Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಿಗ್ಗಜ ಎವರ್ಟನ್‌ಗೆ ಗೌರವ ಸೂಚಿಸಿ ಕಪ್ಪುಪಟ್ಟಿ ಧರಿಸಲಿದೆ ಇಂಗ್ಲೆಂಡ್ ತಂಡ

England team will be wearing black armbands to honour the late Sir Everton Weekes

ಲಂಡನ್, ಜುಲೈ 2: ಜುಲೈ 1ರ ಬುಧವಾರ ಸಾವನ್ನಪ್ಪಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಸರ್ ಎವರ್ಟನ್ ವೀಕ್ಸ್ ಅವರಿಗೆ ಗೌರವ ಸೂಚಿಸಿ ಮತ್ತು ಅವರ ನಿಧನಕ್ಕೆ ಸಂತಾಪ ಸೂಚಿಸಿ ಇಡೀ ಇಂಗ್ಲೆಂಡ್ ಕ್ರಿಕೆಟ್ ತಂಡ ಕಪ್ಪು ಪಟ್ಟಿ ಧರಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ವೇಳೆ ಎರಡೂ ತಂಡಗಳು ಕಪ್ಪುಪಟ್ಟಿ ಧರಿಸಿ ಮೈದಾನಕ್ಕಿಳಿಯುವ ಸಾಧ್ಯತೆಯಿದೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡ, ಜುಲೈ 8ರಿಂದ ಆತಿಥೇಯರ ವಿರುದ್ಧ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಟೆಸ್ಟ್ ಸರಣಿಯು ಕೊರೊನಾ ಭೀತಿ ಶುರುವಾದ ಬಳಿಕ ನಡೆಯುತ್ತಿರುವ ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಾಗಿ ಗುರುತಿಸಿಕೊಳ್ಳಲಿದೆ.

ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎವರ್ಟನ್, ಬಾರ್ಬಡೋಸ್‌ನ ಕ್ರೈಸ್ಟ್‌‌ ಚರ್ಚ್‌ನಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ವಿಂಡೀಸ್ ಪರ 48 ಟೆಸ್ಟ್ ಪಂದ್ಯಗಳನ್ನಾಡಿರುವ ಎವರ್ಟನ್, 58.62ರ ಸರಾಸರಿಯಲ್ಲಿ 4,455 ರನ್ ದಾಖಲೆ ಹೊಂದಿದ್ದಾರೆ. ಅಲ್ಲದೆ 15 ಶತಕಗಳ ದಾಖಲೆಯೂ ಎವರ್ಟನ್ ಹೆಸರಿನಲ್ಲಿದೆ.

ಕ್ರಿಕೆಟ್ ದಂತಕತೆ ಸಾವಿಗೆ ಕ್ರಿಕೆಟ್ ಲೋಕ ಸಂತಾಪ ಸೂಚಿಸಿದೆ. ಭಾರತದ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರೀಡಾಪಟುಗಳು ದಿಗ್ಗಜನ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಯಾರಿಯಾಗಿ ಟೀಮ್ ಸ್ಟೋಕ್ಸ್ vs ಟೀಮ್ ಬಟ್ಲರ್ ಮಧ್ಯೆ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ವಿಂಡೀಸ್-ಇಂಗ್ಲೆಂಡ್ ಮೊದಲ ಟೆಸ್ಟ್ ವೇಳೆ ಇಂಗ್ಲೆಂಡ್ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿಯಲಿದ್ದಾರೆ.

Story first published: Thursday, July 2, 2020, 15:38 [IST]
Other articles published on Jul 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+