 378 ರನ್‌ಗಳನ್ನು ಚೇಸ್ ಮಾಡಿದರೆ ಇದು ಇಂಗ್ಲೆಂಡ್ ಪಾಲಿನ ಐತಿಹಾಸಿಕ ಗೆಲುವಾಗಲಿದೆ.

Ind vs Eng ಕ್ರೀಡಾಂಗಣದಲ್ಲಿ ಏನಿದು ಆತಂಕಕಾರಿ ಸುದ್ದಿ | *Cricket | OneIndia Kannada
ಈ ವರ್ಷ ಇಂಗ್ಲೆಂಡ್ ಮಾಡಲಿರುವ ನಾಲ್ಕನೇ ಯಶಸ್ವಿ ಚೇಸ್ ಇದಾಗಲಿದೆ

ಈ ವರ್ಷ ಇಂಗ್ಲೆಂಡ್ ಮಾಡಲಿರುವ ನಾಲ್ಕನೇ ಯಶಸ್ವಿ ಚೇಸ್ ಇದಾಗಲಿದೆ

ಇನ್ನು ಇಂಗ್ಲೆಂಡ್ ಈ ವರ್ಷ ಈಗಾಗಲೇ 3 ಯಶಸ್ವಿ ಟೆಸ್ಟ್ ರನ್ ಚೇಸ್ ಮಾಡಿದ್ದು, ಭಾರತದ ವಿರುದ್ಧದ ಈ ಪಂದ್ಯದಲ್ಲಿ ಚೇಸ್ ಮಾಡಿದರೆ ನಾಲ್ಕನೇ ಯಶಸ್ವಿ ಚೇಸ್ ಇದಾಗಲಿದೆ.

ಇಂಗ್ಲೆಂಡ್ ಈ ವರ್ಷ ಚೇಸ್ ಮಾಡಿರುವ ಪಂದ್ಯಗಳ ಪಟ್ಟಿ

ನ್ಯೂಜಿಲೆಂಡ್ ವಿರುದ್ಧ - 299/5

ನ್ಯೂಜಿಲೆಂಡ್ ವಿರುದ್ಧ - 296/3

ನ್ಯೂಜಿಲೆಂಡ್‌ ವಿರುದ್ಧ - 279/5

Story first published: Tuesday, July 5, 2022, 10:15 [IST]
Other articles published on Jul 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+