ಲಿವಿಂಗ್‌ಸ್ಟೋನ್ ಸ್ಫೋಟಕ ಶತಕ ವ್ಯರ್ಥ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಜಯ

ನ್ಯಾಟಿಂಗ್‌ಹ್ಯಾಮ್: ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 16) ನಡೆದ ಪ್ರವಾಸಿ ಪಾಕಿಸ್ತಾನ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಮೊದಲ ಟಿ20ಐ ಪಂದ್ಯದಲ್ಲಿ ಪಾಕ್ 31 ರನ್‌ಗಳ ಜಯ ಗಳಿಸಿದೆ. ನಾಯಕ ಬಾಬರ್ ಅಝಾಮ್ ಮತ್ತು ಮೊಹಮ್ಮದ್ ರಿಝ್ವಾನ್ ಸ್ಫೋಟಕ ಅರ್ಧಶತಕದೊಂದಿಗೆ ಪಾಕ್ ತಂಡ 3 ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಮೊಹಮ್ಮದ್ ರಿಝ್ವಾನ್ 63 (41), ಬಾಬರ್ ಅಝಾಮ್ 85 (49), ಸೊಹೈಬ್ ಮಕ್ಸೂದ್ 19, ಫಖರ್ ಝಮಾನ್ 26, ಮೊಹಮ್ಮದ್ ಹಫೀಝ್ 24 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 232 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೇಸನ್ ರಾಯ್ 32, ಜಾನಿ ಬೇರ್ಸ್ಟೋವ್ 11, ಲಿಯಾಮ್ ಲಿವಿಂಗ್‌ಸ್ಟೋನ್ 103 (43), ನಾಯಕ ಇಯಾನ್ ಮಾರ್ಗನ್ 16, ಲೂಯಿಸ್ ಗ್ರೆಗರಿ 10, ಡೇವಿಡ್ ವಿಲ್ಲೆ 16 ರನ್‌ನೊಂದಿಗೆ 19.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 201 ರನ್ ಬಾರಿಸಿ ಶರಣಾಯ್ತು.
ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಡೇವಿಡ್ ವಿಲ್ಲೆ 1, ಸಕೀಬ್ ಮಹಮೂದ್ 1, ಟಾಮ್ ಕರನ್ 2, ಲೂಯಿಸ್ ಗ್ರೆಗರಿ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಇಮಾದ್ ವಾಸಿಮ್ 1, ಶಾಹೀನ್ ಅಫ್ರಿದಿ 3 (30 ರನ್), ಮೊಹಮ್ಮದ್ ಹಸನೈನ್ 1, ಶದಾಬ್ ಖಾನ್ 3 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications