Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs WI 2nd Test: ವಿಂಡೀಸ್‌ ವಿರುದ್ಧ ಇಂಗ್ಲೆಂಡ್ ‘ಬೇಸ್ ಬಾಲ್’ ಪ್ರದರ್ಶನ; 30 ವರ್ಷಗಳ ಹಳೆಯ ದಾಖಲೆ ಮುರಿದ ಆಂಗ್ಲರು!

ಜುಲೈ 18 ಗುರುವಾರ, ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 'ಬೇಸ್ ಬಾಲ್' ಪ್ರದರ್ಶನ ತೋರಿದೆ.

ಟಾಸ್‌ ಸೋತು ಇನ್ನಿಂಗ್ಸ್‌ ಶುರು ಮಾಡಿದ ಇಂಗ್ಲೆಂಡ್ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿತು. ಜ್ಯಾಕ್ ಕ್ರಾಲಿ ಶೂನ್ಯಕ್ಕೆ ಔಟಾದ ನಂತರ, ಆಲಿ ಪೋಪ್ ಮತ್ತು ಬೆನ್ ಡಕೆಟ್ ಜೋಡಿ ಅದ್ಭುತವಾಗಿ ಆಡಿದರು.

England record fastest half-century in Test match against West Indies

ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ಕೇವಲ 4.2 ಓವರ್‌ಗಳಲ್ಲಿ ಅರ್ಧಶತಕ ಪೂರೈಸಿತು. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ ಕ್ರಿಕೆಟ್ ತಂಡ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಮುರಿಯಿತು.

ಇಂಗ್ಲೆಂಡ್ ಕೇವಲ 4.2 ಓವರ್‌ಗಳಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ 50 ರನ್ ಗಳಿಸಿ ತಮ್ಮದೇ ಆದ 30 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್‌ ಮಾಡಿದೆ. ಇದಕ್ಕೂ ಮುನ್ನ 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಂಗ್ಲರ ಪಡೆ ಕೇವಲ 4.3 ಓವರ್‌ಗಳಲ್ಲಿ 50 ರನ್ ಗಳಿಸಿ ದಾಖಲೆ ನಿರ್ಮಿಸಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೆ ವೇಗವಾಗಿ ತಂಡ

  • 4.2 ಓವರ್‌- ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್, ನಾಟಿಂಗ್ಹ್ಯಾಮ್, 2024
  • 4.3 ಓವರ್‌ - ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಓವಲ್, 1994
  • 4.6 ಓವರ್‌ - ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ, ಮ್ಯಾಂಚೆಸ್ಟರ್, 2002
  • 5.2 ಓವರ್‌ - ಶ್ರೀಲಂಕಾ ವಿರುದ್ಧ ಪಾಕಿಸ್ತಾನ, ಕರಾಚಿ, 2004
  • 5.3 ಓವರ್‌ - ಭಾರತ ವಿರುದ್ಧ ಇಂಗ್ಲೆಂಡ್, ಚೆನ್ನೈ, 2008
  • 5.3 ಓವರ್‌ - ಭಾರತ ವಿರುದ್ಧ ವೆಸ್ಟ್ ಇಂಡೀಸ್, ಪೋರ್ಟ್ ಆಫ್ ಸ್ಪೇನ್, 2023

ಎರಡನೇ ಟೆಸ್ಟ್‌ನ ಆರಂಭವು ವಿಶೇಷ ಸಂದರ್ಭವನ್ನು ಗುರುತಿಸಿತು. ಇಂಗ್ಲೆಂಡ್‌ ತಂಡ ಮಾಜಿ ದಿಗ್ಗಜ ವೇಗದ ಬೌಲರ‌ ಸ್ಟುವರ್ಟ್ ಬೋರ್ಡ್ ಅವರಿಗೆ‌ ವಿಶೇಷ ಫಲಕವನ್ನು ನೀಡಿ ಗೌರವಿಸಲಾಯಿತು. ಏಕೆಂದರೆ ಅವರ ಹೆಸರನ್ನು ಸ್ಟ್ಯಾಂಡ್‌ಗೆ ಇಡಲಾಗಿದೆ.

ಇಂಗ್ಲೆಂಡ್‌ vs ವೆಸ್ಟ್‌ ಇಂಡೀಸ್‌ ಪ್ಲೇಯಿಂಗ್‌-11

ಇಂಗ್ಲೆಂಡ್: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಶೋಯೆಬ್ ಬಶೀರ್.

ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಮೈಕೆಲ್ ಲೂಯಿಸ್, ಕಿರ್ಕ್ ಮೆಕೆಂಜಿ, ಅಲೆಕ್ ಅಥಾನಾಜ್, ಕವೆಮ್ ಹಾಡ್ಜ್, ಜೇಸನ್ ಹೋಲ್ಡರ್, ಜೋಶುವಾ ಡ ಸಿಲ್ವಾ (ವಾಕ್), ಅಲ್ಜಾರಿ ಜೋಸೆಫ್, ಕೆವಿನ್ ಸಿಂಕ್ಲೇರ್, ಶಮರ್ ಜೋಸೆಫ್, ಜೇಡನ್ ಸೀಲ್ಸ್.

Story first published: Thursday, July 18, 2024, 20:15 [IST]
Other articles published on Jul 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+