ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2023: ಶಾರ್ದೂಲ್ ಠಾಕೂರ್-ಅಮನ್ ಖಾನ್ ವಿನಿಮಯ ಮಾಡಿಕೊಂಡ ಡೆಲ್ಲಿ-ಕೆಕೆಆರ್

IPL 2023: Delhi Capitals Exchanged Shardul Thakur For Aman Khan With KKR

2023ರ ಐಪಿಎಲ್ ಮೆಗಾ ಹರಾಜಿಗೆ ಇನ್ನೊಂದು ವರ್ಷವಿದ್ದು, ಅದಕ್ಕೂ ಮೊದಲು ಇದೇ ಡಿಸೆಂಬರ್‌ನಲ್ಲಿ ಮಿನಿ ಹರಾಜು ನಡೆಯಲಿದೆ. ನವೆಂಬರ್ 15ರ ಸಂಜೆಯೊಳಗೆ ಬಿಡುಗಡೆಯಾದ ಮತ್ತು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ಎಲ್ಲಾ 10 ತಂಡಗಳನ್ನು ಸೂಚಿಸಿತ್ತು.

ಹಿಂದಿನ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಐಪಿಎಲ್ ತಂಡಗಳು ಬಿಡುಗಡೆ ಮಾಡುತ್ತವೆ. ಆದಾಗ್ಯೂ, ಕೆಲವು ಆಟಗಾರರು ತಮ್ಮ ಹೆಚ್ಚಿನ ಬೆಲೆಗಳಿಂದಾಗಿ ತಮ್ಮ ಒಪ್ಪಂದಗಳನ್ನು ಕಳೆದುಕೊಂಡಿದ್ದಾರೆ ಮತ್ತು ಕೆಲವು ದೊಡ್ಡ ಆಟಗಾರರನ್ನು ಉಳಿಸಿಕೊಂಡಿವೆ. ಆದರೆ ಉತ್ತಮ ಪ್ರದರ್ಶನ ನೀಡಿದರ ಹೊರತಾಗಿಯೂ ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರನ ವಿನಿಮಯ ಮೂಲಕ ಬಿಟ್ಟುಕೊಟ್ಟಿದೆ.

IPL 2023 ಮಿನಿ-ಹರಾಜು: ಎಲ್ಲಾ 10 ತಂಡಗಳ ಸಂಭಾವ್ಯ ಉಳಿಸಿಕೊಂಡ ಆಟಗಾರರ ಸಂಪೂರ್ಣ ಪಟ್ಟಿ

ಭಾರತದ ವೇಗದ ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಶಾರ್ದೂಲ್ ಠಾಕೂರ್ ಅವರನ್ನು ಅನ್‌ಕ್ಯಾಪ್ಡ್ ಮುಂಬೈ ಆಲ್‌ರೌಂಡರ್ ಅಮನ್ ಖಾನ್‌ ಅವರೊಂದಿಗೆ ವಿನಿಮಯ ಮಾಡಿದೆ.

ಶಾರ್ದೂಲ್ ಠಾಕೂರ್ ಅವರನ್ನು 10.75 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. 2022ರ ಆವೃತ್ತಿಯಲ್ಲಿ 36 ರನ್‌ಗೆ 4 ವಿಕೆಟ್ ಸೇರಿದಂತೆ ಒಟ್ಟು 14 ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದಿದ್ದರು. ಆದರೆ ಪ್ರತಿ ಓವರ್‌ಗೆ 10 ರನ್‌ಗಳಂತೆ ದುಬಾರಿ ಎನಿಸಿದರು. ಇನ್ನು ಬ್ಯಾಟಿಮಗ್‌ನಲ್ಲಿಯೂ ಮಿಂಚದ ಶಾರ್ದೂಲ್ ಠಾಕೂರ್, 10.81ರ ಸರಾಸರಿಯಲ್ಲಿ ಮತ್ತು 137.93ರ ಸ್ಟ್ರೈಕ್‌ರೇಟ್‌ನಲ್ಲಿ 120 ರನ್ ಗಳಿಸಿದರು.

IPL 2023: Delhi Capitals Exchanged Shardul Thakur For Aman Khan With KKR

"ಮುಂದಿನ ಐಪಿಎಲ್ 2023 ಕ್ಕಾಗಿ ಬಲಗೈ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ದೆಹಲಿ ಕ್ಯಾಪಿಟಲ್ಸ್ ತಂಡದಿಂದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ವಿನಿಮಯ ಮಾಡಲಾಗಿದೆ," ಎಂದು ಐಪಿಎಲ್ ಸಂಘಟಕರ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಉದಯೋನ್ಮುಖ ಆಲ್‌ರೌಂಡರ್ ಅಮನ್ ಖಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ವಿನಿಮಯ ಮಾಡಲಾಗಿದೆ. 25 ವರ್ಷದ ಅಮನ್ ಖಾನ್ ಅವರನ್ನು 2022ರ ಐಪಿಎಲ್ ಹರಾಜಿನಲ್ಲಿ 20 ಲಕ್ಷಕ್ಕೆ ಖರೀದಿಸಲಾಗಿತ್ತು, ಕಳೆದ ಋತುವಿನಲ್ಲಿ ಕೆಕೆಆರ್ ತಂಡಕ್ಕಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು".

ಇನ್ನು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ತಂಡದ ಭಾಗವಾಗಿರುವ ವೇಗಿ ಶಾದೂಲ್ ಠಾಕೂರ್ ಪ್ರಸ್ತುತ ನ್ಯೂಜಿಲೆಂಡ್‌ನಲ್ಲಿದ್ದಾರೆ. ಮತ್ತೊಂದು ಡೀಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದಿಂದ ನ್ಯೂಜಿಲೆಂಡ್‌ನ ಲ್ಯುಕಿ ಫರ್ಗುಸನ್ ಮತ್ತು ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ ಅವರನ್ನು ಪಡೆದ ನಂತರ ಶಾದೂಲ್ ಠಾಕೂರ್ ಕೆಕೆಆರ್ ತಂಡಕ್ಕೆ ಸೇರಿದ ಮೂರನೇ ಆಟಗಾರರಾಗಿದ್ದಾರೆ.

Story first published: Tuesday, November 15, 2022, 4:10 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X