Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರಥಮದರ್ಜೆನಲ್ಲಿ ದಾಖಲೆ ಬರೆದ ಆಂಗ್ಲ ವೇಗಿ ಜೇಮ್ಸ್ ಆ್ಯಂಡರ್ಸನ್

England seamer James Anderson reaches 1,000 first-class wickets

ಲಂಡನ್: ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ತನ್ನ ವೃತ್ತಿ ಜೀವನದಲ್ಲಿ ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್‌ಗಳ ವಿಶಿಷ್ಠ ದಾಖಲೆಯನ್ನು ಆ್ಯಂಡರ್ಸನ್ ನಿರ್ಮಿಸಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಲ್ಯಾನ್ಸೆಶೈರ್ ಪರ ಆಡಿದ್ದ ಆ್ಯಂಡರ್ಸನ್, ಕೆಂಟ್ ವಿರುದ್ಧ ಈ ಸಾಧನೆ ತೋರಿದ್ದಾರೆ.

ಈ ತಿಂಗಳಾಂತ್ಯಕ್ಕೆ 39ರ ಹರೆಯಕ್ಕೆ ಕಾಲಿರಿಸುತ್ತಿರುವ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ಪಂದ್ಯದ ಆರಂಭದಲ್ಲೇ, ಕೆಂಟ್ ಪರ ಆಡುತ್ತಿದ್ದ ದಕ್ಷಿಣ ಆಫ್ರಿಕಾ ಆಟಗಾರ ಹಿನೋ ಕುಹ್ನ್ ಅವರ ವಿಕೆಟ್ ಲಭಿಸಿತು. ಕುಹ್ನ್ ಬ್ಯಾಟ್ ತಾಗಿದ ಚೆಂಡನ್ನು ಲ್ಯಾನ್ಸೆಶೈರ್ ವಿಕೆಟ್ ಕೀಪರ್ ಡೇನ್ ವಿಲಾಸ್ ಹಿಡಿದರು.

ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 1000 ವಿಕೆಟ್ ಪಡೆದ 14ನೇ ಬೌಲರ್ ಆಗಿ ಆ್ಯಂಡರ್ಸನ್ ಈಗ ಗುರುತಿಸಿಕೊಂಡಿದ್ದಾರೆ. ಇದರಲ್ಲಿ ಈ ಸಾಧನೆ ಮಾಡಿದ 5ನೇ ವೇಗಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವೇಗಿಗಳಾದ ಆಂಡಿ ಕ್ಯಾಡಿಕ್ (2005), ಮಾರ್ಟಿನ್ ಬಿಕ್ನೆಲ್ (2004), ಡೆವೊನ್ ಮಾಲ್ಕಮ್ (2002) ಮತ್ತು ವಾಸಿಮ್ ಅಕ್ರಮ್ (2001) ಈ ಸಾಧನೆ ಮಾಡಿದ್ದರು.

ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ಆ್ಯಂಡರ್ಸನ್ 162 ಟೆಸ್ಟ್ ಪಂದ್ಯಗಳಲ್ಲಿ 617 ವಿಕೆಟ್‌, 194 ಏಕದಿನ ಪಂದ್ಯಗಳಲ್ಲಿ 269 ವಿಕೆಟ್, 19 ಟಿ20 ಪಂದ್ಯಗಳಲ್ಲಿ 18 ವಿಕೆಟ್, 262 ಪ್ರಥಮದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ 1000+ ವಿಕೆಟ್, 261 ಲಿಸ್ಟ್ ಎ ಪಂದ್ಯಗಳಲ್ಲಿ 358 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Tuesday, July 6, 2021, 10:31 [IST]
Other articles published on Jul 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+