ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಮಿನಿ ಹರಾಜಿಗೆ ಬಂದ ಬೆನ್ ಸ್ಟೋಕ್ಸ್ : ಈ ಮೊದಲು ಹರಾಜಾಗಿದ್ದು ಎಷ್ಟು ಕೋಟಿಗೆ ಗೊತ್ತಾ?

England Star All Rounder Ben Stokes Will Play In IPL 2023: Put His Name In IPL Mini Auction

ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಒತ್ತಡದ ಸಂದರ್ಭದಲ್ಲಿ ಅರ್ಧಶತಕ ಗಳಿಸುವ ಮೂಲಕ ಮತ್ತೊಮ್ಮೆ ಇಂಗ್ಲೆಂಡ್ ಪಾಲಿಗೆ ಹೀರೋ ಆಗಿದ್ದು ಸ್ಟಾರ್ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್. 2019ರ ಏಕದಿನ ವಿಶ್ವಕಪ್ ಫೈನಲ್, 2022ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಸ್ಟೋಕ್ಸ್ ಆಡಿದ ಇನ್ನಿಂಗ್ಸ್ ಮರೆಯಲಾಗದು. ಈಗ ಈ ಆಟಗಾರ ಮತ್ತೆ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ.

ಹೌದು, 2023ರ ಐಪಿಎಲ್‌ನಲ್ಲಿ ಆಡುವುದು ಖಚಿತವಾಗಿದೆ. ಇಂಗ್ಲೆಂಡ್ ಮಾಧ್ಯಮದ ವರದಿಗಳ ಪ್ರಕಾರ ಬೆನ್‌ ಸ್ಟೋಕ್ಸ್ ಈ ಬಾರಿ ಐಪಿಎಲ್ ಮಿನಿ ಹರಾಜಿನಲ್ಲಿ ಭಾಗವಹಿಸಲು ತಮ್ಮ ಹೆಸರು ನೀಡಿದ್ದಾರೆ. ಈಗಾಗಲೇ ಹಲವು ಫ್ರಾಂಚೈಸಿಗಳು ಬೆನ್‌ ಸ್ಟೋಕ್ಸ್ ಮೇಲೆ ಕಣ್ಣಿಟ್ಟಿದ್ದು, ಭಾರಿ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.

Ind vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳಿವುInd vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳಿವು

31 ವರ್ಷದ ಬೆನ್‌ ಸ್ಟೋಕ್ಸ್ ಈಗಾಗಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನತ್ತ ತಮ್ಮ ಹೆಚ್ಚಿನ ಗಮನ ಹರಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನಾಯಕನಾಗಿ ಕೂಡ ನೇಮಕವಾಗಿದ್ದಾರೆ. ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಕಾರಣ, ಬೆನ್ ಸ್ಟೋಕ್ಸ್ ಐಪಿಎಲ್‌ನಲ್ಲಿ ಆಡಲು ಸಮಯಾವಕಾಶ ಪಡೆಯಲಿದ್ದಾರೆ.

ರಾಜಸ್ಥಾನ್ ತಂಡದಲ್ಲಿದ್ದ ಸ್ಟೋಕ್ಸ್

ರಾಜಸ್ಥಾನ್ ತಂಡದಲ್ಲಿದ್ದ ಸ್ಟೋಕ್ಸ್

2017 ರಲ್ಲಿ ಮೊದಲ ಬಾರಿಗೆ ಬೆನ್‌ ಸ್ಟೋಕ್ಸ್‌ರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 14.5 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ನಂತರ 2018ರಲ್ಲಿ ರಾಜಸ್ಥಾನ್ ರಾಯಲ್ಸ್ 12.5 ಕೋಟಿ ರುಪಾಯಿಗೆ ಬೆನ್‌ ಸ್ಟೋಕ್ಸ್‌ರನ್ನು ಖರೀದಿ ಮಾಡಿತ್ತು. ನಂತರ ಅವರನ್ನು 2020ರಲ್ಲಿ ಮತ್ತೆ ತಂಡದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಆದರೆ, 2021ರಲ್ಲಿ ಬೆರಳಿನ ಗಾಯಕ್ಕೆ ತುತ್ತಾದ ಬೆನ್‌ ಸ್ಟೋಕ್ಸ್ ಐಪಿಎಲ್‌ನಿಂದ ಹೊರಗುಳಿದರು. ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಿಂದ ಬಿಡುಗಡೆ ಮಾಡಿತ್ತು. 2022ರಲ್ಲಿ ಅವರು ಆರೋಗ್ಯದ ಸಮಸ್ಯೆಯಿಂದ ಐಪಿಎಲ್‌ ಮೆಗಾ ಹರಾಜಿನಲ್ಲಿ ಭಾಗವಹಿಸಲಿಲ್ಲ. ಈಗ ವಿಶ್ವಕಪ್‌ ಫೈನಲ್‌ನಲ್ಲಿ ಉತ್ತಮ ಪ್ರದರ್ಶನದ ಬಳಿಕ ಮತ್ತೆ ಹರಾಜಿನಲ್ಲಿ ತಮ್ಮ ಹೆಸರು ನೀಡಿದ್ದಾರೆ.

IPL 2023: ಶಾರ್ದೂಲ್ ಠಾಕೂರ್-ಅಮನ್ ಖಾನ್ ವಿನಿಮಯ ಮಾಡಿಕೊಂಡ ಡೆಲ್ಲಿ-ಕೆಕೆಆರ್

ಐಪಿಎಲ್‌ನಲ್ಲಿ ಬೆನ್‌ ಸ್ಟೋಕ್ಸ್

ಐಪಿಎಲ್‌ನಲ್ಲಿ ಬೆನ್‌ ಸ್ಟೋಕ್ಸ್

ಬೆನ್‌ ಸ್ಟೋಕ್ಸ್ ಇದುವರೆಗೂ ಒಟ್ಟು 43 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. 43 ಪಂದ್ಯಗಳಿಂದ 25 ಸರಾಸರಿಯಲ್ಲಿ 134 ಸ್ಟ್ರೈಕ್‌ ರೇಟ್‌ನಲ್ಲಿ 920 ರನ್ ಗಳಿಸಿದ್ದಾರೆ. 8.55 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಅವರು ಒಟ್ಟು 28 ವಿಕೆಟ್ ಪಡೆದಿದ್ದಾರೆ.

ಬೆನ್‌ ಸ್ಟೋಕ್ಸ್‌ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. 2017ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 163 ರನ್‌ಗಳ ಚೇಸಿಂಗ್‌ನಲ್ಲಿ 63 ಎಸೆತಗಳಲ್ಲಿ ಅಜೇಯ 103 ರನ್ ಗಳಿಸುವ ಮೂಲಕ ಗೆಲುವಿಗೆ ಕಾರಣವಾಗಿದ್ದರು.

2020ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾಗ ಮುಂಬೈ ಇಂಡಿಯನ್ಸ್ ವಿರುದ್ಧ 196 ರನ್‌ಗಳನ್ನು ಚೇಸ್ ಮಾಡುವ ಸಂದರ್ಭದಲ್ಲಿ 60 ಎಸೆತಗಳಲ್ಲಿ ಅಜೇಯ 107 ರನ್ ಗಳಿಸಿದ್ದರು. ಅವರ ಈ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸೇರಿದ್ದವು.

ದುಬಾರಿ ಮೊತ್ತಕ್ಕೆ ಹರಾಜು ಸಾಧ್ಯತೆ

ದುಬಾರಿ ಮೊತ್ತಕ್ಕೆ ಹರಾಜು ಸಾಧ್ಯತೆ

ಬೆನ್‌ ಸ್ಟೋಕ್ಸ್ ಅನುಭವಿ ಆಲ್‌ರೌಂಡರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ದೊಡ್ಡ ಪಂದ್ಯಗಳಲ್ಲಿ ಅವರ ಸಾಮರ್ಥ್ಯ ಏನು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡುವ ಬೆನ್‌ ಸ್ಟೋಕ್ಸ್ ದೊಡ್ಡ ಹೊಡೆತಗಳಿಗೆ ಹೆಸರಾದ ಆಟಗಾರ. ಯಾವುದೇ ತಂಡದಲ್ಲಿ ಸ್ಟೋಕ್ಸ್ ಇರುವುದು ದೊಡ್ಡ ಲಾಭವೇ ಸರಿ.

ಇದೇ ಕಾರಣಕ್ಕೆ ಈಗ ಹಲವು ಫ್ರಾಂಚೈಸಿಗಳು ಬೆನ್‌ ಸ್ಟೋಕ್ಸ್‌ರನ್ನು ಖರೀದಿಸಲು ಮುಂದಾಗಬಹುದು. ಅದರಲ್ಲೂ ಪಂಜಾಬ್ ಸೂಪರ್ ಕಿಂಗ್ಸ್‌ ಸ್ಟೋಕ್ಸ್‌ ಖರೀದಿಸಲು ತೀವ್ರ ಆಸಕ್ತಿ ಹೊಂದಿದೆ. ಆರ್ ಸಿಬಿ ಕೂಡ ಸ್ಟೋಕ್ಸ್‌ರನ್ನು ಖರೀದಿಸಲು ಮುಂದಾಗವಹುದು, ಸ್ಟೋಕ್ಸ್ ಖರೀದಿಗೆ ಭಾರಿ ಪೈಪೋಟಿ ನಡೆಯುವ ಸಾಧ್ಯತೆ ಇದ್ದು, ದಾಖಲೆಯ ಮೊತ್ತಕ್ಕೆ ಹರಾಜಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ.

Story first published: Tuesday, November 15, 2022, 11:36 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X