ಕೆಲವು ಇಂಗ್ಲೆಂಡ್ ಟೆಸ್ಟ್ ಆಟಗಾರರನ್ನ IPL ಆಡದಂತೆ ಇಸಿಬಿ ತಡೆಯುವ ಸಾಧ್ಯತೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್ ಮುಗಿಯುವ ವೇಳೆಗೆ ನ್ಯೂಜಿಲೆಂಡ್ -ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನ ಆಡುವ ಹಿನ್ನಲೆಯಲ್ಲಿ ಇಸಿಬಿ ತನ್ನ ಕೆಲವು ಆಟಗಾರರನ್ನ ಐಪಿಎಲ್ ಆಡದಂತೆ ತಡೆಯುವ ಮನಸ್ಸು ಮಾಡಿದೆ.
ಮೆಗಾ ಐಪಿಎಲ್ ಹರಾಜಿಗೆ ಇಪ್ಪತ್ತೆರಡು ಇಂಗ್ಲಿಷ್ ಆಟಗಾರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ, ಇದರಲ್ಲಿ ಹಲವಾರು ಇಂಗ್ಲೆಂಡ್‌ನ ಇತ್ತೀಚಿನ ಟೆಸ್ಟ್ ತಂಡದಲ್ಲಿರುವ ಆಟಗಾರರಿದ್ದಾರೆ. ಜಾನಿ ಬೈರ್‌ಸ್ಟೋವ್, ಮಾರ್ಕ್ ವುಡ್, ಡೇವಿಡ್ ಮಲಾನ್, ಒಲ್ಲಿ ಪೋಪ್, ಕ್ರೇಗ್ ಓವರ್‌ಟನ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಡ್ಯಾನ್ ಲಾರೆನ್ಸ್ ಎಲ್ಲರೂ ಆಶಸ್ ತಂಡದ ಭಾಗವಾಗಿದ್ದರು ಮತ್ತು ಪ್ರಸ್ತುತ ಹರಾಜು ಪಟ್ಟಿಯಲ್ಲಿದ್ದಾರೆ.
ಹೀಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಕಿವೀಸ್ ವಿರುದ್ಧ ಟೆಸ್ಟ್ ಸರಣಿಗೆ ಸಮಯದ ಅವಕಾಶ ಇರುವುದರಿಂದ ಕೆಲವು ಆಟಗಾರರಿಗೆ ಐಪಿಎಲ್ ಆಡದಂತೆ ನಿರ್ದೇಶನ ನೀಡುವ ಸಾಧ್ಯತೆ ಹೆಚ್ಚಿದೆ.
ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಈಗಾಗಲೇ ಐಪಿಎಲ್ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸದೇ ಐಪಿಎಲ್ 2022ರಿಂದ ಹೊರಗುಳಿದಿದ್ದಾರೆ. ಆದ್ರೆ ಜೋಸ್ ಬಟ್ಲರ್ ಅವರನ್ನು ಈಗಾಗಲೇ ರಾಜಸ್ಥಾನ್ ರಾಯಲ್ಸ್ ಉಳಿಸಿಕೊಂಡಿದೆ.
ಇಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್, ಇಂಗ್ಲೆಂಡ್ ಟೆಸ್ಟ್ ತಂಡದ ಪರಿಸ್ಥಿತಿಯನ್ನ ಸುಧಾರಿಸಲು ಕೆಂಪು ಚೆಂಡಿನ ''ರೀ-ಸೆಟ್'' ಮೂಲಕ ಹೋಗಬೇಕಾಗಿದೆ ಎಂದು ಹೇಳಿದರು. ಕೆಂಪು ಚೆಂಡಿನ ಸವಾಲಿಗೆ ಆಟಗಾರರನ್ನು ಸಿದ್ಧವಾಗಿಡಲು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಆಟಗಾರರ ಪ್ರವಾಸವನ್ನು ಕಡಿತಗೊಳಿಸಲು ECB ಸಿದ್ಧವಾಗಿದೆ.
ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯವು ಜೂನ್ 2ಕ್ಕೆ ಆರಂಭಗೊಳ್ಳಲಿದ್ದು, ಐಪಿಎಲ್ 15ನೇ ಸೀಸನ್ ಆರಂಭಕ್ಕೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದ್ರೆ ಮಾರ್ಚ್ 27ರಿಂದ ಟೂರ್ನಿ ಪ್ರಾರಂಭಗೊಳ್ಳಬಹುದು ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications