ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನದಲ್ಲಿ 2 ಟಿ20 ಪಂದ್ಯಗಳನ್ನಾಡಲಿದೆ ಇಂಗ್ಲೆಂಡ್

ಲಂಡನ್: ಅಕ್ಟೋಬರ್ ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೂ ಮುನ್ನ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪಾಕಿಸ್ತಾನದಲ್ಲಿ ಎರಡು ಪಂದ್ಯಗಳ ಟ್ವೆಂಟಿ -20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಎರಡೂ ಪಂದ್ಯಗಳು ಕರಾಚಿ ಸ್ಟೇಡಿಯಂನಲ್ಲಿ ನಡೆಯಲಿವೆ ಎಂದು ಈ ಮೊದಲು ಹೇಳಲಾಗಿತ್ತು.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಎರಡು ಟಿ20 ಪಂದ್ಯಗಳು ಕರಾಚಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತಾದರೂ ಈ ಪಂದ್ಯಗಳು ಪಿಂಡಿ ಸ್ಟೇಡಿಯಂನಲ್ಲಿ ನಡೆಯಲಿವೆ ಎಂದು ಪಾಕಿಸ್ತಾನ ತಿಳಿಸಿದೆ. ಅಕ್ಟೋಬರ್ 13 ಮತ್ತು ಅಕ್ಟೋಬರ್ 14ರಂದು ಈ ಎರಡು ಪಂದ್ಯಗಳು ನಡೆಯಲಿವೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳಿದೆ.
2005ರ ಬಳಿಕ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಕೈಗೊಳ್ಳುತ್ತಿರುವ ಚೊಚ್ಚಲ ಪ್ರವಾಸ ಸರಣಿಯಾಗಿ ಇದು ಗುರುತಿಸಿಕೊಳ್ಳಲಿದೆ. ಮುಂದಿನ ವರ್ಷ ಮತ್ತೆ ಸೀಮಿತ ಓವರ್‌ಗಳ ಸರಣಿ ಮತ್ತು ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಲಿದೆ.
"ಬಹಳ ದಿನಗಳ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಬರುತ್ತಿರುವ ಇಂಗ್ಲೆಂಡ್ ಪುರುಷರ ತಂಡ ಮತ್ತು ಮಹಿಳಾ ತಂಡವನ್ನು ಸ್ವಾಗತಿಸಲು ನಾವು ಖುಷಿಗೊಂಡಿದ್ದೇವೆ," ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಮ್ ಖಾನ್ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಇಂಗ್ಲೆಂಡ್ ತಂಡ ಅಕ್ಟೋಬರ್ 9ರಂದು ಬಂದಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications