Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಕ್ರಮ್, ಮೆಕ್‌ಗ್ರಾಥ್ ಇರುವ ವಿಶೇಷ ಪಟ್ಟಿ ಸೇರಿದ ಜೇಮ್ಸ್ ಆಂಡರ್ಸನ್

England vs India: Anderson joins Akram, McGrath in elite list

ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಉತ್ತಮ ಬೌಲಿಂಗ್ ದಾಳಿಯನ್ನು ಸಂಘಟಿಸುವಲ್ಲಿ ಸಫಲರಾಗಿದ್ದಾರೆ. 38ರ ಹರೆಯದ ಆಂಡರ್ಸನ್ ಇನ್ನು ಕೂಡ ಇಂಗ್ಲೆಂಡ್ ಪಾಲಿಗೆ ವಿಕೆಟ್ ಕಬಳಿಸುವ ಪ್ರಮುಖ ಅಸ್ತ್ರವಾಗಿ ಉಳಿದುಕೊಂಡಿದ್ದಾರೆ. ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಂಡರ್ಸನ್ ವಿಶೇಷ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ.

ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಆರಂಭದಲ್ಲಿ ಶುಬ್ಮನ್ ಗಿಲ್ ವಿಕೆಟನ್ನು ಶೂನ್ಯಕ್ಕೆ ಪಡೆಯುವಲ್ಲಿ ಆಂಡರ್ಸನ್ ಸಫಲವಾಗಿದ್ದರು. ಅದಾದ ಬಳಿಕ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ವಿಕೆಟ್ ಕೂಡ ಜೇಮ್ಸ್ ಆಂಡರ್ಸನ್ ಪಾಲಾಗಿತ್ತು.

ಅಜಿಂಕ್ಯ ರಹಾನೆ ವಿಕೆಟ್ ಪಡೆಯುವ ಮೂಲಕ ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ. ಟೆಸ್ಟ್‌ನಲ್ಲಿ 613 ವಿಕೆಟ್ ಪಡೆದುಕೊಂಡಿರುವ ಆಂಡರ್ಸನ್ ಏಕದಿನ ಕ್ರಿಕೆಟ್‌ನಲ್ಲಿ 269 ವಿಕೆಟ್ ಪಡೆದುಕೊಂಡಿದ್ದಾರೆ. 18 ವಿಕೆಟ್‌ಗಳನ್ನು ಟಿ20 ಕ್ರಿಕೆಟ್‌ನಲ್ಲಿ ಪಡೆದಿದ್ದಾರೆ.

ಈ ಮೂಲಕ 900ಕ್ಕೂ ಅಧಿಕ ಅಂತಾರಾಷ್ಟ್ರೀಯ ವಿಕೆಟ್ ಪಡೆದ ವಿಶ್ವದ ಕೇವಲ ಮೂರನೇ ವೇಗದ ಬೌಲರ್ ಎನಿಸಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾಥ್ ಹಾಗೂ ಪಾಕಿಸ್ತಾನದ ವಾಸಿಂ ಅಕ್ರಮ್ ಈ ಸಾಧನೆಯನ್ನು ಮಾಡಿದ್ದಾರೆ.

ಒಟ್ಟಾರೆಯಾಗಿ ಅತ್ಯಂತ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಮೊದಲನೇ ಸ್ಥಾನದಲ್ಲಿದ್ದು 1347 ವಿಕೆಟ್ ಪಡೆದುಕೊಂಡಿದ್ದಾರೆ. 1001 ವಿಕೆಟ್ ಪಡೆದಿರುವ ಶೇನ್ ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಅನಿಲ್ ಕುಂಬ್ಳೆ 956 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಮೆಕ್‌ಗ್ರಾಥ್ 949 ವಿಕೆಟ್ ಹಾಗೂ ವಾಸಿಂ ಅಕ್ರಂ 916 ವಿಕೆಟ್ ಪಡೆದು ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ

Story first published: Friday, March 5, 2021, 17:34 [IST]
Other articles published on Mar 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+